Select Your Language

Notifications

webdunia
webdunia
webdunia
webdunia

ನಮ್ಮ ಹಿಂದೂ ಸಂಪ್ರದಾಯದಲ್ಲಿ ಉಡಿದಾರ ಕಟ್ಟುವುದು ಯಾಕೆ ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಉಡಿದಾರ ಕಟ್ಟುವುದು ಯಾಕೆ ಗೊತ್ತಾ?
ಬೆಂಗಳೂರು , ಶನಿವಾರ, 26 ಮೇ 2018 (06:21 IST)
ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ನಾನಾ ರೀತಿಯ ಆಚರಣೆಗಳು, ಸಂಪ್ರದಾಯಗಳು ಅನಾದಿ ಕಾಲದಿಂದ ಹರಿದುಬರುತ್ತಿದೆ. ಅದರಲ್ಲಿ ಏನೋ ಒಂದು ಅರ್ಥ, ವೈಜ್ಞಾನಿಕ ಕಾರಣ ಅಡಗಿರುತ್ತದೆ. ನಾವು ಧರಿಸುವ ಪ್ರತಿ ವಸ್ತುವೂ ಆರೋಗ್ಯದ ಜತೆಗೆ ವಿಕಾಸಕ್ಕೂ ಕಾರಣವಾಗುತ್ತದೆ. ಕೊನೆಗೆ ಉಡಿದಾರ ಧರಿಸುವುದರ ಹಿಂದೆ ಸಹ ಒಂದು ಆಂತರಿಕ ಸತ್ಯ ಅಡಗಿದೆ. ಅದೇನು ಅಂತ ನೋಡೋಣ ಬನ್ನಿ.


ಇತ್ತೀಚಿನ ದಿನಗಳಲ್ಲಿ ಯಾರು ಉಡಿದಾರವನ್ನು ಕಟ್ಟಿಕೊಳ್ಳುವುದಿಲ್ಲ. ಆದರೆ ಉಡಿದಾರ ಧರಿಸುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಭಾಗ. ಯಾಕೆಂದರೆ ಹಿಂದೂಗಳಲ್ಲಿ ಪ್ರತಿ ಪುರುಷರನೂ ಇದನ್ನು ಧರಿಸಬೇಕು. ಚಿಕ್ಕಮಕ್ಕಳಿಗೆ ಉಡಿದಾರ ಕಟ್ಟಿದರೆ ಅವರ ಬೆಳವಣಿಗೆ ಸಮಯದಲ್ಲಿ ಮೂಳೆಗಳು, ಸ್ನಾಯುಗಳು ಸರಿಯಾದ ರೀತಿಯಲ್ಲಿ ಬೆಳವಣಿಗೆ ಹೊಂದುತ್ತವಂತೆ. ಮುಖ್ಯವಾಗಿ ಗಂಡು ಮಕ್ಕಳಲ್ಲಿ ಬೆಳವಣಿಗೆ ಸಮಯದಲ್ಲಿ ಪುರುಷಾಂಗ ಯಾವುದೇ ಅಸಮತೋಲನಕ್ಕೆ ಗುರಿಯಾಗದೆ ಸರಿಯಾಗಿ ಬೆಳವಣಿಗೆ ಹೊಂದಲು ಇದು ಸಹಕಾರಿಯಾಗುತ್ತದಂತೆ. ಅದಕ್ಕಾಗಿ ಉಡಿದಾರ ಕಟ್ಟುತ್ತಾರೆ.


ಉಡಿದಾರ ಕಟ್ಟಿಕೊಂಡರೆ ರಕ್ತ ಸಂಚಲನೆ ಸಹ ಉತ್ತಮಗೊಳ್ಳುತ್ತದೆ. ಪುರುಷರಲ್ಲಿ ಹರ್ನಿಯಾ ಬರದಂತೆ ಉಡಿದಾರ ಕಾಪಾಡುತ್ತದೆ. ಇದನ್ನು ಕೆಲವು ವಿಜ್ಞಾನಿಗಳೂ ನಿರೂಪಿಸಿದ್ದಾರೆ. ನಮ್ಮಲ್ಲಿ ಚಿಕ್ಕಮಕ್ಕಗಳಿಗೆ ಹೆಚ್ಚಾಗಿ ಬೆಳ್ಳಿಯಿಂದ ಮಾಡಿದ ಉಡಿದಾರ ಕಟ್ಟುವುದು ಅನಾದಿಕಾಲದಿಂದ ಬರುತ್ತಿರುವ ಸಂಪ್ರದಾಯ. ಯಾವುದೇ ರೀತಿಯ ಉಡಿದಾರ ಕಟ್ಟಿದರೂ ಉಪಯೋಗ ಇರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಮುಂದೆ ದೀಪವನ್ನು ಹೇಗೆ ಬೆಳಗಬೇಕು ಗೊತ್ತಾ...?