Select Your Language

Notifications

webdunia
webdunia
webdunia
webdunia

ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ

Lakshmi Godess
ಇಂದು ಶುಕ್ರವಾರವಾಗಿದ್ದು ಮಹಾಲಕ್ಷ್ಮಿಗೆ ವಿಶೇಷವಾದ ದಿನವಾಗಿದೆ. ಈ ದಿನ ಮಹಾಲಕ್ಷ್ಮಿ ಸ್ತೋತ್ರ ಪಠಿಸುವುದರ ಜೊತೆಗೆ ಅದರ ಸರಳ ಅರ್ಥವನ್ನೂ ತಿಳಿದುಕೊಳ್ಳಿ.

ಶ್ರೀ ಮಹಾಲಕ್ಷ್ಮಿ ಅಷ್ಟಕ ಸ್ತೋತ್ರಂ
ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತು ತೇ || ೧ || 

ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ |
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೨ || 

ಸರ್ವಜ್ಞೇ ಸರ್ವವರದೇ ಸರ್ವದುಷ್ಟಭಯಂಕರಿ |
ಸರ್ವದುಃಖಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೩ || 

ಸಿದ್ಧಿಬುದ್ಧಿಪ್ರದೇ ದೇವಿ ಭುಕ್ತಿಮುಕ್ತಿಪ್ರದಾಯಿನಿ |
ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೪ || 

ಆದ್ಯಂತರಹಿತೇ ದೇವಿ ಆದ್ಯಶಕ್ತಿ ಮಹೇಶ್ವರಿ |
ಯೋಗಜೇ ಯೋಗಸಂಭೂತೇ ಮಹಾಲಕ್ಷ್ಮಿ ನಮೋಽಸ್ತು ತೇ || ೫ || 

ಸ್ಥೂಲಸೂಕ್ಷ್ಮಮಹಾರೌದ್ರೇ ಮಹಾಶಕ್ತಿ ಮಹೋದರೇ |
ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೬ || 

ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮಸ್ವರೂಪಿಣಿ |
ಪರಮೇಶಿ ಜಗನ್ಮಾತರ್ಮಾಹಾಲಕ್ಷ್ಮಿ ನಮೋಽಸ್ತು ತೇ || ೭ || 

ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ |
ಜಗತ್ಸ್ಥಿತೇ ಜಗನ್ಮಾತರ್ಮಾಹಾಲಕ್ಷ್ಮಿ ನಮೋಽಸ್ತು ತೇ || ೮ ||

ಫಲಶ್ರುತಿ (ಈ ಸ್ತೋತ್ರ ಪಠಣೆಯ ಲಾಭ):
ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರಂ ಯಃ ಪಠೇದ್ಭಕ್ತಿಮಾನ್ನರಃ |
ಸರ್ವಸಿದ್ಧಿಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ||

ಏಕಕಾಲಂ ಪಠೇನ್ನಿತ್ಯಂ ಮಹಾಪಾಪವಿನಾಶನಮ್ |
ದ್ವಿಕಾಲಂ ಯಃ ಪಠೇನ್ನಿತ್ಯಂ ಧನಧಾನ್ಯಸಮನ್ವಿತಃ ||

ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರುವಿನಾಶನಮ್ |
ಮಹಾಲಕ್ಷ್ಮೀರ್ಭವೇನ್ನಿತ್ಯಂ ಪ್ರಸನ್ನಾ ವರದಾ ಶುಭಾ ||

|| ಇತಿ ಶ್ರೀ ಮಹಾಲಕ್ಷ್ಮ್ಯಷ್ಟಕ ಸ್ತೋತ್ರಂ ಸಂಪೂರ್ಣಮ್ ||

ಸ್ತೋತ್ರದ ಸರಳ ಅರ್ಥ:
ಮಹಾಮಾಯೆಯಾದ, ಶ್ರೀಪೀಠದಲ್ಲಿ ಪೂಜಿಸಲ್ಪಡುವ, ಕೈಗಳಲ್ಲಿ ಶಂಖ, ಚಕ್ರ ಮತ್ತು ಗದೆಯನ್ನು ಧರಿಸಿರುವ ಮಹಾಲಕ್ಷ್ಮಿಗೆ ನಮಸ್ಕಾರಗಳು.

ಗರುಡ ವಾಹನದ ಮೇಲೆ ಕುಳಿತಿರುವ, ಕೋಲಾಸುರನೆಂಬ ರಾಕ್ಷಸನಿಗೆ ಭಯವನ್ನು ಹುಟ್ಟಿಸಿದ, ಭಕ್ತರ ಸಕಲ ಪಾಪಗಳನ್ನು ಹರಿಸುವ ದೇವಿಗೆ ನಮಸ್ಕಾರ.

ಎಲ್ಲವನ್ನೂ ಬಲ್ಲ, ಭಕ್ತರು ಕೇಳಿದ ವರವನ್ನು ನೀಡುವ, ದುಷ್ಟರಿಗೆ ಭಯಂಕರಳಾಗಿ ಕಾಣುವ ಮತ್ತು ಸಕಲ ದುಃಖಗಳನ್ನು ನಿವಾರಿಸುವ ಲಕ್ಷ್ಮಿಗೆ ನಮಸ್ಕಾರ.

ಬುದ್ಧಿ ಮತ್ತು ಸಿದ್ಧಿಯನ್ನು ಕರುಣಿಸುವ, ಭೋಗ ಮತ್ತು ಮೋಕ್ಷವನ್ನು ಪ್ರಸಾದಿಸುವ, ಮಂತ್ರ ಸ್ವರೂಪಿಣಿಯಾದ ದೇವಿಗೆ ನಮಸ್ಕಾರಗಳು.

ಆದಿ ಮತ್ತು ಅಂತ್ಯವಿಲ್ಲದ, ಸೃಷ್ಟಿಯ ಮೂಲ ಶಕ್ತಿಯಾದ, ಯೋಗದಿಂದ ಪ್ರಕಟಳಾಗುವ ಮಹೇಶ್ವರಿಗೆ ನಮಸ್ಕಾರ.

ಸ್ಥೂಲ ಹಾಗೂ ಸೂಕ್ಷ್ಮ ರೂಪಿಯಾಗಿದ್ದರೂ ಮಹಾರೌದ್ರ ಶಕ್ತಿಯನ್ನು ಹೊಂದಿರುವ, ದೊಡ್ಡ ಪಾಪಗಳನ್ನೂ ನಾಶಮಾಡುವ ದೇವಿಗೆ ನಮಸ್ಕಾರ.

ಕಮಲದ ಆಸನದ ಮೇಲೆ ಕುಳಿತಿರುವ, ಪರಬ್ರಹ್ಮ ಸ್ವರೂಪಿಣಿಯಾದ, ಈ ಜಗತ್ತಿನ ತಾಯಿಯಾದ ಮಹಾಲಕ್ಷ್ಮಿಗೆ ನಮಸ್ಕಾರ.

ಶುಭ್ರವಾದ ಬಿಳಿ ವಸ್ತ್ರವನ್ನು ಧರಿಸಿ, ನಾನಾ ರೀತಿಯ ಆಭರಣಗಳಿಂದ ಅಲಂಕೃತಳಾಗಿ, ಇಡೀ ಜಗತ್ತನ್ನು ಸಲಹುವ ಜಗನ್ಮಾತೆಗೆ ನಮಸ್ಕಾರಗಳು.


Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ವೆಂಕಟೇಶ್ವರ ಪ್ರಪತ್ತಿ ಸ್ತೋತ್ರ