ಹಿಂದೂಗಳ ಪವಿತ್ರಾ ಹಬ್ಬಗಳಲ್ಲಿ ಒಂದಾಗಿರುವ ಮಹಾಶಿವರಾತ್ರಿಯನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ದಿನದಂದು ಶಿವನಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸುವುದರಿಂದ ಅಜ್ಞಾನವೆಂಬ ಕತ್ತಲೆ ದೂರವಾಗಿ ಜ್ಞಾನದ ಬೆಳಕು ಮೂಡುತ್ತದೆ ಎಂಬ ನಂಬಿಕೆಯಿದೆ.
ಈ ದಿನ ಕೇವಲ ಉಪವಾಸ ಮಾಡುವುದು ಮಾತ್ರವಲ್ಲ, ರಾತ್ರಿಯ ಅವಧಿಯನ್ನು ಜಾಗೃತವಾಗಿ ಕಳೆಯುವುದು ಅತ್ಯಂತ ತುಂಬಾ ಮುಖ್ಯ
ಇಲ್ಲಿ ಶಿವರಾತ್ರಿಯಂದು ರಾತ್ರಿ ಮಾಡಲೇಬೇಕಾದ ಪ್ರಮುಖ ಕೆಲ ಅಂಶಗಳ ಬಗ್ಗೆ ಮಾಹಿತಿಯಿದೆ:
ಜಾಗರಣೆ: ರಾತ್ರಿ ಪೂರ್ತಿ ಜಾಗರಣೆ ಕೂರುವುದು. ವೈಜ್ಞಾನಿಕವಾಗಿ ಈ ದಿನ ಭೂಮಿಯ ಉತ್ತರ ಗೋಳಾರ್ಧದಲ್ಲಿ ಶಕ್ತಿಯು ನೈಸರ್ಗಿಕವಾಗಿ ಮೇಲ್ಮುಖವಾಗಿ ಚಲಿಸುತ್ತದೆ, ಆದ್ದರಿಂದ ಮಲಗದೆ ಎಚ್ಚರವಾಗಿದ್ದರೆ ಆ ಶಕ್ತಿಯ ಲಾಭ ಪಡೆಯಬಹುದು.
ಪಂಚಾಕ್ಷರಿ ಮಂತ್ರ ಪಠಣೆ: ರಾತ್ರಿಯಿಡೀ "ಓಂ ನಮಃ ಶಿವಾಯ" ಮಂತ್ರವನ್ನು ಜಪಿಸುವುದು ಅತ್ಯುತ್ತಮ. ಇದು ಮನಸ್ಸನ್ನು ಶಾಂತಗೊಳಿಸಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ನಾಲ್ಕು ಜಾಮದ ಪೂಜೆ: ಶಿವರಾತ್ರಿಯ ರಾತ್ರಿಯನ್ನು ನಾಲ್ಕು ಭಾಗಗಳನ್ನಾಗಿ (ಜಾಮಗಳು) ವಿಂಗಡಿಸಲಾಗುತ್ತದೆ. ಪ್ರತಿ ಜಾಮದಲ್ಲೂ ಶಿವನಿಗೆ ವಿಶೇಷ ಅಭಿಷೇಕ ಮತ್ತು ಪೂಜೆ ಮಾಡುವುದು ಸಂಪ್ರದಾಯ:
ಮೊದಲ ಜಾಮ: ಹಾಲಿನ ಅಭಿಷೇಕ.
ಎರಡನೇ ಜಾಮ: ಮೊಸರಿನ ಅಭಿಷೇಕ.
ಮೂರನೇ ಜಾಮ: ತುಪ್ಪದ ಅಭಿಷೇಕ.
ನಾಲ್ಕನೇ ಜಾಮ: ಜೇನುತುಪ್ಪದ ಅಭಿಷೇಕ.
ಬಿಲ್ವಾರ್ಚನೆ: ಶಿವನಿಗೆ ಅತ್ಯಂತ ಪ್ರಿಯವಾದದ್ದು ಬಿಲ್ವಪತ್ರೆ. "ತ್ರಿಗುಣಾಕಾರಂ ತ್ರಿನೇತ್ರಂಚ" ಎಂದು ಹೇಳಲಾಗುವ ಮೂರು ಎಲೆಗಳ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಜನ್ಮಜನ್ಮಾಂತರದ ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ.
ಧ್ಯಾನ ಮತ್ತು ಮೌನ: ಶಬ್ದಗಳಿಗಿಂತ ಮೌನವಾಗಿ ಶಿವನ ಸ್ವರೂಪವನ್ನು ಧ್ಯಾನಿಸುವುದು ಹೆಚ್ಚು ಶಕ್ತಿಯುತ. ಕನಿಷ್ಠ ಅರ್ಧ ಗಂಟೆಯಾದರೂ ಮೌನವಾಗಿ ಕುಳಿತು ನಿಮ್ಮ ಉಸಿರಾಟದ ಮೇಲೆ ಗಮನಹರಿಸಿ ಧ್ಯಾನ ಮಾಡಿ.