Daily Horoscope

ಹನುಮಾನ್ ಚಾಲೀಸಾ ಓದುವುದರ ಲಾಭಗಳು

Krishnaveni K
ಶನಿವಾರ, 21 ಸೆಪ್ಟಂಬರ್ 2024 (08:38 IST)
Photo Credit: Facebook
ಬೆಂಗಳೂರು: ಶನಿವಾರವೆಂದರೆ ಶನೀಶ್ವರನ ವಾರವೆಂದು ಅರ್ಥ. ಆಂಜನೇಯನ ಕುರಿತು ಪ್ರಾರ್ಥನೆ ಮಾಡುವುದರಿಂದ ಶನೀಶ್ವರನ ಕೃಪಾಕಟಾಕ್ಷ ಪಡೆಯಬಹುದಾಗಿದೆ. ಹೀಗಾಗಿ ಈ ದಿನ ತಪ್ಪದೇ ಹನುಮಾನ್ ಚಾಲೀಸಾ ಓದಬೇಕು.

ತುಳಸೀದಾಸ ವಿರಚಿತ ಹನುಮಾನ್ ಚಾಲೀಸಾ ಅತ್ಯಂತ ಪವರ್ ಫುಲ್ ಮಂತ್ರವಾಗಿದೆ. ಇದನ್ನು ಶನಿವಾರಗಳಂದು ಓದುವುದರಿಂದ ವಿಶೇಷ ಪ್ರಯೋಜನ ಸಿಗುತ್ತದೆ. ಅದರಲ್ಲೂ ವಿಶೇಷವಾಗಿ ಸಾಡೇ ಸಾತಿಯಂತಹ ಕಷ್ಟಕರ ಶನಿದೋಷದಿಂದ ಬಳಲುತ್ತಿದ್ದರೆ ಹನುಮಾನ್ ಚಾಲೀಸಾ ಓದಬೇಕು.

ಹನುಮಾನ್ ಚಾಲೀಸಾ ಮಂತ್ರವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ನಿರತಂರವಾಗಿ 40 ದಿನಗಳ ಕಾಲ ಪಠಿಸಿದರೆ ನಿಮ್ಮ ಇಷ್ಟಾರ್ಥಗಳು ನೆರವೇರಿ ಜೀವನದಲ್ಲಿ ಯಶಸ್ಸು ಕಾಣುವಿರಿ. ಸಂಜೆ ಅಥವಾ ಬೆಳಗಿನ ಅವಧಿಯಲ್ಲಿ ಹನುಮಾನ್ ಚಾಲೀಸಾ ಓದಲು ಸೂಕ್ತ ಸಮಯವಾಗಿದೆ.

ಇದನ್ನು ಓದುವುದರಿಂದ ನಿಮಗೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ, ಮನಸ್ಸಿನಲ್ಲಿ ಅಧೈರ್ಯ, ಶಂಕೆ ಇದ್ದರೆ, ವೃತ್ತಿ, ವಿದ್ಯಾಭ್ಯಾಸದಲ್ಲಿ ತೊಂದರೆಗಳಿದ್ದರೆ, ಹಣಕಾಸಿನ ವಿಚಾರದಲ್ಲಿ ತೊಂದರೆಗಳಿದ್ದರೆ ನಿವಾರಣೆಯಾಗುವುದು. ಹನುಮಾನ್ ಬುದ್ಧಿವಂತಿಕೆಗೆ ಮತ್ತು ಶೌರ್ಯಕ್ಕೆ ಅಧಿಪತಿ. ಆತನನ್ನು ಕುರಿತು ಮಾಡುವ ಈ ಭಜನೆಯಿಂದ ನೀವು ಕೀರ್ತಿ ಸಂಪಾದಿಸುವಿರಿ. ಜೊತೆಗೆ ಅಪಘಾತ ಭಯ, ಮಾನಸಿಕ ಒತ್ತಡಗಳೂ ಇದನ್ನು ಪಠಿಸುವುದರಿಂದ ದೂರವಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments