Select Your Language

Notifications

webdunia
webdunia
webdunia
webdunia

ಶಿವರಾತ್ರಿ 2026 ಪೂಜೆ ಯಾವಾಗ ಮಾಡಬೇಕು, ಪ್ರಶಸ್ತ ಸಮಯದ ಮಾಹಿತಿ ಇಲ್ಲಿದೆ

Lord Shiva
ಬೆಂಗಳೂರು: ಈ ಬಾರಿ ಶಿವರಾತ್ರಿ ಯಾವಾಗ, ಯಾವ ಸಮಯದಲ್ಲಿ ಪೂಜೆ ಮಾಡಿದರೆ ಶುಭವಾಗುತ್ತದೆ? ಇಲ್ಲಿದೆ ಶಿವರಾತ್ರಿ ಪೂಜೆಯ ಸಂಪೂರ್ಣ ವಿವರ.

ಈ ಬಾರಿ ಶಿವರಾತ್ರಿ ನಾಳೆ ಅಂದರೆ ಫೆಬ್ರವರಿ 15 ರಂದು ಬರುತ್ತಿದೆ. ಶಿವರಾತ್ರಿ ದಿನ ಶಿವನ ಪೂಜೆ ಮಾಡುವುದರಿಂದ ಆಯಸ್ಸು, ಆರೋಗ್ಯ, ವಿವಾಹಾದಿ ಸಮಸ್ಯೆಗಳು ದೂರವಾಗುತ್ತದೆ. ಅದರಲ್ಲೂ ಈ ದಿನ ಉಪವಾಸವಿದ್ದು ಶಿವ ನಾಮ ಸ್ಮರಣೆ ಮಾಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.

ಅದರಲ್ಲೂ ಶಿವನಿಗೆ ಹಾಲಿನ ಅಭಿಷೇಕ, ಬಿಲ್ವಪತ್ರೆಯಿಂದ ಅರ್ಚನೆ ಮಾಡುವುದು ಅತ್ಯಂತ ಶ್ರೇಯಸ್ಕರ. ಚತುರ್ದಶಿ ತಿಥಿ ನಾಳೆ ಸಂಜೆ 5.04 ರಿಂದ ಸೋಮವಾರ ಸಂಜೆ 5.34 ರವರೆಗಿದೆ. ಅದರಲ್ಲೂ ವಿಶೇಷವಾಗಿ ನಾಳೆ ತಡರಾತ್ರಿ 11.55 ರಿಂದ ನಾಡಿದ್ದು ಬೆಳಿಗ್ಗೆ 12.56 ರವರೆಗಿನ ಸಮಯದಲ್ಲಿ ತಡರಾತ್ರಿ ಪೂಜೆ ಮಾಡಲು ಸೂಕ್ತವಾದ ಕಾಲವಾಗಿದೆ. ಇದು ನಿಶಿತ ಕಾಲವಾಗಿದ್ದು ಶಿವ ಪೂಜೆಗೆ ಪ್ರಶಸ್ತವಾದ ಸಮಯವಾಗಿದೆ.

ಇಂದು ಶಿವ ದೇವಾಲಯಕ್ಕೆ ಭೇಟಿ ನೀಡುವುದಿದ್ದರೆ ಬಿಲ್ವ ಪತ್ರೆ, ಹಾಲು, ಜೇನು ತುಪ್ಪ ಅಥವಾ ಎಳೆನೀರು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಇವುಗಳು ಶಿವನಿಗೆ ಪ್ರಿಯವಾದ ವಸ್ತುಗಳಾಗಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಶನಿ ದೋಷ ನಿವಾರಣೆಗೆ ಇಂದು ಆಂಜನೇಯ ಈ ಮಂತ್ರ ಓದಿ