Publish Date: Wed, 29 Jul 2026 (16:53 IST)
Updated Date: Wed, 29 Jul 2026 (16:56 IST)
ಹಿಂದೂ ಧರ್ಮದಲ್ಲಿ ಬಹಳ ಪ್ರಮುಖವಾದ ಗುರು ಪೂರ್ಣಿಮೆ ದಿನದಂದು ಹಿಂದೂಗಳ ಬಹಳ ಶ್ರದ್ಧೆ ಭಕ್ತಿಯಿಂದ ಈ ದಿನವನ್ನು ಆಚರಿಸುತ್ತಾರೆ. ಈ ದಿನದಂದು ನಾವು ಮಾಡುವ ಪೂಜಾ ವಿಧಾನಗಳು ನಮಗೆ ತುಂಬಾ ಒಳ್ಳೆಯದು ಆಗುತ್ತದೆ ಎಂಬ ನಂಬಿಕೆ.
೧. ಪೂಜೆಗೆ ಬೇಕಾಗುವ ಅಗತ್ಯ ಸಾಮಗ್ರಿಗಳು:
ಗುರು ಅಥವಾ ಇಷ್ಟದೈವದ ಭಾವಚಿತ್ರ/ಮೂರ್ತಿ
ಹೂವು ಮತ್ತು ತುಳಸಿ/ಗರಿಕೆ
ಹರಿಶಿನ, ಕುಂಕುಮ, ಅಕ್ಷತೆ
ದೀಪ, ಎಣ್ಣೆ/ತುಪ್ಪ, ಬತ್ತಿ, ಕರ್ಪೂರ, ಧೂಪ (ಅಗರಬತ್ತಿ)
ನೈವೇದ್ಯಕ್ಕೆ: ಹಣ್ಣುಗಳು, ಸಿಹಿ ತಿಂಡಿ (ಪಾಯಸ, ಕಜ್ಜಾಯ, ಅಥವಾ ಬೆಲ್ಲ-ಕಾಯಿತುರಿ)
ಗಂಧ (ಚಂದನ) ಹಾಗೂ ಪಂಚಾಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ - ಐಚ್ಛಿಕ)
೨. ಸಂಜೆ ಪೂಜಾ ವಿಧಾನ:
ಶುಚಿತ್ವ ಹಾಗೂ ಸಿದ್ಧತೆ:
ಸಂಜೆ ಕೈ-ಕಾಲು ತೊಳೆದು ಅಥವಾ ಸ್ನಾನ ಮಾಡಿ, ಮಡಿ/ಶುಚಿಯಾದ ವಸ್ತ್ರ ಧರಿಸಿ.
ಪೂಜಾ ಸ್ಥಳವನ್ನು ಶುಚಿಗೊಳಿಸಿ, ರಂಗೋಲಿ ಹಾಕಿ.
ದೀಪ ಪ್ರಜ್ವಲನೆ:
ಪೂಜಾ ಮಂಟಪದಲ್ಲಿ ಗುರುಗಳ (ಉದಾಹರಣೆಗೆ: ರಾಘವೇಂದ್ರ ಸ್ವಾಮಿಗಳು, ಸಾಯಿಬಾಬಾ, ಶಂಕರಾಚಾರ್ಯರು ಅಥವಾ ನಿಮ್ಮ ಕುಲಗುರುಗಳು) ಚಿತ್ರ/ಮೂರ್ತಿಯನ್ನಿಟ್ಟು ಅಲಂಕರಿಸಿ.
ಮೊದಲು ಹಣತೆಯಲ್ಲಿ ದೀಪವನ್ನು ಹಚ್ಚಿ, ದೀಪಕ್ಕೆ ನಮಸ್ಕರಿಸಿ.
ಸಂಕಲ್ಪ ಹಾಗೂ ಪ್ರಾರ್ಥನೆ:
ಕೈಯಲ್ಲಿ ಅಕ್ಷತೆ ಮತ್ತು ಹೂವು ಹಿಡಿದು, ಮನಸ್ಸಿನಲ್ಲಿ ಗುರುಗಳನ್ನು ಸ್ಮರಿಸಿ ಸಂಕಲ್ಪ ಮಾಡಿ.
ಗುರುಗಳಿಗೆ ಗಂಧ, ಅರಿಶಿನ, ಕುಂಕುಮ ಹಚ್ಚಿ, ಹೂವುಗಳಿಂದ ಅಲಂಕರಿಸಿ.
ಗುರು ಸ್ತೋತ್ರ / ಮಂತ್ರ ಪಠಣೆ:
ಈ ಪ್ರಸಿದ್ಧ ಗುರು ಶ್ಲೋಕವನ್ನು ಪಠಿಸಿ:
"ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||"
ನಿಮ್ಮ ಗುರುಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಿ (ಉದಾ: ಓಂ ಶ್ರೀ ರಾಘವೇಂದ್ರಾಯ ನಮಃ / ಓಂ ಸಾಯಿ ರಾಮ್ / ಓಂ ಶ್ರೀ ಗುರುಭ್ಯೋ ನಮಃ).
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ