ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಿದರೆ ದಿನವಿಡೀ ದುರಾದೃಷ್ಟ ಹಿಂಬಾಲಿಸುತ್ತದೆ

Krishnaveni K
ಮಂಗಳವಾರ, 22 ಅಕ್ಟೋಬರ್ 2024 (08:35 IST)
Photo Credit: AI Image
ಬೆಂಗಳೂರು: ಬೆಳಿಗ್ಗೆ ಎದ್ದ ತಕ್ಷಣವೇ ಒಳ್ಳೆಯನ್ನೇ ನೋಡಿದರೆ ದಿನವಿಡೀ ಶುಭವಾಗಿರುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಬೆಳಿಗ್ಗೆ ಕೆಲವೊಂದು ವಸ್ತುಗಳನ್ನು ನೋಡಿದರೆ ದಿನವಿಡೀ ಖರಾಬು ಆಗಿರುತ್ತದೆ. ಅಂತಹ ವಿಚಾರಗಳು ಯಾವುವು ನೋಡೋಣ.

ಬೆಳಿಗ್ಗೆ ಎದ್ದ ತಕ್ಷಣ ನಾವು ಏನು ನೋಡುತ್ತೇವೆಯೋ ಅದರ ಮೇಲೆ ನಮ್ಮ ದಿನ ಹೇಗಿರುತ್ತದೆ ಎಂದು ನಿರ್ಧಾರವಾಗುತ್ತದೆ. ದಿನವಿಡೀ ಒಳ್ಳೆಯದಾಗಿರಬೇಕೆಂದರೆ ಬೆಳಿಗ್ಗೆ ಎದ್ದ ತಕ್ಷಣ ಅಂಗೈ ನೋಡಿ ದೇವರ ಧ್ಯಾನ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಭೂಮಿ ಸ್ಪರ್ಶಿಸುವ ಮೊದಲು ಭೂಮಿ ದೇವಿಗೆ ನಮಿಸಿ ಏಳಬೇಕು.

ಅದರ ಬದಲು ಬೆಳಿಗ್ಗೆ ಎದ್ದ ತಕ್ಷಣ ಒಡೆದ ಕನ್ನಡಿಯನ್ನು ನೋಡಿದರೆ ನಿಮ್ಮನ್ನು ದುರಾದೃಷ್ಟ ಹಿಂಬಾಲಿಸಿ ಬರುತ್ತದೆ. ಒಡೆದ ಕನ್ನಡಿ ಅಶುಭದ ಸಂಕೇತವಾಗಿದ್ದು ಇದರಿಂದ ಮನೆಯಲ್ಲಿ ಕಲಹ, ಅಶಾಂತಿ ಮೂಡಬಹುದು. ಹೀಗಾಗಿ ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಳ್ಳಬಾರದು.

ಅದೇ ರೀತಿ ಬೆಳಿಗ್ಗೆ ಎದ್ದ ತಕ್ಷಣ ಮನುಷ್ಯನ ನೆರಳನ್ನು ನಾವು ನೋಡಬಾರದು. ಇದರಿಂದ ಸಾವು, ನೋವಿನ ಅಶುಭ ವಾರ್ತೆ ಕೇಳಬೇಕಾದೀತು.  ಹಾಗೆಯೇ ನಿಂತು ಹೋದ ಗಡಿಯಾರವನ್ನು ನೋಡುವುದರಿಂದ ಆ ದಿನ ಅಶುಭದ ವಾರ್ತೆ ಕೇಳಬೇಕಾದೀತು. ದೇವರ ಒಡೆದ ವಿಗ್ರಹ, ತೊಳೆಯದ ಪಾತ್ರೆಗಳನ್ನು ನೋಡುವುದೂ ಶುಭಕರವಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಸಂತಾನ ಗಣಪತಿ ಸ್ತೋತ್ರಂ ಮಹಿಳೆಯರು ತಪ್ಪದೇ ಓದಿ

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಮುಂದಿನ ಸುದ್ದಿ
Show comments