ದೀಪಾವಳಿ ಹಬ್ಬಕ್ಕೆ ಲಕ್ಷ್ಮೀ ಪೂಜೆ ಮಾಡಲು ಮುಹೂರ್ತ ಇಲ್ಲಿದೆ

Krishnaveni K
ಬುಧವಾರ, 8 ಅಕ್ಟೋಬರ್ 2025 (08:36 IST)
ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು ಲಕ್ಷ್ಮೀ ಪೂಜೆ ಮಾಡಲು ಶುಭ ಸಮಯ ಮತ್ತು ಮುಹೂರ್ತ ಯಾವುದು ಇಲ್ಲಿದೆ ವಿವರ.

ಈ ಬಾರಿ ಅಕ್ಟೋಬರ್ 20 ಮತ್ತು 21 ರಂದು ದೀಪಾವಳಿ ಹಬ್ಬವಿರಲಿದೆ. ಅಕ್ಟೋಬರ್ 20 ಸೋಮವಾರ ಅಪರಾಹ್ನ 3.44 ಕ್ಕೆ ಅಮವಾಸ್ಯೆ ಆರಂಭವಾಗುತ್ತದೆ. ಮರುದಿನ ಅಂದರೆ ಅಕ್ಟೋಬರ್ 21 ರಂದು ಮಂಗಳವಾರ ಸಂಜೆ 5.54 ಕ್ಕೆ ಅಮವಾಸ್ಯೆ ಮುಕ್ತಾಯವಾಗುತ್ತದೆ.

ಎರಡೂ ದಿನ ಲಕ್ಷ್ಮೀ ಪೂಜೆಯನ್ನು ಭಕ್ತಿಯಿಂದ ಮಾಡುವುದರಿಂದ ಸೌಭಾಗ್ಯ ದೇವತೆ ನಿಮಗೆ ಒಲಿಯುತ್ತಾಳೆ. ಆದರೆ ಅದಕ್ಕೂ ವಿಶೇಷ ಮುಹೂರ್ತವಿದೆ. ಸೋಮವಾರದಂದು ಸಂಜೆ 7.25 ರಿಂದ ರಾತ್ರಿ 9.20 ರವರೆಗಿನ ವೃಷಭ ಲಗ್ನ ಮುಹೂರ್ತದಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡಬಹುದಾಗಿದೆ.

ಮಂಗಳವಾರ ಬೆಳಿಗ್ಗೆ 8.30 ರಿಂದ 10.20 ರವರೆಗೆ ವೃಶ್ಚಿಕ ಲಗ್ನದಲ್ಲಿ ಮತ್ತು ಅಪರಾಹ್ನ 2.40 ರಿಂದ ಸಂಜೆ 4.05 ರವರೆಗೆ ಲಕ್ಷ್ಮೀ ಪೂಜೆಯನ್ನು ಮಾಡಲು ಪ್ರಶಸ್ತವಾದ ಮುಹೂರ್ತವಾಗಿದೆ. ಸೋಮವಾರ ಧನಲಕ್ಷ್ಮೀ ಪೂಜೆಗೆ ಹೇಳಿ ಮಾಡಿಸಿದ ದಿನವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಹಬ್ಬಕ್ಕೆ ಲಕ್ಷ್ಮೀ ಪೂಜೆ ಮಾಡಲು ಮುಹೂರ್ತ ಇಲ್ಲಿದೆ

ಸಂಕಷ್ಟನಾಶನ ಗಣೇಶ ಸ್ತೋತ್ರಂ ತಪ್ಪದೇ ಓದಿ

ವಿಷ್ಣು ಸಹಸ್ರನಾಮ ಪೂರ್ತಿ ಓದಲು ಕಷ್ಟವಾದರೆ ಇದೊಂದು ಮಂತ್ರ ಪಠಿಸಿ ಸಾಕು

ಸೂರ್ಯಾಷ್ಟಕಂ ಸ್ತೋತ್ರವನ್ನು ಇಂದು ತಪ್ಪದೇ ಓದಿ

ಶನಿ ಸಪ್ತನಾಮಾವಳಿ ಯಾವುದು ಇದನ್ನು ಪಠಿಸುವುದರಿಂದ ಏನು ಫಲ

ಮುಂದಿನ ಸುದ್ದಿ
Show comments