Daily Horoscope
✕

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

Krishnaveni K
ಬುಧವಾರ, 17 ಡಿಸೆಂಬರ್ 2025 (08:37 IST)
2026 ರಲ್ಲೂ ಕೆಲವು ರಾಶಿಯವರಿಗೆ ಶನಿ ದೆಸೆಯ ಪ್ರಭಾವ ಕಂಡುಬರಬಹುದು ಎಂದು ಈ ವರ್ಷದ ರಾಶಿಫಲ ಹೇಳುತ್ತದೆ. 2026 ರಲ್ಲಿ ಯಾವೆಲ್ಲಾ ರಾಶಿಯವರಿಗೆ ಶನಿ ದೋಷವಿರಲಿದೆ ಇಲ್ಲಿದೆ ವಿವರ.

ಕಳೆದ ವರ್ಷ ಮಾರ್ಚ್ ನಿಂದ ಮೂರು ರಾಶಿಗಳಿಗೆ ಶನಿಯ ಪ್ರಭಾವ ಆರಂಭವಾಗಿದೆ. ಈ ಮೂರು ರಾಶಿಗಳೆಂದರೆ ಮೇಷ, ಕುಂಭ ಮತ್ತು ಮೀನ ರಾಶಿ. ಆದರೆ ಎಲ್ಲಾ ರಾಶಿಯವರಿಗೂ ಒಂದೇ ರೀತಿಯ ಫಲವಿರುವುದಿಲ್ಲ.

ಮೇಷ ರಾಶಿ: ಈ ರಾಶಿಯವರಿಗೆ ಕಳೆದ ವರ್ಷ ಮಾರ್ಚ್ ನಿಂದ ಸಾಡೇ ಸಾತ್ ಶನಿ ದೆಸೆ ಆರಂಭವಾಗಿದೆ. ಇದು ಏಳೂವರೆ ವರ್ಷಗಳ ಆವೃತ್ತ ಹೊಂದಿದೆ. ಇದೀಗ ಆರಂಭದ ಚರಣದಲ್ಲಿದೆ. ಈ ಆರಂಭಿಕ ಹಂತದಲ್ಲಿ ಆರ್ಥಿಕ ಸಮಸ್ಯೆ, ಮಾನಸಿಕ ವೇದನೆಗಳು, ಸಂಬಂಧಗಳಲ್ಲಿ ವೈಮನಸ್ಯಗಳು, ಅನಿರೀಕ್ಷಿತ ಖರ್ಚು ವೆಚ್ಚಗಳು ಕಂಡುಬರಲಿದೆ.

ಮೀನ ರಾಶಿ: ಈ ರಾಶಿಯವರಿಗೆ ಶನಿ ಮಧ್ಯಾವಧಿಯಲ್ಲಿರುತ್ತಾನೆ. ಇದು ತುಂಬಾ ಸವಾಲಿನ ಸಮಯವಾಗಿದೆ. ಕೆಲಸದಲ್ಲಿ ಸಾಕಷ್ಟು ಅಡೆತಡೆಗಳು ತೊಂದರೆಗಳನ್ನು ಎದುರಿಸಲಿದ್ದೀರಿ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಮಾನಸಿಕ ಒತ್ತಡ ಕಂಡುಬರಬಹುದು.

ಕುಂಭ ರಾಶಿ: ಈ ರಾಶಿಯವರಿಗೆ ಶನಿ ಈ ವರ್ಷ ಕೊನೆಯ ಚರಣದಲ್ಲಿರುತ್ತಾನೆ. ಅಂತಿಮ ಚರಣದಲ್ಲಿ ಶುಭ ಫಲಗಳನ್ನು ಕಾಣುವಿರಿ. ಸಂಬಂಧಗಳು ಸುಧಾರಣೆಯಾಗಲಿದೆ. ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುವ ಲಕ್ಷಣಗಳು ಕಂಡುಬರಲಿದೆ. ಏಳೂವರೆ ಶನಿ ಮುಕ್ತಾಯದ ನೆಮ್ಮದಿ ಕಂಡುಬರುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಸುಬ್ರಹ್ಮಣ್ಯ ಅಪರಾಧ ಕ್ಷಮಾಪಣಾ ಸ್ತೋತ್ರ

ನ್ಯಾಯದ ಅಧಿದೇವತೆ ವಾರಾಹಿ ದೇವಿ ಸ್ತೋತ್ರ ಇಲ್ಲಿದೆ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಶ್ರೀ ಅಷ್ಟಭುಜಾಷ್ಟಕಂ ಸ್ತೋತ್ರ ಪಠಿಸಿ

ಸಾಲಬಾಧೆಯಿಂದ ಮುಕ್ತಿ ಪಡೆಯಲು ಋಣಹರ್ತೃ ಗಣೇಶ ಸ್ತೋತ್ರಮ್ ಪಠಿಸಿ

ಮಾನಸಿಕ ಮತ್ತು ದೈಹಿಕ ಪ್ರಯೋಜನಗಳಿಗಾಗಿ ಶ್ರೀ ದುರ್ಗಾ ಚಂದ್ರಕಳಾ ಸ್ತುತಿ

ಮುಂದಿನ ಸುದ್ದಿ
Show comments