ಬೆಂಗಳೂರು : ಹಿಂದೆ ಗಂಡಂದಿರನ್ನು ಹೆಂಡತಿಯರು ಮಾವ, ಜೀ, ಹಾಜಿ ಎಂದು ಕರೆಯುತ್ತಿದ್ದರು. ಪಾಶ್ಚಿಮಾತ್ಯ ಸಂಸ್ಕೃತಿಯ ಕಾರಣದಿಂದಾಗಿ ಇಂದು ಬಾರೋ, ಹೋಗೋ, ಎಂದು ಗಂಡನ ಹೆಸರಿನಿಂದ ಕರೆಯುತ್ತಾರೆ. ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಇದು ತಪ್ಪು ಅಂತೆ. ಗಂಡನನ್ನು ಹೆಂಡತಿ ಹೆಸರಿಡಿದು ಕೂಗಬಾರದಂತೆ. ಹೀಗೆ ಮಾಡುವುದು ಏನಾಗುತ್ತದೆ ಎಂದು ಮೊದಲು ತಿಳಿದುಕೊಳ್ಳಿ.
ಹಾಗೆ ನೋಡಿದರೆ ತಮಗಿಂತ ದೊಡ್ಡವರನ್ನು ಹೆಸರಿನಿಂದ ಕರೆಯುವುದು ತಪ್ಪು, ಅಂತಹದರಲ್ಲಿ ಹೆಂಡತಿಗೆ ಎಲ್ಲಾ ವಿಧದಲ್ಲೂ ರಕ್ಷಣೆಯಾಗಿದ್ದು, ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದ ಗಂಡನನ್ನು ಹೆಸರಿನಿಂದ ಕರೆಯುವುದು ತಪ್ಪು ಎಂದು ನಮ್ಮ ಸಂಪ್ರದಾಯಗಳು ಹೇಳುತ್ತವೆ. ಏಕಾಂತ ಸಮಯದಲ್ಲಿ ಹೇಗೆ ಕರೆದರೂ ತಪ್ಪಿಲ್ಲ. ಆದರೆ ಮನೆಯವರ ಮುಂದೆ, ಮಕ್ಕಳ ಮುಂದೆ, ಜನರ ಮುಂದೆ ಮಾತ್ರ ಹೆಸರಿನಿಂದ ಕರೆಯಬಾರದಂತೆ. ಹೀಗೆ ಕರೆಯುವುದರಿಂದ ಇತರರಲ್ಲಿ ನಿಮ್ಮ ಗಂಡನ ಬಗೆಗಿನ ಗೌರವ ಕಡಿಮೆಯಾಗುವುದಲ್ಲದೇ, ನಾಲ್ಕು ಜನರ ನಡುವೆ ಗಂಡನ ಬೆಲೆ ಕಡಿಮೆ ಮಾಡಿದಂತೆ ಎಂದು ಹೇಳಲಾಗಿದೆ. ನಿಮ್ಮ ಗೌರವ ಸಹ ಕಡಿಮೆಯಾಗುತ್ತದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ