ಬೆಂಗಳೂರು: ದುರ್ಗಾ ಅಷ್ಟೋತ್ತರ ಶತನಾಮಾವಳಿ 108 ಸಾಲುಗಳನ್ನು ಹೊಂದಿದ್ದು ಇದನ್ನು ಕನ್ನಡದಲ್ಲಿ ಓದಿ ಮತ್ತು ಅದರ ಫಲಗಳೇನು ತಿಳಿದುಕೊಳ್ಳಿ.
ದುರ್ಗಾದೇವಿಯ ಸ್ತೋತ್ರವನ್ನು ಓದುವುದರಿಂದ ನಮಗೆ ಮನಸ್ಸಿನಲ್ಲಿರುವ ಅಧೈರ್ಯ, ಶತ್ರು ಭಯ ನಾಶವಾಗಿ ಧೈರ್ಯ ಮೂಡುತ್ತದೆ. ದುರ್ಗೆಯನ್ನು ಶತ್ರುಸಂಹಾರಿ ಎಂದೇ ಕರೆಯಲಾಗುತ್ತದೆ. ಹೀಗಾಗಿ ದುರ್ಗಾ ದೇವಿಯ ಮಂತ್ರ ಪಠಿಸುವುದರಿಂದ ಮನಸ್ಸಿಗೆ ಒಂದು ರೀತಿಯ ರಕ್ಷಣೆ ಸಿಕ್ಕಂತಾಗುತ್ತದೆ. ಸಕಾರಾತ್ಮಕ ಮನೋಭಾವ, ಏಕಾಗ್ರತೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಈ ಶತನಾಮಾವಳಿಯನ್ನು ತಪ್ಪದೇ ಓದಿ.