ನಿಂಬೆಹಣ್ಣಿನ ದೀಪವನ್ನು ಹಚ್ಚುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ಮಂಗಳವಾರ, 12 ನವೆಂಬರ್ 2019 (06:13 IST)
ಬೆಂಗಳೂರು : ಮನೆಯವರಿಗೆ, ಕುಟುಂಬದವರಿಗೆ ಒಳ್ಳೆದಾಗಲಿ ಎಂದು ಮಹಿಳೆಯರು ದೇವಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚುತ್ತಾರೆ. ಆದರೆ ಈ ನಿಂಬೆಹಣ್ಣಿನ ದೀಪವನ್ನು ಹಚ್ಚುವಾಗ ಕೆಲವು ನಿಯಗಳನ್ನು ಪಾಲಿಸಬೇಕಾಗುತ್ತದೆ.
ಎಂತಹ ಪರಿಸ್ಥಿತಿಯಲ್ಲೂ ಒಂದೇ ಮನೆಯಲ್ಲಿ ಇಬ್ಬರು ಮಹಿಳೆಯರು ನಿಂಬೆ ಹಣ್ಣಿನ ದೀಪ ಹಚ್ಚಬಾರದು. ಹಾಗೇ ಯಾವುದೇ ಕಾರಣಕ್ಕೂ ಮನೆಯ ಒಳಗಡೆ ನಿಂಬೆ ಹಣ್ಣಿನ ದೀಪ ಬೆಳಗಬಾರದು. ಮುಟ್ಟಾದ, ಸೂತಕದ ಹಾಗೂ ಅನಾರೋಗ್ಯದ ಸಂದರ್ಭಗಳಲ್ಲಿ ಈ ದೀಪವನ್ನು ಹಚ್ಚಬಾರದು.


ಹಾಗೇ ಯಾವುದೇ ಕಾರಣಕ್ಕೂ ಮನೆಯಲ್ಲಿ ಎರಡು ಬಗೆಯ ದೀಪವನ್ನು ಹಚ್ಚಬಾರದು. ಅಂದರೆ ನಿಂಬೆ ಹಣ್ಣಿನ ದೀಪ ಹಚ್ಚಿದ ಮೇಲೆ ಬೇರೆ ಎಣ್ಣೆಯಿಂದ ಇನ್ನೊಂದು ದೀಪವನ್ನು ಬೆಳಗಬಾರದು. ಅಲ್ಲದೇ ಮನೆಯಲ್ಲಿ ಜಗಳವಾಡಿ ನಿಂಬೆ ಹಣ್ಣಿನ ದೀಪ ಬೆಳಗಬಾರದು. ಸೀರೆಯುಟ್ಟು ಮಹಿಳೆಯರು ನಿಂಬೆಹಣ್ಣಿನ ದೀಪ ಬೆಳಗಿದರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ