ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

Krishnaveni K
ಮಂಗಳವಾರ, 21 ಅಕ್ಟೋಬರ್ 2025 (08:45 IST)
ದೀಪಾವಳಿ ಹಬ್ಬ ಇಂದಿನಿಂದ ಶುರುವಾಗಿದ್ದು ಮೂರು ದಿನಗಳ ಕಾಲ ಲಕ್ಷ್ಮೀ ದೇವಿಯ ಆರಾಧನೆ ನಡೆಯಲಿದೆ. ಹೀಗಾಗಿ ಲಕ್ಷ್ಮೀ ಕೃಪಾಕಟಾಕ್ಷ ಸಿಗಬೇಕಾದರೆ ದೀಪಾವಳಿ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ.

ಬೆಳಿಗ್ಗೆ ತಡವಾಗಿ ಏಳುವುದು: ದೀಪಾವಳಿ ಹಬ್ಬದ ದಿನ ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮುಗಿಸಿ ಮನೆಯನ್ನು ಒಪ್ಪ ಮಾಡಿಟ್ಟುಕೊಳ್ಳಬೇಕು. ಅದರಲ್ಲೂ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ಉತ್ತಮ.

ಸಂಜೆ ಹೊತ್ತು ಮಲಗಬೇಡಿ: ಮುಸ್ಸಂಜೆ ಹೊತ್ತು ಮನೆಗೆ ಲಕ್ಷ್ಮೀ ಬರುವ ಸಮಯ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ಮಲಗುವುದು ಶುಭವಲ್ಲ.

ಮನೆಯಲ್ಲಿ ಕಸ, ಕೊಳೆ ಇರದಂತೆ ನೋಡಿ: ಮನೆಯಲ್ಲಿ ಕಸ, ಕೊಳೆ ಇರದಂತೆ ನೋಡಿಕೊಳ್ಳಿ. ಲಕ್ಷ್ಮೀ ಬರುವ ಸಮಯದಲ್ಲಿ ಮನೆ ಶುಚಿಯಾಗಿರಬೇಕು.

ಕಲಹ, ಹಿರಿಯರಿಗೆ ಅಗೌರವ: ದೀಪಾವಳಿ ಸಂದರ್ಭದಲ್ಲಿ ಜಗಳವಾಡುವುದು, ಹಿರಿಯರಿಗೆ ಅಗೌರವ ತೋರುವುದು ಮಾಡಬೇಡಿ. ಇದರಿಂದ ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ.

ಮಾಂಸಾಹಾರ ಬೇಡ: ದೀಪಾವಳಿ ಹಬ್ಬ ಪವಿತ್ರವಾದ ದಿನವಾಗಿದ್ದು ಈ ದಿನಗಳಲ್ಲಿ ಮಾಂಸಾಹಾರವನ್ನು ಮಾಡಬೇಡಿ.

ಹಣಕಾಸಿನ ವ್ಯವಹಾರ ಬೇಡ: ದೀಪಾವಳಿ ಸಂದರ್ಭದಲ್ಲಿ ಸಾಲ ನೀಡುವುದು, ಸಾಲ ಪಡೆಯುವುದು ಇತ್ಯಾದಿ ಹಣಕಾಸಿನ ವ್ಯವಹಾರ ಮಾಡಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಕ್ಷಿಣಾ ಮೂರ್ತಿ ಸ್ತೋತ್ರಂ ತಪ್ಪದೇ ಓದಿ

ಮಂಗಳವಾರ ಓದಲೇಬೇಕಾದ ಹನುಮಾನ್ ಸುಪ್ರಭಾತಮ್

ಲಲಿತಾ ಪಂಚರತ್ನಂ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ನಿಮ್ಮ ಈ ತಪ್ಪು ದಾರಿದ್ರ್ಯಕ್ಕೆ ಕಾರಣವಾಗಬಹುದು

ಮುಂದಿನ ಸುದ್ದಿ
Show comments