Webdunia - Bharat's app for daily news and videos

Install App

Horoscope 2025: ಸಿಂಹ ರಾಶಿಯವರಿಗೆ 2025 ರಲ್ಲಿ ಈ ಫೀಲ್ಡ್ ನಲ್ಲಿ ಉದ್ಯೋಗದಲ್ಲಿದ್ದರೆ ಯಶಸ್ಸು ಗ್ಯಾರಂಟಿ

Krishnaveni K
ಮಂಗಳವಾರ, 19 ನವೆಂಬರ್ 2024 (09:04 IST)
Photo Credit: X
ಬೆಂಗಳೂರು: ಸಿಂಹ ರಾಶಿಯವರು 2025 ರಲ್ಲಿ ಯಾವ ಉದ್ಯೋಗದಲ್ಲಿದ್ದರೆ ಹೆಚ್ಚು ಯಶಸ್ಸು ಕಾಣುತ್ತಾರೆ, ಏನಿದೆ ಶುಭ ಫಲ, ಯಾವ ಗ್ರಹದ ಫಲ ಉತ್ತಮವಾಗಿರುತ್ತದೆ ಇಲ್ಲಿದೆ ವಿವರ.

ಸಿಂಹ ರಾಶಿಯವರೆಂದರೆ ಹೆಸರೇ ಹೇಳುವಂತೆ ನಾಯಕತ್ವದ ಗುಣ ಹೊಂದಿರುತ್ತಾರೆ. ಈ ರಾಶಿಯವರು ಉದ್ದಿಮೆದಾರರಾಗಿ, ಟೀಂ ಲೀಡರ್ ಗಳಾಗಿ, ಉತ್ತಮ ವಾಗ್ಮಿಗಳಾಗಿ ಯಶಸ್ಸು ಕಾಣುತ್ತಾರೆ. ಈ ರಾಶಿಯವರಿಗೆ 2025 ನೇ ವರ್ಷ ಅತ್ಯಂತ ಫಲಪ್ರದವಾಗಿರುತ್ತದೆ. ಇದಕ್ಕೆ ಗುರು ಮತ್ತು ಶನಿಯ ಅನುಗ್ರಹವೂ ಕಾರಣವಾಗಿರುತ್ತದೆ.

ವರ್ಷದ ಆರಂಭದಲ್ಲಿ ಗುರುವಿನ ದೆಸೆಯಿಂದ ಕೌಟುಂಬಿಕ ಮತ್ತು ವೃತ್ತಿ ಜೀವನದಲ್ಲಿ ಕೆಲವೊಂದು ಏರಿಳಿತಗಳು ಕಂಡುಬಂದೀತು. ಆದರೆ ಮೇ ಬಳಿಕ ನಿಮ್ಮ ಅದೃಷ್ಟ ಖುಲಾಯಿಸಿವುದು. ಉದ್ಯೋಗದಲ್ಲಿ ನೀವು ಉನ್ನತಿಗೇರುವುದಲ್ಲದೆ, ನಿಮ್ಮ ಸಂಸ್ಥೆಗೂ ಒಳ್ಳೆಯ ಹೆಸರು ತಂದುಕೊಡುವಿರಿ. ಕೇವಲ ಉದ್ಯೋಗ ಮಾತ್ರವಲ್ಲದೆ, ಉನ್ನತ ವಿದ್ಯಾಭ್ಯಾಸ ಮಾಡಲು ಬಯಸುವವರಿಗೂ ಉತ್ತಮ ಅವಕಾಶಗಳು ಇರಲಿವೆ.

ಆದರೆ ಯಶಸ್ಸಿನ ಹಾದಿಯಲ್ಲಿ ಯಾವುದೇ ಅಧರ್ಮದ ಕೆಲಸಗಳಿಗೆ ಕೈ ಹಾಕಲು ಹೋಗಬೇಡಿ. ನ್ಯಾಯದ ಹಾದಿಯಲ್ಲಿ ನಡೆದರೆ ಉತ್ತಮ. ವರ್ಷದ ಕೊನೆಯಾರ್ಧದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸಿನ ಜೊತೆಗೆ ಸುರಕ್ಷಿತ ಭಾವನೆ ಮೂಡಲಿದೆ. ಉದ್ದಿಮೆಯಲ್ಲಿ ತೊಡಗಿಸಿಕೊಂಡವರಿಗೆ ವರ್ಷದ ಆರಂಭದಲ್ಲಿ ತೊಡಕಿದ್ದರೂ ನಂತರದ ಅವಧಿಯಲ್ಲಿ ವೈಯಕ್ತಿಕ ಬೆಳವಣಿಗೆಗೆ ಅವಕಾಶಗಳು ಸಿಗಲಿವೆ.  ದ್ವಿತೀಯಾರ್ಧದಲ್ಲಿ ಗುರುವಿನ ಅನುಗ್ರಹ ನಿಮ್ಮ ಮೇಲಿರಲಿದೆ.

ನೀವು ಎಷ್ಟು ಪ್ರಭಾವಶಾಲಿಗಳಾಗುವಿರೆಂದರೆ ನಿಮ್ಮ ಶತ್ರುಗಳೂ ನಿಮ್ಮ ಹತ್ತಿರ ಸುಳಿಯಲೂ ಸಾಧ್ಯವಾಗದು. ಮಾರ್ಕೆಟಿಂಗ್, ಮ್ಯಾನೇಜ್ ಮೆಂಟ್ ಹುದ್ದೆಯಲ್ಲಿರುವವರಿಗೆ ಉತ್ತಮ ಅವಕಾಶಗಳಿವೆ. ಶಿಕ್ಷಕ ವೃತ್ತಿಯಲ್ಲಿರುವವರು, ಲಾಯರ್ ವೃತ್ತಿಯಲ್ಲಿರುವವರೂ ಉನ್ನತಿಗೇರುವರು.

ಈ ರಾಶಿಯವರ ಅದೃಷ್ಟ ಸಂಖ್ಯೆ 1,4 ಮತ್ತು 5.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2025: ತುಲಾ ರಾಶಿಯವರು 2025 ರಲ್ಲಿ ವೃತ್ತಿ ಜೀವನದ ಯಶಸ್ಸಿಗೆ ಇದುವೇ ಕೀ

Horoscope 2025: ಕನ್ಯಾ ರಾಶಿಯವರಿಗೆ 2025 ಅಷ್ಟು ಸುಲಭವಲ್ಲ

Horoscope 2025: ಸಿಂಹ ರಾಶಿಯವರಿಗೆ 2025 ರಲ್ಲಿ ಈ ಫೀಲ್ಡ್ ನಲ್ಲಿ ಉದ್ಯೋಗದಲ್ಲಿದ್ದರೆ ಯಶಸ್ಸು ಗ್ಯಾರಂಟಿ

ಕರ್ಕಟಕ ರಾಶಿಯವರಿಗೆ 2025 ರಲ್ಲಿ ಉದ್ಯೋಗದಲ್ಲಿ ಬಡ್ತಿ ಸಿಗುತ್ತಾ ಇಲ್ಲಿದೆ ರಾಶಿಫಲ

Horoscope for 2025: ಮಿಥುನ ರಾಶಿಯವರಿಗೆ 2025 ರಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಿರಲಿದೆ

ಮುಂದಿನ ಸುದ್ದಿ
Show comments