Publish Date: Wed, 17 Jul 2019 (06:20 IST)
Updated Date: Wed, 17 Jul 2019 (06:21 IST)
ಬೆಂಗಳೂರು : ಜುಲೈ 16 ರಂದು ನಡೆದ ಚಂದ್ರ ಗ್ರಹಣ ಕೆಲವು ರಾಶಿಯವರಿಗೆ ಒಳ್ಳೆಯದಾದರೆ ಇನ್ನು ಕೆಲವು ರಾಶಿಯವರಿಗೆ ದೋಷವನ್ನು ತಂದೊಡ್ಡುತ್ತದೆ. ಆದ್ದರಿಂದ ಈ ಚಂದ್ರ ಗ್ರಹಣ ಮುಗಿದ ಬಳಿಕ ತಪ್ಪದೇ ಈ ಕೆಲಸ ಮಾಡಿದರೆ ದೋಷದಿಂದ ಮುಕ್ತರಾಗಬಹುದು.
ಗ್ರಹಣದ ನಂತರ ಸೂತಕ ಕಳೆಯಲು ಪ್ರಾತಃಕಾಲದಲ್ಲಿ ಎದ್ದು, ಸ್ನಾನ ಮಾಡಿ. ಆದರೆ ಸ್ನಾನ ಮಾಡುವಾಗ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು. ಇದರಿಂದ ದೋಷಗಳು ಸಂಪೂರ್ಣವಾಗಿ ದೂರವಾಗುತ್ತದೆ. ಸ್ನಾನ ಮಾಡಿದ ನಂತರ ಮನೆಯನ್ನು ಸ್ವಚ್ಚಗೊಳಿಸಿ ಗೋಮೂತ್ರದಿಂದ ಮನೆಗೆ ಪ್ರೋಕ್ಷಣೆ ಮಾಡಬೇಕು. ಮನೆ ದೇವರಿಗೆ ಪೂಜೆ ಮಾಡಬೇಕು.
ಹಾಗೇ ಹತ್ತಿರದಲ್ಲಿರುವ ಶಿವ ಅಥವಾ ರಾಘವೇಂದ್ರ ಸ್ವಾಮಿಯ ಮಠಕ್ಕೆ ಅಥವಾ ಸಾಯಿಬಾಬನ ಸನ್ನಿಧಿಗೆ ಹೋಗಿ ಪೂಜೆ ಸಲ್ಲಿಸಿ 5 ನಿಮಿಷ ಅಲ್ಲಿಯೇ ಕುಳಿತು ಧ್ಯಾನ ಮಾಡಬೇಕು. ಇದರಿಂದ ಗ್ರಹಣದ ದೋಷದಿಂದ ಮುಕ್ತರಾಗಬಹುದು.