ಮುಂದಿನ 2014ರ ಏಷ್ಯನ್ ಗೇಮ್ಸ್ ಪಂದ್ಯಾವಳಿ ಕೊರಿಯಾ ಇಂಚೆಹಾನ್ ನಗರದಲ್ಲಿ ನಡೆಯಲಿದ್ದು, ಭಾರತ ಕಬಡ್ಡಿ ಮತ್ತು ಕ್ರಿಕೆಟ್ ವಿಭಾಗಗಳಲ್ಲಿ ಪಾಲ್ಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಗುವಾಂಗ್‌ಝೌ ನಗರದಲ್ಲಿ ನಡೆದ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಪರಿಚಯಿಸಲಾಗಿದ್ದು, ಭಾರತ ತಂಡ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರಲಿಲ್ಲವಾದ್ದರಿಂದ 17ನೇ ಸ್ಥಾನಕ್ಕೆ ತೃಪ್ತಿಪಡಜಬೇಕಾಯಿತು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಕಬಡ್ಡಿ ವಿಭಾಗದಲ್ಲಿ ಭಾರತದ ಕ್ರೀಡಾಪಟುಗಳು ಮಹಿಳಾ ಮತ್ತು ಪುರುಷರ ವಿಭಾಗದ ಎರಡು ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾದರು.
ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ 28 ಒಲಿಂಪಿಕ್ ಪಂದ್ಯಾವಳಿಗಳು ಸೇರಿದಂತೆ ಕಬಡ್ಡಿ, ಸ್ಕ್ವಾಷ್ ಮತ್ತು ವುಷು ಸೇರಿದಂತೆ ಒಟ್ಟು 35 ಕ್ರೀಡೆಗಳಿಗೆ ಅನುಮತಿ ನೀಡಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.