Select Your Language

Notifications

webdunia
webdunia
webdunia
webdunia

ಏನಿದು? ಅನುಷ್ಕಾ ಸಕ್ರ್ಯುಲರ್ ನ್ಯೂ ಥೀಮ್!

ಗರ್ಭಿಣಿಯಾಗಿದ್ದಾಗ ತೊಟ್ಟ ಬಟ್ಟೆಗಳನ್ನೆಲ್ಲಾ ಹರಾಜು ಹಾಕಿದ್ದಾರೆ ಅನುಷ್ಕಾ ಶರ್ಮಾ !

ಏನಿದು? ಅನುಷ್ಕಾ ಸಕ್ರ್ಯುಲರ್ ನ್ಯೂ ಥೀಮ್!
Bangalore , ಗುರುವಾರ, 1 ಜುಲೈ 2021 (14:28 IST)
Bangalore:ಗರ್ಭಿಣಿಯಾಗಿದ್ದಾಗ ತೊಟ್ಟ ಬಟ್ಟೆಗಳನ್ನೆಲ್ಲಾ ಹರಾಜು  ಏನಿದು ಸರ್ಕ್ಯುಲರ್ ಫ್ಯಾಷನ್ ಟ್ರೆಂಡ್ ? ಗರ್ಭಿಣಿಯಾಗಿದ್ದಾಗ ಅನುಷ್ಕಾ ಧರಿಸಿದ್ದ ಡ್ರೆಸ್ ನಿಮಗೆ ಇಷ್ಟ ಆಗಿತ್ತಾ? ಆ ಎಲ್ಲಾ ಬಟ್ಟೆಗಳನ್ನು ನಟಿ ಹರಾಜಿಗಿಟ್ಟಿದ್ದಾರೆ.ಕೊಳ್ಳುತ್ತೀರಾ ನೋಡಿ.




ಗರ್ಭಿಣಿಯಾದಾಗ ತೊಟ್ಟ ಬಟ್ಟೆಗಳನ್ನು ನಂತರ ಬಳಸೋಕೆ ಆಗೋಲ್ಲ. ಯಾಕೆಂದರೆ ಆ ಸಂದರ್ಭದಲ್ಲಿ ಎಂದಿನ ಸೈಜಿಗಿಂತ ಮೂರ್ನಾಲ್ಕು ಸೈಜ್ ಹೆಚ್ಚಿರುವ ಅಂದರೆ ಇನ್ನಷ್ಟು ಅಗಲವಾಗಿರುವ ಬಟ್ಟೆಗಳನ್ನೇ ಧರಿಸುತ್ತಾರೆ. ಮಗು ಜನಿಸಿದ ನಂತರ ಆ ಎಲ್ಲಾ ಬಟ್ಟೆಗಳು ವೇಸ್ಟ್ ಆಗಿಬಿಡುತ್ತದೆ. ಅದನ್ನು ಮತ್ಯಾರು ಧರಿಸುವುದಿಲ್ಲ. ಸುಮ್ಮನೆ ಕಸದ ರಾಶಿ ಸೇರುವ ಆ ಎಲ್ಲಾ ಬಟ್ಟೆಗಳನ್ನು ಮರುಬಳಕೆ ಮಾಡಲು ಸಾಧ್ಯವಿದ್ದರೆ ಎಷ್ಟು ಚಂದ ಅಲ್ವಾ? ಈ ಆಲೋಚನೆಯನ್ನು ಖ್ಯಾತ ನಟಿ ಅನುಷ್ಕಾ ಶರ್ಮಾ ಕಾರ್ಯರೂಪಕ್ಕೆ ತಂದಿದ್ದಾರೆ.
ಗರ್ಭಿಣಿಯಾಗಿದ್ದಾಗ ತಾವು ಬಳಸಿದ್ದ ಉತ್ತಮ ಬಟ್ಟೆಗಳೆಲ್ಲವನ್ನೂ ಅನುಷ್ಕಾ ಹರಾಜು ಹಾಕಿದ್ದಾರೆ. ಆನ್ಲೈನ್ ಮೂಲಕ ಸರ್ಕ್ಯುಲರ್ ಫ್ಯಾಷನ್ ಎನ್ನುವ ಕಾನ್ಸೆಪ್ಟ್ ಅಡಿಯಲ್ಲಿ ಈ ಹರಾಜು ನಡೆಯುತ್ತಿದೆ. ಈ ಹರಾಜಿನಲ್ಲಿ ಅನುಷ್ಕಾರದ ಬಟ್ಟೆಗಳ ಮಾರಾಟದಿಂದ ಬಂದ ಹಣವನ್ನು ಗರ್ಭಿಣಿ ಹೆಣ್ಣುಮಕ್ಕಳ ಆರೋಗ್ಯಕ್ಕಾಗಿ ಕೆಲಸ ಮಾಡುವ ಸ್ನೇಹಾ ಸ್ವಯಂಸೇವಾ ಸಂಸ್ಥೆಗೆ ದಾನ ಮಾಡುವುದಾಗಿ ಅನುಷ್ಕಾ ತಿಳಿಸಿದ್ದಾರೆ.
ಅನುಷ್ಕಾ ತಾವೇ ಹೇಳಿರುವಂತೆ ನಗರ ಪ್ರದೇಶದಲ್ಲಿರುವ ಕೇವಲ ಒಬ್ಬ ಗರ್ಭಿಣಿ ಮಹಿಳೆ ಹೊಸಾ ಉಡುಗೆಗಳ ಬದಲು ಈ ಮೊದಲು ಬಳಸಿದ ಒಂದೇ ಒಂದು ಡ್ರೆಸ್ ಖರೀದಿಸಿದರೂ ಸಾಕು.. ಅದು ಒಬ್ಬ ಮನುಷ್ಯ 200 ವರ್ಷಗಳ ತನಕ ಕುಡಿಯುವಷ್ಟು ಪ್ರಮಾಣದ ನೀರನ್ನು ಉಳಿಸಬಹುದಾಗಿದೆ. ಪ್ರಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಇದೊಂದು ಸಣ್ಣ ಹೆಜ್ಜೆ ಇಡುತ್ತಿದ್ದೇನೆ ಎಂದಿದ್ದಾರೆ ಅನುಷ್ಕಾ. ಮಗಳು ವಮಿಕಾ ಬಂದ ನಂತರ ಅನುಷ್ಕಾ ಮತ್ತು ಪತಿ ವಿರಾಟ್ ಕೊಹ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರಂತೆ.

ಏನಿದು ಸರ್ಕ್ಯುಲರ್ ಫ್ಯಾಷನ್ ?
ಅನುಷ್ಕಾ ಶರ್ಮಾ ಹೇಳಿರುವ ಸರ್ಕ್ಯುಲರ್ ಫ್ಯಾಷನ್ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಹಾಗಂತ ಇದೇನೂ ಮೊದಲ ಬಾರಿಯಲ್ಲ. ಈ ಹಿಂದೆ ಅನೇಕ ಬಾರಿ ಅನೇಕ ಸೆಲಬ್ರಿಟಿಗಳು ತಮ್ಮ ಬಳಸಿದ ಬಟ್ಟೆಗಳನ್ನೋ, ಮಕ್ಕಳ ಆಟಿಕೆಗಳನ್ನೋ ಹೀಗೆ ಮಾರಾಟಕ್ಕೆ ಇಡುವುದು… ಅದರಿಂದ ಬಂದ ಹಣವನ್ನು ಯಾವುದಾದರೂ ಸ್ವಯಂಸೇವಾ ಸಂಘಟನೆಗೆ ನೀಡುವುದೋ ಮಾಡುತ್ತಲೇ ಬಂದಿದ್ದಾರೆ. ನಟಿ ದೀಪಿಕಾ ಪಡುಕೋಣೆ ಕೂಡಾ ಆನ್ಲೈನ್ ಮೂಲಕ ಇಂಥಾ ಹರಾಜುಗಳನ್ನು, ಮಾರಾಟಗಳನ್ನು ಮಾಡುತ್ತಿರುತ್ತಾರೆ.

ಖ್ಯಾತನಾಮರ ವಸ್ತುಗಳನ್ನು ಕೊಳ್ಳಲು ಜನ ಕೂಡಾ ಧಾರಾಳವಾಗಿಯೇ ಮುಂದೆ ಬರುತ್ತಾರೆ. ಹಣದ ಬಗ್ಗೆ ಯಾವುದೇ ಚೌಕಾಸಿ ಮಾಡದೇ ಖುಷಿಯಿಂದಲೇ ಕೊಳ್ಳುತ್ತಾರೆ. ಆದರೆ ಬರೀ ಇವರಷ್ಟೇ ಅಲ್ಲದೇ, ಎಲ್ಲರೂ ವಸ್ತುಗಳ ಮರುಬಳಕೆ ಕಡೆ ಗಮನ ಹರಿಸಿ ಆ ವಸ್ತು ಒಂದು ಸಲ ಮಾತ್ರವಲ್ಲದೆ ಮತ್ತೊಮ್ಮೆ, ಮಗದೊಮ್ಮೆ ಬಳಸುವಂತೆ ಮಾಡೋದೇ ಈ ಸರ್ಕ್ಯುಲರ್ ಫ್ಯಾಷನ್ ಮೂಲ ಗುರಿ. ಅನುಷ್ಕಾ ತೆಗೆದುಕೊಂಡಿರೋ ಈ ನಿರ್ಧಾರ, ಆಖೆ ಮಾಡುತ್ತಿರುವ ಇಂಥಾ ಕೆಲಸಗಳು ಎಲ್ಲರ ಮೆಚ್ಚುಗೆ ಪಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಕೆಜಿಫ್-2’ ಆಡಿಯೋ ರೇಟ್ ಕೇಳುದ್ರೆ ಶಾಕ್ ಆಗ್ತೀರಾ!