Webdunia - Bharat's app for daily news and videos

Install App

ಶುಕ್ರವಾರದಂದು ಸುಮಂಗಲಿಯರು ಕರ್ಪೂರದಿಂದ ಹೀಗೆ ಮಾಡಿದರೆ ಧನಪ್ರಾಪ್ತಿ ಆಗುತ್ತದೆಯಂತೆ

Webdunia
ಭಾನುವಾರ, 28 ಅಕ್ಟೋಬರ್ 2018 (14:08 IST)
ಬೆಂಗಳೂರು : ಕೆಲವರು ತಮ್ಮ ಗುರಿ, ಸಾಧನೆಗಳನ್ನು ಮಾಡಿ ಹಣವಂತರಾಗುತ್ತಾರೆ. ಆದರೆ ಇನ್ನು ಕೆಲವರಿಗೆ ತಾವು ಮಾಡುವ ಕೆಲಸದಲ್ಲಿ ಧನಪ್ರಾಪ್ತಿ ಆಗಬೇಕೆಂದರೆ ಈ ನಿಯಮವನ್ನು ತಪ್ಪದೇ ಪಾಲಿಸಿ.


ಕರ್ಪೂರದಿಂದ ಯಾರಿಗೂ ಹೇಳದೆ ಪೂರ್ತಿ ನಂಬಿಕೆಯಿಂದ ಹೀಗೆ ಮಾಡಿದರೆ ವ್ಯಾಪಾರದಲ್ಲಿ ವಿಜಯ ಸಿಗುತ್ತದೆ, ಬೆಳಗ್ಗಿನ ಜಾವ ಎದ್ದೇಳುವ ಸಮಯದಲ್ಲಿ ನಿಮ್ಮ ಐಷ್ಟ ದೈವವನ್ನು ಸ್ಮರಿಸುತ್ತಾ ಎದ್ದೇಳಬೇಕು, ಸೂರ್ಯೋದಯಕ್ಕೂ ಮುಂಚೆ ಸ್ನಾನ ಮಾಡಿ ಮನೆಯನ್ನ ಸ್ವಚ್ಛ ಮಾಡಿಕೊಳ್ಳ ಬೇಕು. ನಂತರ ಒಂದು ಹೊಸ ಕೆಂಪು ಬಣ್ಣದ ವಸ್ತ್ರವನ್ನು ತೆಗೆದುಕೊಂಡು ಹಾಗೆಯೇ ಎರಡು ಕರ್ಪೂರವನ್ನ ತೆಗೆದು ಕೊಳ್ಳಬೇಕು, ಬಳಿಕ ಇದನ್ನು ಲಕ್ಷ್ಮಿ ದೇವಿಯ ವಿಗ್ರಹ ಮುಂದೆ ಇತ್ತು ತುಪ್ಪದ ದೀಪವನ್ನ ಹಚ್ಚಿ ದೀಪಾರಾಧನೆ ಮಾಡಬೇಕು. ನಾವು ಅಂದುಕೊಂಡ ಕೆಲಸ ಮತ್ತು ಧನಪ್ರಾಪ್ತಿ ತ್ವರಿತವಾಗಿ ಸಿಗಬೇಕು ಎಂದು ಸಂಕಲ್ಪ ಮಾಡಿಕೊಳ್ಳಬೇಕು, ನಂತರ ಆ ಕರ್ಪೂರವನ್ನು ಕೆಂಪು ಬಣ್ಣದ ವಸ್ತ್ರದಲ್ಲಿ ಮೂಟೆ ಕಟ್ಟಾ ಬೇಕು, ಈ ಮೂಟೆಯನ್ನ ನೀವು ನಗದು ಅಥವ ಬಂಗಾರವನ್ನು ಇಡುವ ಜಾಗದಲ್ಲಿ ಇಡಬೇಕು.


ಆದರೆ ಈ ವಿಷಯವನ್ನ ಮನೆಯ ಕುಟುಂಬದವರ ಜೊತೆಯಲ್ಲೂ ಹೇಳಬಾರದು, ಹೀಗೆ ಮಾಡಿದ ಕೆಲ ದಿನಗಳಲ್ಲೇ ನೀವು ಅಭಿವೃದ್ದಿಯನ್ನ ಕಾಣ ಬಹುದ, ಹಾಗು ಈ ನಿಮಯಗಳನ್ನ ಖಚಿತವಾಗಿ ಸುಮಂಗಲಿಯರು ಮಾತ್ರವೇ ಮಾಡಬೇಕು, ಇದನ್ನ ವಾರದಲ್ಲಿ ಒಂದು ಬಾರಿ ಅಂದರೆ ಶುಕ್ರವಾರ ಮಾಡಿದರೆ ಒಳ್ಳೆಯದು ಎಂದು ಶಾಸ್ತ್ರಗಳು ಹೇಳುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಲಭೈರವ ಸ್ತೋತ್ರ ಓದುವುದರ ಮೂರು ಮುಖ್ಯ ಉಪಯೋಗಗಳು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Sade Sati Shani 2025: 2025 ರಲ್ಲಿ ಸಾಡೇ ಸಾತಿ ಶನಿ ಇರುವವರು ಈ ಪರಿಹಾರ ಮಾಡಿ

Sade Sati Shani 2025: ಶನಿ ದೆಶೆಯ ಮೂರು ಚರಣಗಳು ಮತ್ತು ಅದರ ಪರಿಣಾಮಗಳು

Sade Sati Shani 2025: 2025 ರಲ್ಲಿ ಸಾಡೇಸಾತಿ ಶನಿ ಯಾರಿಗೆಲ್ಲಾ ಇದೆ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments