Select Your Language

Notifications

webdunia
webdunia
webdunia
webdunia

ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಲು ಪೂರ್ವದಿಕ್ಕಿನಲ್ಲಿ ಮಡಿಕೆಯನಿಟ್ಟು ಹೀಗೆ ಮಾಡಿ

ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಲು ಪೂರ್ವದಿಕ್ಕಿನಲ್ಲಿ ಮಡಿಕೆಯನಿಟ್ಟು ಹೀಗೆ ಮಾಡಿ
ಬೆಂಗಳೂರು , ಗುರುವಾರ, 10 ಜನವರಿ 2019 (07:46 IST)
ಬೆಂಗಳೂರು : ಕೆಲ ವಸ್ತುಗಳನ್ನು ಮನೆಯಲ್ಲಿ ಇಡುವುದು ಎಷ್ಟು ದಾರಿದ್ರ್ಯವು ಹಾಗೆಯೇ ಇನ್ನು ಕೆಲ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅದೃಷ್ಟ ಒಲಿಯುತ್ತದೆ. ಹಾಗೇ ಆ ಅದೃಷ್ಟದ ವಸ್ತುಗಳು ಇರಬೇಕಾದ ಸ್ಥಳದಿಂದ ಬೇರೆ ಸ್ಥಳದಲ್ಲಿ ಇಟ್ಟರೆ ಸಹ ದುರಾದೃಷ್ಟ ತಾಂಡವಾಡುತ್ತದೆ.


ಮುಖ್ಯವಾಗಿ ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ  ಭಾರಗಳನ್ನು ಇಡಬಾರದು. ಹಾಗೇ ಈಶಾನ್ಯ ದಿಕ್ಕನ್ನು ಯಾವಾಗಲೂ ಖಾಲಿ ಬಿಡಬೇಕು. ಹೀಗೆ ಖಾಲಿ ಬಿಟ್ಟರೆ ಧನ ಸಮೃದ್ದಿ ಆಗುತ್ತದೆ. ಅದೇರೀತಿ ಮನೆಯ ಪೂರ್ವ ದಿಕ್ಕಿನಲ್ಲಿ ಈ ಒಂದು ವಸ್ತುವನ್ನು ಇಡುವುದರಿಂದ ಆ ಮನೆಯಲ್ಲಿ ಧನ ಸಮೃದ್ಧಿಯಾಗುತ್ತದೆ.


ಮೊದಲೆಗೆ ಒಂದು ಚಿಕ್ಕ ಮಣ್ಣಿನ ಮಡಿಕೆಯಲ್ಲಿ ಸ್ವಲ್ಪ ಧಾನ್ಯವನ್ನು ಹಾಕಬೇಕು. ಅರಶಿನ, ಕುಂಕುಮ, ಕೆಂಪು ಹೂವು, ಬೆಳ್ಳಿ ನಾಣ್ಯ ಅಥವಾ ತಾಮ್ರದ ನಾಣ್ಯವನ್ನು ಮಡಿಕೆಯಲ್ಲಿ ಹಾಕಬೇಕು. ಕೊನೆಗೆ ಕೆಂಪು ಬಟ್ಟೆಯಿಂದ ಮಡಿಕೆಯನ್ನು ಗಟ್ಟಿಯಾಗಿ ಕಟ್ಟಬೇಕು. ನಂತರ ಆ ಮಡಿಕೆಯನ್ನು ದೇವರ ಮನೆಯಲ್ಲಿಟ್ಟು ಸಂಕಲ್ಪ ಮಾಡಿಕೊಳ್ಳಬೇಕು. ಮಡಿಕೆಯನ್ನು ಪೂರ್ವ ದಿಕ್ಕಿನಲ್ಲಿ ಇಡಬೇಕು. ಆ ಸ್ಥಳದಲ್ಲಿ ಯಾರೂ ಓಡಾಡಬಾರದು, ತಲೆಇಟ್ಟು ಸಹ ಮಲಗಬಾರದು. ಹೀಗೆ ಮಾಡಿದರೆ 11 ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಮೇಷ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!