ಬೆಂಗಳೂರು: ಶುಕ್ರವಾರ ಲಕ್ಷ್ಮೀ ದೇವಿಗೆ ಸಂಬಂಧಿಸಿದ ದಿನವಾಗಿದೆ. ಐಶ್ವರ್ಯ, ಸಮೃದ್ಧಿಯ ದಿನವಾದ ಇಂದು ಈ ವಸ್ತುಗಳನ್ನು ಮನೆಗೆ ತರಬೇಡಿ.
ಶುಕ್ರವಾರ ಲಕ್ಷ್ಮೀ ದೇವಿ ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ಇಂದು ದಾರಿದ್ರ್ಯ ಸೂಚಿಸುವಂತಹ ವಸ್ತುಗಳನ್ನು ಮನೆಗೆ ತರಬೇಡಿ. ಲಕ್ಷ್ಮೀ ದೇವಿಯು ಅದೃಷ್ಟ, ಸಮೃದ್ಧಿ, ಐಶ್ವರ್ಯ ಮನೆಗೆ ಹೊತ್ತು ತರುತ್ತಾಳೆ.
ಹೀಗಾಗಿ ಈ ದಿನಗಳಂದು ಮಾಂಸಾಹಾರ, ಮದ್ಯ, ಹುಳಿ ಪದಾರ್ಥಗಳು, ಸಕ್ಕರೆ, ಪೂಜಾ ಸಾಮಗ್ರಿಗಳನ್ನು ತರಬೇಡಿ. ಅದೇ ರೀತಿ ಮನೆಯಲ್ಲಿರುವ ಮುರಿದ ಕನ್ನಡಿ, ಪೂಜಾ ಸಾಮಗ್ರಿ, ಬಟ್ಟೆ, ಕೊಳಕು ವಸ್ತ್ರಗಳು, ಕಸವಿಲ್ಲದಂತೆ ನೋಡಿಕೊಳ್ಳಿ.
ವಿಶೇಷವಾಗಿ ಶುಕ್ರವಾರದಂದು ಮನೆಯನ್ನ ಸ್ವಚ್ಛವಾಗಿ ಒರೆಸಿ, ಬಾಗಿಲಿಗೆ ನೀರು ಹಾಕಿ ರಂಗೋಲಿ ಬಿಟ್ಟು ಸಂಜೆ ವೇಳೆ ದೀಪ ಹಚ್ಚಿಟ್ಟರೆ ಉತ್ತಮ. ಅದೇ ರೀತಿ ಈ ದಿನ ಮನೆಯಲ್ಲಿ ಕಲಹ, ವಾದ-ವಿವಾದ, ಹೆಣ್ಣು ಮಕ್ಕಳಿಗೆ ಅಗೌರವ ತೋರುವ ಸಂದರ್ಭ ತಂದುಕೊಳ್ಳಬೇಡಿ.