Webdunia - Bharat's app for daily news and videos

Install App

ಲಸಿಕೆ ಪಡೆದ ಮಕ್ಕಳಿಗೆ ಪ್ಯಾರಸಿಟಮಲ್ ಮಾತ್ರೆ ನೀಡಲ್ಲ ಯಾಕೆ?

Webdunia
ಗುರುವಾರ, 6 ಜನವರಿ 2022 (09:01 IST)
ನವದೆಹಲಿ : ಕೋವಿಡ್-19 ವಿರುದ್ಧದ ಕೋವ್ಯಾಕ್ಸಿನ್ ಲಸಿಕೆ ಪಡೆದ ನಂತರ ಮಕ್ಕಳಿಗೆ ನೋವು ನಿವಾರಕ ಅಥವಾ ಪ್ಯಾರಸಿಟಮಲ್ ಮಾತ್ರೆಯನ್ನು ನೀಡುವುದಿಲ್ಲ,

 ಎಂದು ಲಸಿಕಾ ತಯಾರಿಕೆ ಕಂಪನಿ ಭಾರತ್ ಬಯೋಟೆಕ್ ಬುಧವಾರ ತಿಳಿಸಿದೆ.

ಕೆಲವು ರೋಗನಿರೋಧಕ ಕೇಂದ್ರಗಳು, ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಿದ ನಂತರ ಜೊತೆಯಲ್ಲಿ 500 ಮಿ.ಗ್ರಾಂ. ಪ್ಯಾರಸಿಟಮಲ್ ಮಾತ್ರೆಯನ್ನು ನೀಡುವಂತೆ ಶಿಫಾರಸು ಮಾಡಿವೆ. ಆದರೆ ಅಂತಹ ಕ್ರಮ ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಭಾರತ್ ಬಯೋಟೆಕ್, ಕೋವಿಡ್ ವಿರುದ್ಧದ ಇತರೆ ಲಸಿಕೆಗಳನ್ನು ಪಡೆದರೆ ಪ್ಯಾರಸಿಟಮಲ್ ಮಾತ್ರೆ ಅಗತ್ಯವಿರಬಹುದು. ಆದರೆ ಕೋವ್ಯಾಕ್ಸಿನ್ ಪಡೆದವರಿಗೆ ಮಾತ್ರೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ
Show comments