ಕನಸಿನಲ್ಲಿ ಹಣ್ಣು, ಫಲ ಬಂದರೆ ಜ್ಯೋತಿಷ್ಯ ಪ್ರಕಾರ ಅರ್ಥ ಹೀಗೆ ಅರ್ಥ

Krishnaveni K
ಶುಕ್ರವಾರ, 23 ಫೆಬ್ರವರಿ 2024 (09:12 IST)
ಬೆಂಗಳೂರು: ಪ್ರತಿನಿತ್ಯ ನಿದ್ರೆ ಮಾಡಿದಾಗ ಒಂದಲ್ಲಾ ಒಂದು ಕನಸು ನಮಗೆ ಬಂದೇ ಬರುತ್ತದೆ. ಕೆಲವೊಮ್ಮೆ ಶುಭ ಕನಸುಗಳಾದರೆ ಕೆಲವೊಮ್ಮೆ ಕೆಟ್ಟ ಕನಸುಗಳು ನಮ್ಮ ಮನಸ್ಸನ್ನು ಕದಡುವಂತೆ ಮಾಡುತ್ತದೆ.

ಕೆಲವೊಂದು ವಸ್ತುಗಳನ್ನು ಕನಸಿನಲ್ಲಿ ನೋಡಿದರೆ ನಮಗೆ ಶುಭ ಫಲ ಗ್ಯಾರಂಟಿ ಎನ್ನುತ್ತದೆ ಜ್ಯೋತಿಷ್ಯಾಸ್ತ್ರ. ಶಾಸ್ತ್ರದ ಪ್ರಕಾರ ನಾವು ಕಾಣುವ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಹಾಗಿದ್ದರೆ ಕನಸಿನಲ್ಲಿ ಫಲ, ಪುಷ್ಪ ಕಂಡರೆ ಏನು ಅರ್ಥ ಎಂದು ನಿಮಗೆ ತಿಳಿದಿದೆಯೇ?

ಕೆಲವೊಮ್ಮೆ ಯಾರೋ ನಮಗೆ ಹಣ್ಣು ನೀಡಿದಂತೆ ಅಥವಾ ಹಣ್ಣುಗಳನ್ನು ಸವಿದಂತೆ, ನೋಡಿದಂತೆ ಕನಸು ಬೀಳುವುದು ಇದೆ. ಕನಸಿನಲ್ಲಿ ಫಲ-ಪುಷ್ಪ ಬಂದರೆ ಅದನ್ನು ಶುಭ ಫಲ ಎಂದೇ ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಹಣ್ಣು ಕಂಡುಬಂದರೆ ನಮಗೆ ಅದೃಷ್ಟ, ಸಂತೋಷ, ಐಶ್ವರ್ಯಾಭಿವೃದ್ಧಿಗಳು ಸದ್ಯದಲ್ಲೇ ಬರಲಿದೆ ಎಂದು ಅರ್ಥ.  ಅಲ್ಲದೆ, ಅನಿರೀಕ್ಷಿತವಾಗಿ ಹಣಕಾಸಿನ ಆಗಮನ, ನಿಮ್ಮ ಆರ್ಥಿಕ ಸ್ಥಿತಿಗತಿಗಳು ಸುಧಾರಿಸುತ್ತವೆ ಎಂದು ಅಂದುಕೊಳ್ಳಬಹುದು. ಅಲ್ಲದೆ ನೀವು ಬಹುದಿನಗಳಿಂದ ಆಸೆಪಡುತ್ತಿದ್ದ ವಸ್ತು, ಆಸ್ತಿ ನಿಮ್ಮದಾಗುವ ಲಕ್ಷಣಗಳಾಗಿವೆ.

ಅದರಲ್ಲೂ ವಿಶೇಷವಾಗಿ ಬಾಳೆಹಣ್ಣು ಕಂಡರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ದ್ರಾಕ್ಷಿ ಕಂಡರೆ ನಿಮ್ಮ ದೇಹ ಸೌಖ್ಯ ಸುಧಾರಿಸುತ್ತದೆ. ದಾಳಿಂಬೆ ಕಂಡಲ್ಲಿ ಆರ್ಥಿಕವಾಗಿ ಸಬಲರಾಗುತ್ತೀರಿ. ಕಿತ್ತಳೆ ಹಣ‍್ಣು ಕಂಡರೆ ನಿಮ್ಮ ಸ್ಥಾನಮಾನ ವೃದ್ಧಿಯಾಗುತ್ತದೆ ಎಂದರ್ಥ. ಹೀಗಾಗಿ ಕನಸಿನಲ್ಲಿ ಹಣ್ಣುಗಳನ್ನು ಕಂಡರೆ ಖುಷಿಪಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಮುಂದಿನ ಸುದ್ದಿ
Show comments