ನಿಯಮಿತವಾಗಿ ಸರಸ್ವತಿ ಕವಚವನ್ನು ಪಠಿಸುವುದರಿಂದ ಸಾಧಕರಿಗೆ ಈ ಕೆಳಗಿನ ಲಾಭಗಳು ಸಿಗುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ:
ಏಕಾಗ್ರತೆ ಮತ್ತು ಸ್ಮರಣಶಕ್ತಿ ವೃದ್ಧಿ: ಓದಿದ್ದು ನೆನಪಿನಲ್ಲಿ ಉಳಿಯದ ವಿದ್ಯಾರ್ಥಿಗಳಿಗೆ ಈ ಕವಚದ ಪಠಣವು ಬುದ್ಧಿಶಕ್ತಿಯನ್ನು ತೀಕ್ಷ್ಣಗೊಳಿಸುತ್ತದೆ.
ವಾಕ್ ಸಿದ್ಧಿ ಮತ್ತು ಸಂವಹನ ಕಲೆ: ಸಭೆಗಳಲ್ಲಿ ಅಥವಾ ನಾಲ್ಕು ಜನರ ಮುಂದೆ ಮಾತನಾಡಲು ಹಿಂಜರಿಕೆ ಇರುವವರಿಗೆ ಆತ್ಮವಿಶ್ವಾಸ ಮೂಡುತ್ತದೆ. ಮಾತಿನಲ್ಲಿ ಸ್ಪಷ್ಟತೆ ಮತ್ತು ಮಾಧುರ್ಯ ಬರುತ್ತದೆ.
ಮಾನಸಿಕ ಶಾಂತಿ: ನಕಾರಾತ್ಮಕ ಆಲೋಚನೆಗಳು, ಪರೀಕ್ಷೆಯ ಭಯ ಮತ್ತು ಮಾನಸಿಕ ಗೊಂದಲಗಳು ದೂರವಾಗಿ ಮನಸ್ಸು ಪ್ರಸನ್ನಗೊಳ್ಳುತ್ತದೆ.
ಪಠಿಸುವ ವಿಧಾನ: ಪ್ರತಿದಿನ ಬೆಳಗ್ಗೆ ಸ್ನಾನದ ನಂತರ, ಶುದ್ಧವಾದ ಬಟ್ಟೆಯನ್ನು ಧರಿಸಿ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ತಾಯಿ ಸರಸ್ವತಿಯನ್ನು ಸ್ಮರಿಸುತ್ತಾ ಕನಿಷ್ಠ 3 ಅಥವಾ 11 ಬಾರಿ ಈ ಕವಚವನ್ನು ಪಠಿಸುವುದು ಅತ್ಯಂತ ಶ್ರೇಯಸ್ಕರ.
(ಬ್ರಹ್ಮವೈವರ್ತ ಮಹಾಪುರಾಣಾಂತರ್ಗತಂ)
ಭೃಗುರುವಾಚ ।
ಬ್ರಹ್ಮನ್ಬ್ರಹ್ಮವಿದಾಂಶ್ರೇಷ್ಠ ಬ್ರಹ್ಮಜ್ಞಾನವಿಶಾರದ ।
ಸರ್ವಜ್ಞ ಸರ್ವಜನಕ ಸರ್ವಪೂಜಕಪೂಜಿತ ॥ 60
ಸರಸ್ವತ್ಯಾಶ್ಚ ಕವಚಂ ಬ್ರೂಹಿ ವಿಶ್ವಜಯಂ ಪ್ರಭೋ ।
ಅಯಾತಯಾಮಮಂತ್ರಾಣಾಂ ಸಮೂಹೋ ಯತ್ರ ಸಂಯುತಃ ॥ 61 ॥
ಬ್ರಹ್ಮೋವಾಚ ।
ಶೃಣು ವತ್ಸ ಪ್ರವಕ್ಷ್ಯಾಮಿ ಕವಚಂ ಸರ್ವಕಾಮದಮ್ ।
ಶ್ರುತಿಸಾರಂ ಶ್ರುತಿಸುಖಂ ಶ್ರುತ್ಯುಕ್ತಂ ಶ್ರುತಿಪೂಜಿತಮ್ ॥ 62 ॥
ಉಕ್ತಂ ಕೃಷ್ಣೇನ ಗೋಲೋಕೇ ಮಹ್ಯಂ ವೃಂದಾವನೇ ವನೇ ।
ರಾಸೇಶ್ವರೇಣ ವಿಭುನಾ ರಾಸೇ ವೈ ರಾಸಮಂಡಲೇ ॥ 63 ॥
ಅತೀವ ಗೋಪನೀಯಂಚ ಕಲ್ಪವೃಕ್ಷಸಮಂ ಪರಮ್ ।
ಅಶ್ರುತಾದ್ಭುತಮಂತ್ರಾಣಾಂ ಸಮೂಹೈಶ್ಚ ಸಮನ್ವಿತಮ್ ॥ 64 ॥
ಯದ್ಧೃತ್ವಾ ಪಠನಾದ್ಬ್ರಹ್ಮನ್ಬುದ್ಧಿಮಾಂಶ್ಚ ಬೃಹಸ್ಪತಿಃ ।
ಯದ್ಧೃತ್ವಾ ಭಗವಾಂಛುಕ್ರಃ ಸರ್ವದೈತ್ಯೇಷು ಪೂಜಿತಃ ॥ 65 ॥
ಪಠನಾದ್ಧಾರಣಾದ್ವಾಗ್ಮೀ ಕವೀಂದ್ರೋ ವಾಲ್ಮಿಕೀ ಮುನಿಃ ।
ಸ್ವಾಯಂಭುವೋ ಮನುಶ್ಚೈವ ಯದ್ಧೃತ್ವಾ ಸರ್ವಪೂಜಿತಾಃ ॥ 66 ॥
ಕಣಾದೋ ಗೌತಮಃ ಕಣ್ವಃ ಪಾಣಿನಿಃ ಶಾಕಟಾಯನಃ ।
ಗ್ರಂಥಂ ಚಕಾರ ಯದ್ಧೃತ್ವಾ ದಕ್ಷಃ ಕಾತ್ಯಾಯನಃ ಸ್ವಯಮ್ ॥ 67 ॥
ಧೃತ್ವಾ ವೇದವಿಭಾಗಂಚ ಪುರಾಣಾನ್ಯಖಿಲಾನಿ ಚ ।
ಚಕಾರ ಲೀಲಾಮಾತ್ರೇಣ ಕೃಷ್ಣದ್ವೈಪಾಯನಃ ಸ್ವಯಮ್ ॥ 68 ॥
ಶಾತಾತಪಶ್ಚ ಸಂವರ್ತೋ ವಸಿಷ್ಠಶ್ಚ ಪರಾಶರಃ ।
ಯದ್ಧೃತ್ವಾ ಪಠನಾದ್ಗ್ರಂಥಂ ಯಾಜ್ಞವಲ್ಕ್ಯಶ್ಚಕಾರ ಸಃ ॥ 69 ॥
ಋಷ್ಯಶೃಂಗೋ ಭರದ್ವಾಜಶ್ಚಾಸ್ತೀಕೋ ದೇವಲಸ್ತಥಾ ।
ಜೈಗೀಷವ್ಯೋಽಥ ಜಾಬಾಲಿರ್ಯದ್ಧೃತ್ವಾ ಸರ್ವಪೂಜಿತಃ ॥ 70 ॥
ಕವಚಸ್ಯಾಸ್ಯ ವಿಪ್ರೇಂದ್ರ ಋಷಿರೇಷ ಪ್ರಜಾಪತಿಃ ।
ಸ್ವಯಂ ಬೃಹಸ್ಪತಿಶ್ಛಂದೋ ದೇವೋ ರಾಸೇಶ್ವರಃ ಪ್ರಭುಃ ॥ 71 ॥
ಸರ್ವತತ್ತ್ವಪರಿಜ್ಞಾನೇ ಸರ್ವಾರ್ಥೇಽಪಿ ಚ ಸಾಧನೇ ।
ಕವಿತಾಸು ಚ ಸರ್ವಾಸು ವಿನಿಯೋಗಃ ಪ್ರಕೀರ್ತಿತಃ ॥ 72 ॥
( ಕವಚಂ )
ಓಂ ಹ್ರೀಂ ಸರಸ್ವತ್ಯೈ ಸ್ವಾಹಾ ಶಿರೋ ಮೇ ಪಾತು ಸರ್ವತಃ ।
ಶ್ರೀಂ ವಾಗ್ದೇವತಾಯೈ ಸ್ವಾಹಾ ಭಾಲಂ ಮೇ ಸರ್ವದಾಽವತು ॥ 73 ॥
ಓಂ ಹ್ರೀಂ ಸರಸ್ವತ್ಯೈ ಸ್ವಾಹೇತಿ ಶ್ರೋತ್ರೇ ಪಾತು ನಿರಂತರಮ್ ।
ಓಂ ಶ್ರೀಂ ಹ್ರೀಂ ಭಗವತ್ಯೈ ಸರಸ್ವತ್ಯೈ ಸ್ವಾಹಾ ನೇತ್ರಯುಗ್ಮಂ ಸದಾಽವತು ॥ 74 ॥
ಐಂ ಹ್ರೀಂ ವಾಗ್ವಾದಿನ್ಯೈ ಸ್ವಾಹಾ ನಾಸಾಂ ಮೇ ಸರ್ವದಾಽವತು ।
ಹ್ರೀಂ ವಿದ್ಯಾಧಿಷ್ಠಾತೃದೇವ್ಯೈ ಸ್ವಾಹಾ ಚೋಂಷ್ಠ ಸದಾಽವತು ॥ 75 ॥
ಓಂ ಶ್ರೀಂ ಹ್ರೀಂ ಬ್ರಾಹ್ಮ್ಯೈ ಸ್ವಾಹೇತಿ ದಂತಪಂಕ್ತಿಂ ಸದಾಽವತು ।
ಐಮಿತ್ಯೇಕಾಕ್ಷರೋ ಮಂತ್ರೋ ಮಮ ಕಂಠಂ ಸದಾಽವತು ॥ 76 ॥
ಓಂ ಶ್ರೀಂ ಹ್ರೀಂ ಪಾತು ಮೇ ಗ್ರೀವಾಂ ಸ್ಕಂಧಂ ಮೇ ಶ್ರೀಂ ಸದಾಽವತು ।
ಓಂ ಹ್ರೀಂ ವಿದ್ಯಾಧಿಷ್ಠಾತೃದೇವ್ಯೈ ಸ್ವಾಹಾ ವಕ್ಷಃ ಸದಾಽವತು ॥ 77 ॥
ಓಂ ಹ್ರೀಂ ವಿದ್ಯಾಸ್ವರೂಪಾಯೈ ಸ್ವಾಹಾ ಮೇ ಪಾತು ನಾಭಿಕಾಮ್ ।
ಓಂ ಹ್ರೀಂ ಕ್ಲೀಂ ವಾಣ್ಯೈ ಸ್ವಾಹೇತಿ ಮಮ ಪೃಷ್ಠಂ ಸದಾಽವತು ॥ 78 ॥
ಓಂ ಸರ್ವವರ್ಣಾತ್ಮಿಕಾಯೈ ಪಾದಯುಗ್ಮಂ ಸದಾಽವತು ।
ಓಂ ರಾಗಾಧಿಷ್ಠಾತೃದೇವ್ಯೈ ಸರ್ವಾಂಗಂ ಮೇ ಸದಾಽವತು ॥ 79 ॥
ಓಂ ಸರ್ವಕಂಠವಾಸಿನ್ಯೈ ಸ್ವಾಹಾ ಪ್ರಚ್ಯಾಂ ಸದಾಽವತು ।
ಓಂ ಹ್ರೀಂ ಜಿಹ್ವಾಗ್ರವಾಸಿನ್ಯೈ ಸ್ವಾಹಾಽಗ್ನಿದಿಶಿ ರಕ್ಷತು ॥ 80 ॥
ಓಂ ಐಂ ಹ್ರೀಂ ಶ್ರೀಂ ಸರಸ್ವತ್ಯೈ ಬುಧಜನನ್ಯೈ ಸ್ವಾಹಾ ।
ಸತತಂ ಮಂತ್ರರಾಜೋಽಯಂ ದಕ್ಷಿಣೇ ಮಾಂ ಸದಾಽವತು ॥ 81 ॥
ಓಂ ಹ್ರೀಂ ಶ್ರೀಂ ತ್ರ್ಯಕ್ಷರೋ ಮಂತ್ರೋ ನೈರೃತ್ಯಾಂ ಮೇ ಸದಾಽವತು ।
ಕವಿಜಿಹ್ವಾಗ್ರವಾಸಿನ್ಯೈ ಸ್ವಾಹಾ ಮಾಂ ವಾರುಣೇಽವತು ॥ 82 ॥
ಓಂ ಸದಂಬಿಕಾಯೈ ಸ್ವಾಹಾ ವಾಯವ್ಯೇ ಮಾಂ ಸದಾಽವತು ।
ಓಂ ಗದ್ಯಪದ್ಯವಾಸಿನ್ಯೈ ಸ್ವಾಹಾ ಮಾಮುತ್ತರೇಽವತು ॥ 83 ॥
ಓಂ ಸರ್ವಶಾಸ್ತ್ರವಾಸಿನ್ಯೈ ಸ್ವಾಹೈಶಾನ್ಯಾಂ ಸದಾಽವತು ।
ಓಂ ಹ್ರೀಂ ಸರ್ವಪೂಜಿತಾಯೈ ಸ್ವಾಹಾ ಚೋರ್ಧ್ವಂ ಸದಾಽವತು ॥ 84 ॥
ಐಂ ಹ್ರೀಂ ಪುಸ್ತಕವಾಸಿನ್ಯೈ ಸ್ವಾಹಾಽಧೋ ಮಾಂ ಸದಾವತು ।
ಓಂ ಗ್ರಂಥಬೀಜರೂಪಾಯೈ ಸ್ವಾಹಾ ಮಾಂ ಸರ್ವತೋಽವತು ॥ 85 ॥
ಇತಿ ತೇ ಕಥಿತಂ ವಿಪ್ರ ಸರ್ವಮಂತ್ರೌಘವಿಗ್ರಹಮ್ ।
ಇದಂ ವಿಶ್ವಜಯಂ ನಾಮ ಕವಚಂ ಬ್ರಹ್ಮಾರೂಪಕಮ್ ॥ 86 ॥
ಪುರಾ ಶ್ರುತಂ ಧರ್ಮವಕ್ತ್ರಾತ್ಪರ್ವತೇ ಗಂಧಮಾದನೇ ।
ತವ ಸ್ನೇಹಾನ್ಮಯಾಽಽಖ್ಯಾತಂ ಪ್ರವಕ್ತವ್ಯಂ ನ ಕಸ್ಯಚಿತ್ ॥ 87 ॥
ಗುರುಮಭ್ಯರ್ಚ್ಯ ವಿಧಿವದ್ವಸ್ತ್ರಾಲಂಕಾರಚಂದನೈಃ ।
ಪ್ರಣಮ್ಯ ದಂಡವದ್ಭೂಮೌ ಕವಚಂ ಧಾರಯೇತ್ಸುಧೀಃ ॥ 88 ॥
ಪಂಚಲಕ್ಷಜಪೇನೈವ ಸಿದ್ಧಂ ತು ಕವಚಂ ಭವೇತ್ ।
ಯದಿ ಸ್ಯಾತ್ಸಿದ್ಧಕವಚೋ ಬೃಹಸ್ಪತಿ ಸಮೋ ಭವೇತ್ ॥ 89 ॥
ಮಹಾವಾಗ್ಮೀ ಕವೀಂದ್ರಶ್ಚ ತ್ರೈಲೋಕ್ಯವಿಜಯೀ ಭವೇತ್ ।
ಶಕ್ನೋತಿ ಸರ್ವಂ ಜೇತುಂ ಸ ಕವಚಸ್ಯ ಪ್ರಭಾವತಃ ॥ 90 ॥
ಇದಂ ತೇ ಕಾಣ್ವಶಾಖೋಕ್ತಂ ಕಥಿತಂ ಕವಚಂ ಮುನೇ ।
ಸ್ತೋತ್ರಂ ಪೂಜಾವಿಧಾನಂ ಚ ಧ್ಯಾನಂ ವೈ ವಂದನಂ ತಥಾ ॥ 91 ॥
ಇತಿ ಶ್ರೀ ಬ್ರಹ್ಮವೈವರ್ತೇ ಮಹಾಪುರಾಣೇ ಪ್ರಕೃತಿಖಂಡೇ ನಾರದನಾರಾಯಣಸಂವಾದೇ ಸರಸ್ವತೀಕವಚಂ ನಾಮ ಚತುರ್ಥೋಽಧ್ಯಾಯಃ ।
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ