Webdunia - Bharat's app for daily news and videos

Install App

ಮಹಾವಿಷ್ಣುವಿನ 3 ಅತ್ಯಂತ ಶಕ್ತಿ ಶಾಲಿ ಮಂತ್ರಗಳು ಮತ್ತು ಅದರ ಉಪಯೋಗಗಳು

Krishnaveni K
ಸೋಮವಾರ, 19 ಆಗಸ್ಟ್ 2024 (08:43 IST)
ಬೆಂಗಳೂರು: ಮಹಾವಿಷ್ಣುವಿನ ಮೂರು ಅತ್ಯಂತ ಪ್ರಭಾವ ಶಾಲೀ ಮಂತ್ರಗಳು ಮತ್ತು ಅದನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳೇನು ಎಂಬ ಬಗ್ಗೆ ಇಂದು ನೋಡೋಣ.

‘ಓ ನಮೋ ಭಗವತೇ ವಾಸುದೇವಾಯ’
ಈ ಮಂತ್ರದ ಅರ್ಥ ಎಲ್ಲರ ಹೃದಯದಲ್ಲಿ ವಾಸವಾಗಿರುವ ದೇವನೇ ಎಂದಾಗಿದೆ. ಈ ಮಂತ್ರವನ್ನು ಮುಕ್ತಿ ಮಂತ್ರ ಎಂದೂ ಕರೆಯುತ್ತಾರೆ. ಬ್ರಹ್ಮಾಂಡದ ರಕ್ಷಕನಾದ ಮಹಾವಿಷ್ಣುವಿನ ಶ್ರೀರಕ್ಷೆ ಜೊತೆಗೆ ಮುಕ್ತಿ ಪಡೆಯಲು ಈ ಮಂತ್ರವನ್ನು ಪಠಿಸುತ್ತಿರಬೇಕು.

‘ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ ಬಂಧುಶ್ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ ತ್ವಮೇವ ಸರ್ವ ಮಮ ದೇವ ದೇವ
ನನ್ನ ತಂದೆ-ತಾಯಿ, ಬಂಧು-ಬಳಗ, ಮಿತ್ರ ಎಲ್ಲವೂ ನೀನೇ ಭಗವಂತ ಎಂಬುದು ಈ ಮಂತ್ರದ ಸಾರವಾಗಿದೆ. ಇದನ್ನು ಪ್ರತಿನಿತ್ಯ ಪಠಿಸುವುದರಿಂದ ಮಾನಸಿಕ ಸ್ಥಿರತೆ, ನೆಮ್ಮದಿ, ಸಂಬಂಧಗಳಲ್ಲಿ ಸ್ಥಿರತೆ ಮೂಡುವುದು.

ಓ ನಮೋ ನಾರಾಯಣಾಯ
ಮಹಾವಿಷ್ಣುವಿನ ಮೂಲ ಮಂತ್ರ ಇದೇ ಆಗಿದೆ. ನಾನು ಸರ್ವಶಕ್ತನಾದ ಮಹಾವಿಷ್ಣುವಿಗೆ ವಂದಿಸುತ್ತೇನೆ ಎಂಬುದು ಇದರ ಅರ್ಥವಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ನಮ್ಮ ಮರಣಾನಂತರ ನಮ್ಮ ಆತ್ಮವು ಮಹಾವಿಷ್ಣುವಿನ ಮೂಲ ಸ್ಥಾನಕ್ಕೆ ಹೋಗುತ್ತದೆ ಎಂಬ ನಂಬಿಕೆಯಿದೆ. ಅಂದರೆ ಮೋಕ್ಷ ಪ್ರಾಪ್ತಿಯಾಗುವುದು ಎಂದಾಗಿದೆ. ಈ ಮಂತ್ರವನ್ನು ಪಠಿಸುವುದರ ಮೂಲಕ ನಮ್ಮನ್ನು ಭೌತಿಕ ಬಯಕೆಗಳಿಂದ ಮುಕ್ತಗೊಳಿಸಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಕ್ಕಳೂ ಓದಬಹುದಾದ ಸುಲಭ ಆಂಜನೇಯ ಸ್ತೋತ್ರ

ಧನಾದಾಯ ವೃದ್ಧಿಗಾಗಿ ಲಕ್ಷ್ಮೀನರಸಿಂಹ ಅಷ್ಟೋತ್ತರ ಓದಿ

ವಿಷ್ಣು ಅಷ್ಟೋತ್ತರ ತಪ್ಪದೇ ಓದಿ

ನರಸಿಂಹಾಷ್ಟಕಂವನ್ನು ತಪ್ಪದೇ ಓದಿ, ಫಲವೇನು ತಿಳಿಯಿರಿ

ಶತ್ರು ಭಯವಿದ್ದರೆ ಕಾಳೀ ಹೃದಯ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments