ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್‌ನಲ್ಲಿ ಗ್ರಾಂಡ್‌ಸ್ಲಾಮ್ ಕನಸು ಕಂಡಿದ್ದ ಅಮೆರಿಕಾದ ವೀನಸ್ ವಿಲಿಯಮ್ಸ್ ಅವರಿಗೆ ಈ ಬಾರಿ ಅದೃಷ್ಟ ಕೈಕೊಟ್ಟಿದೆ.
ಶುಕ್ರವಾರ ಜರ್ಮನಿಯ ಆಂಡ್ರಿಯಾ ಪೆಟ್ನೊವಿಕ್ ವಿರುದ್ಧದ ಮೂರನೇ ಸುತ್ತಿನ ಸಂದರ್ಭದಲ್ಲಿ ಸ್ನಾಯು ಸಳೆತಕ್ಕೊಳಗಾದ ವೀನಸ್ ನಿವೃತ್ತಿ ಘೋಷಿಸಿದರು. ಇದರಿಂದಾಗಿ ಎದುರಾಳಿ ಆಂಡ್ರಿಯಾರನ್ನು ವಿಜಯಿಯೆಂದು ಘೋಷಿಸಲಾಯಿತು.
ಮೊದಲ ಸುತ್ತಿನಲ್ಲಿ 0-1 ಅಂತರದ ಹಿನ್ನೆಡೆ ಅನುಭವಿಸಿದ ವೀನಸ್ ದಿಢೀರನೆ ಸ್ನಾಯು ಸೆಳೆತಕ್ಕೊಳಗಾದರು. ನಂತರ ಫಿಸಿಯೊ ಸಂಪರ್ಕಿಸಿದ ಏಳು ಬಾರಿಯ ಗ್ರಾಂಡ್‌ಸ್ಲಾಮ್ ಚಾಂಪಿಯನ್ ವೀನಸ್ ನಿವೃತ್ತಿ ಘೋಷಿಸಲು ನಿರ್ಧರಿಸಿದರು.
ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿಯೇ ವೀನಸ್ ಸಹೋದರಿ ಆಗಿರುವ ಸೆರೆನಾ ವಿಲಿಯಮ್ಸ್ ಈ ಪ್ರತಿಷ್ಠಿತ ಕೂಟದಲ್ಲಿ ಭಾಗವಹಿಸದಿರಲು ನಿರ್ಧರಿಸದ್ದರು.