Select Your Language

Notifications

webdunia
webdunia
webdunia
webdunia

ಈ ವಸ್ತುಗಳು ನಿಮ್ಮ ಕೈಯಿಂದ ಜಾರಿ ನೆಲದ ಮೇಲೆ ಚಲ್ಲಿದರೆ ಏನರ್ಥ ಗೊತ್ತಾ?

ಈ ವಸ್ತುಗಳು ನಿಮ್ಮ ಕೈಯಿಂದ ಜಾರಿ ನೆಲದ ಮೇಲೆ ಚಲ್ಲಿದರೆ ಏನರ್ಥ ಗೊತ್ತಾ?
ಬೆಂಗಳೂರು , ಶುಕ್ರವಾರ, 11 ಜನವರಿ 2019 (07:27 IST)
ಬೆಂಗಳೂರು : ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳು ಆಕಸ್ಮಿಕವಾಗಿ ಕೈಯಿಂದ ಜಾರಿ ನೆಲಕ್ಕೆ ಬಿದ್ದರೆ ಅದು ಅಶುಭದ ಸಂಕೇತ ಎಂದು ಹೇಳಲಾಗುತ್ತದೆ. ಹಾಗಾದ್ರೆ ಯಾವ ವಸ್ತುಗಳು ನೆಲದ ಮೇಲೆ ಬಿದ್ದರೆ ಅದು ಯಾವುದರ ಸಂಕೇತ ಎಂಬುದನ್ನು ತಿಳಿಯೋಣ.

ಹಾಲನ್ನು ಚಂದ್ರನಿಗೆ ಹೋಲಿಕೆ ಮಾಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಲೆ ಮೇಲಿಟ್ಟ ಹಾಲು  ಉಕ್ಕಿದ್ರೆ ಸುಖ-ಸಮೃದ್ಧಿ ಹಾಳಾಗುತ್ತದೆ ಎಂದರ್ಥ. ಕುಟುಂಬದ ಸದಸ್ಯರ ಮಧ್ಯೆ ಜಗಳಕ್ಕೂ ಇದು ಕಾರಣವಾಗುತ್ತದೆ. ಹಾಗೇ ಹಾಲು ಅಥವಾ ಹಾಲಿನಿಂದ ಮಾಡಿದ ಪದಾರ್ಥ ಕೈ ತಪ್ಪಿ ಕೆಳಗೆ ಬಿದ್ರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತದೆ ಎಂದರ್ಥ.

 

ಕೈನಲ್ಲಿರುವ ಉಪ್ಪು ಕೆಳಗೆ ಬಿದ್ರೆ ನಿಮ್ಮ ಜಾತದಲ್ಲಿ ಶುಕ್ರ ಹಾಗೂ ಚಂದ್ರ ದುರ್ಬಲರಾಗಿದ್ದಾರೆ ಎಂದರ್ಥ. ಕಾಳು ಮೆಣಸು ಕೈ ತಪ್ಪಿ ಕೆಳಗೆ ಬಿದ್ರೆ ನಿಕಟ ಸಂಬಂಧಿ ಹಾಗೂ ನಿಮ್ಮ ಮಧ್ಯೆ ಇರುವ ಸಂಬಂಧ ಹಾಳಾಗುತ್ತದೆ. ಗೋಧಿ, ಅಕ್ಕಿ ಅಥವಾ ಇತರ ಆಹಾರ ಪದಾರ್ಥ ಕೆಳಗೆ ಬಿದ್ರೆ ತಾಯಿ ಅನ್ನಪೂರ್ಣೆ ಮುನಿಸಿಕೊಂಡಿದ್ದಾಳೆ ಎಂದರ್ಥ. ಬೇಳೆ ಕಾಳುಗಳು ಕೆಳಗೆ ಬಿದ್ರೆ ಅದನ್ನು ಕೈನಲ್ಲಿ ಹಿಡಿದುಕೊಂಡು ಕ್ಷಮೆ ಕೇಳಬೇಕಂತೆ. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಎದುರಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


 

 

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಶನಿವಾರ ಹೀಗೆ ಮಾಡುವುದರಿಂದ ಶನಿಪ್ರಭಾವ ಕಡಿಮೆಯಾಗುತ್ತದೆ