Webdunia - Bharat's app for daily news and videos

Install App

ಧನು ರಾಶಿಯವರಿಗೆ 2025 ರಲ್ಲಿ ಉದ್ಯೋಗದಲ್ಲಿ ಅದೃಷ್ಟ ಖುಲಾಯಿಸುತ್ತದೆ

Krishnaveni K
ಬುಧವಾರ, 20 ನವೆಂಬರ್ 2024 (08:50 IST)
ಬೆಂಗಳೂರು: 2025 ನೇ ವರ್ಷ ಧನು ರಾಶಿಯವರ ಪಾಲಿಗೆ ಉದ್ಯೋಗ ಮತ್ತು ವೃತ್ತಿ ಜೀವನಕ್ಕೆ ಸಂಬಂಧಪಟ್ಟಂತೆ ಉತ್ತಮ ವರ್ಷವಾಗಿರಲಿದೆ. ಉಳಿದ ವಿವರಗಳು ಇಲ್ಲಿದೆ ನೋಡಿ.

ಧನು ರಾಶಿಯವರು ಉತ್ತಮ ಮಾತುಗಾರರಾಗಿರುತ್ತಾರೆ. ಹೀಗಾಗಿ ಈ ರಾಶಿಯವರು ಲಾಯರ್, ಟೀಚರ್, ರಾಯಭಾರಿ, ಮಧ್ಯಸ್ಥಿಕೆ ಮಾಡುವಂತಹ ವೃತ್ತಿಗಳಲ್ಲಿ ಯಶಸ್ಸು ಸಾಧಿಸುತ್ತಾರೆ. 2025 ನೇ ವರ್ಷ ಧನು ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸುವರ್ಣಾವಕಾಶಗಳಿರುತ್ತವೆ.

2025 ರಲ್ಲಿ ಧನು ರಾಶಿಯವರಿಗೆ ಉತ್ತಮ ಉದ್ಯೋಗ, ಉತ್ತಮ ವೇತನ, ಬಡ್ತಿ ಸಿಗುವ ಯೋಗವಿದೆ. ನಿಮ್ಮ ಸ್ನೇಹಿತರಿಂದಲೂ ನಿಮಗೆ ಉದ್ಯೋಗದಲ್ಲಿ ಸಹಾಯ ಸಿಗುವುದು. ವೃತ್ತಿಪರ ಶಿಕ್ಷಣ ಪಡೆಯುತ್ತಿರುವವರಿಗೆ ಇಂಟರ್ನ್ ಶಿಪ್ ಸಿಗಲಿದೆ.

ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಿಮ್ಮ ವೃತ್ತಿ ಜೀವನದಲ್ಲಿ ಬೆಳವಣಿಗೆಗೆ ಪೂರಕವಾದ ವಾತಾವರಣದಲ್ಲಿ ಕೆಲಸ ಮಾಡುವ ಅವಕಾಶಗಳು ಒದಗಿಬರಲಿದೆ. ಉದ್ದಿಮೆದಾರರು, ವ್ಯಾಪಾರಸ್ಥರಿಗೆ ವರ್ಷಾರಂಭದಲ್ಲಿ ಅಷ್ಟೊಂದು ಯಶಸ್ಸು ಇಲ್ಲದೇ ಇದ್ದರೂ ಏಪ್ರಿಲ್ ಬಳಿಕ ಉನ್ನತಿಗೇರುವ ಅವಕಾಶಗಳಿವೆ.

ಆದರೆ ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಕೆಲವೊಂದು ಋಣಾತ್ಮಕ ವಿಚಾರಗಳು ನಿಮ್ಮನ್ನು ಕಾಡಿದರೂ ಉದ್ಯೋಗ ಕ್ಷೇತ್ರದಲ್ಲಿ ನೀವು ಹಾಕುವ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.  ಅಕ್ಟೋಬರ್ ಬಳಿಕ ನಿಮ್ಮ ಸಹೋದ್ಯೋಗಿಗಳು ನಿಮ್ಮ ಬಗ್ಗೆ ಅಸೂಯೆ ಪಡಬಹುದು. ಹೊಸ ಸ್ಪರ್ಧಿಗಳು ಹುಟ್ಟಿಕೊಳ್ಳಬಹುದು. ಆದರೆ ಇದೆಲ್ಲವನ್ನೂ ಎಚ್ಚರಿಕೆಯಿಂದ ನಿಭಾಯಿಸಿದರೆ ವರ್ಷಾಂತ್ಯದಲ್ಲಿ ಉತ್ತಮ ಸ್ಥಾನ ಪಡೆಯಬಹುದು.

ಈ ರಾಶಿಯವರ ಅದೃಷ್ಟ ಸಂಖ್ಯೆ 6,5, 3.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments