ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ಕೆಲಸ. ಆದರೆ ಕೆಲವೊಂದು ವಸ್ತುಗಳನ್ನು ದಾನ
ಮಾಡದೇ ಇರುವುದೇ ನಿಮಗೆ ಶ್ರೇಯಸ್ಕರವಾಗಿದೆ. ಅಂತಹ ಐದು ವಸ್ತುಗಳು ಯಾವುವು ಎಂದು ನೋಡೋಣ.
ತಾಳಿ ಸರ, ಕಾಲುಂಗುರ: ಹೆಣ್ಣು ಮಕ್ಕಳಿಗೆ ತಮ್ಮ ಆಭರಣಗಳನ್ನು ಹಂಚಿಕೊಳ್ಳುವ ಅಭ್ಯಾಸವಿರುತ್ತದೆ. ಹಾಗಂತ ಯಾವುದೇ ಕಾರಣಕ್ಕೂ ನಿಮ್ಮ ತಾಳಿ ಸರ ಮತ್ತು ಕಾಲುಂಗುರವನ್ನು ಇನ್ನೊಬ್ಬರಿಗೆ ಹಾಕಿಕೊಳ್ಳಲು ಕೊಡಬೇಡಿ. ಇದರಿಂದ ನಿಮ್ಮ ಸೌಭಾಗ್ಯವನ್ನು ಇತರರಿಗೆ ನೀಡಿದಂತೆ.
ಚಾಕುವಿನಂತಹ ಹರಿತ ಆಯುಧಗಳು: ಚಾಕು, ಚೂರಿಯಂತಹ ಹರಿತ ಆಯುಧಗಳನ್ನು ಇತರರಿಗೆ ದಾನ ಮಾಡಿದರೆ ಅದರಿಂದ ನಿಮ್ಮ ಸಂಬಂಧ ಕಡಿದುಕೊಂಡತಾಗಬಹುದು. ಈ ವಸ್ತುಗಳು ದಾನ ಮಾಡಲು ಅಶುಭವಾಗಿದೆ. ಹೀಗಾಗಿ ಇವುಗಳನ್ನು ಎಂದಿಗೂ ದಾನ ಮಾಡಬೇಡಿ.
ಕರ್ಚೀಫ್: ನೀವು ಬಳಸುವ ಕರ್ಚೀಫ್ ಕೂಡಾ ಯಾರಿಗೂ ದಾನ ಮಾಡುವಂತಿಲ್ಲ. ಇದರಿಂದ ನಿಮ್ಮ ಮುಖ, ಹಣೆಯನ್ನು ಒರೆಸಿಕೊಳ್ಳುತ್ತಿರುತ್ತೀರಿ. ಇದನ್ನು ದಾನ ಮಾಡುವುದರಿಂದ ನಿಮ್ಮ ಹಣೆಯಲ್ಲಿರುವ ಅದೃಷ್ಟ ರೇಖೆ ಇನ್ನೊಬ್ಬರ ಪಾಲಾಗಬಹುದು.
ಬೆಂಕಿ ಕಡ್ಡಿಗಳು: ಹೆಸರೇ ಹೇಳುವಂತೆ ಇದು ಬೆಂಕಿ ಹಚ್ಚಲು ನೆರವಾಗುವ ಸಾಧನ. ಇದನ್ನು ದಾನ ಮಾಡುವುದರಿಂದ ಇಬ್ಬರ ನಡುವಿನ ಸಂಬಂಧ ಹಾಳಾಗಬಹುದು ಎಂಬುದು ನಂಬಿಕೆ.
ಅಕ್ವೇರಿಯಂ: ನಿಮ್ಮ ಪರಿಚಿತರ ಮನೆಗೆ ಹೋದಾಗ ಅಕ್ವೇರಿಯಂ ಇಷ್ಟವಾಯಿತೆಂದು ದಾನದ ರೂಪದಲ್ಲಿ ತಂದುಬಿಡಬೇಡಿ. ಅಥವಾ ನೀವು ಯಾರಿಗೂ ಕೊಡಬೇಡಿ. ಅಕ್ವೇರಿಯಂನನ್ನು ದಾನ ಮಾಡಿದರೆ ನಿಮ್ಮ ಬಳಿಯಿರುವ ಸಂಪತ್ತು ಮತ್ತು ಅದೃಷ್ಟ ಇತರರಿಗೆ ದಾನ ಮಾಡಿದಂತೆ.