Publish Date: Wed, 25 Dec 2019 (06:19 IST)
Updated Date: Wed, 25 Dec 2019 (06:21 IST)
ಬೆಂಗಳೂರು : ಡಿಸೆಂಬರ್ 26ರಂದು ಅಮವಾಸ್ಯೆಯ ಜೊತೆಗೆ ಸೂರ್ಯಗ್ರಹಣ ಇದೆ. ಈ ವಿಶೇಷವಾದ ದಿನದ ಹಿಂದಿನ ದಿನ ಮನೆಯಲ್ಲಿ ನಿಂಬೆಹಣ್ಣಿನಿಂದ ಈ ಒಂದು ಕೆಲಸ ಮಾಡಿದರೆ ನಿಮ್ಮ ಮನೆಯ ಸಕಲ ದೋಷ ಕಳೆಯುತ್ತೆ, ದೃಷ್ಟಿ ದೋಷ ದೂರವಾಗುತ್ತದೆ.
ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ದೇವರ ಮನೆಯಲ್ಲಿಟ್ಟು ಡಿಸೆಂಬರ್ 25 ರಂದು ಬೆಳಿಗ್ಗೆ ಅಥವಾ ಸಂಜೆ ಪೂಜೆಯನ್ನು ಮಾಡಿ ಬಳಿಕ ಒಂದು ತಟ್ಟೆಯ ಮೇಲಿಟ್ಟು ನಿಂಬೆ ಹಣ್ಣನ್ನು 2 ಭಾಗವಾಗಿ ಕಟ್ ಮಾಡಬೇಕು. ಆ ನಿಂಬೆ ಹಣ್ಣಿನ 2 ಭಾಗಗಳ ಮೇಲ್ಭಾಗದ ತುಂಬಾ ಕುಂಕುಮವನ್ನು ಹಚ್ಚಿ ಮನೆಯ ಹೊಸ್ತಿಲ ಮೇಲೆ ಇಡಬೇಕು.
ಆಮೇಲೆ ಡಿ.26ರಂದು ಗ್ರಹಣ ಮುಗಿದ ನಂತರ ಮನೆ ಸ್ವಚ್ಚ ಮಾಡಿದ ಬಳಿಕ ಈ ನಿಂಬೆಹಣ್ಣನ್ನು ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಎಸೆದು ಬರಬೇಕು. ಬಳಿಕ ಮನೆಯೊಳಗೆ ಬರುವ ಮುಂಚೆ ಕೈಕಾಲು ತೊಳೆದು ಮನೆಯೊಳಗೆ ಪ್ರವೇಶಿಸಬೇಕು.