ವಿಶ್ವದ ಮಹಿಳಾ ಟೆನಿಸ್ ಅಸೋಸಿಯೇಶನ್, ಪ್ರಸಕ್ತ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ಬೆಲ್ಜಿಯನ್‌ನ ಕಿಮ್ ಕ್ಲಿಸ್ಟರ್ಸ್‌ಗೆ ವರ್ಷದ ಆಟಗಾರ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಸಕ್ತ ವರ್ಷದ ಅವಧಿಯಲ್ಲಿ ಹಲವಾರು ನೂತನ ಆಟಗಾರ್ತಿಯರ ವಿರುದ್ಧ ಹಣಾಹಣಿಯಲ್ಲಿ ಪಾಲ್ಗೊಂಡಿದ್ದೇನೆ. ಪ್ರತಿಯೊಬ್ಬರು ಪ್ರತಿಭಾವಂತ ಆಟಗಾರ್ತಿಯರಾಗಿದ್ದಾರೆ ಎಂದು ಕ್ಲಿಸ್ಟರ್ಸ್ ಎದುರಾಳಿಗಳ ಆಟದ ವೈಖರಿಯನ್ನು ಪ್ರಶಂಸಿದ್ದಾರೆ.
ವರ್ಷದ ಆಟಗಾರ್ತಿಯಾಗಿ ಆಯ್ಕೆ ಮಾಡಿರುವುದಕ್ಕೆ ಸಂತಸವಾಗಿದೆ. ನನ್ನ ಸಹ ಆಟಗಾರರು ಹಾಗೂ ಮಾಧ್ಯಮಗಳು ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಧನ್ಯವಾದಗಳು. ಆಸ್ಟ್ರೇಲಿಯಾ ಓಪನ್ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಎಲ್ಲ ಆಟಗಾರರನ್ನು ಭೇಟಿಯಾಗುವ ಅವಕಾಶಗಳಿವೆ ಎಂದು ತಿಳಿಸಿದ್ದಾರೆ.
ರಷ್ಯಾದ ಎಲೆನಾ ಡೆಮೆಂಟಿವಾ ಮತ್ತು ಮರಿಯಾ ಶರಪೋವಾ ಕೂಡಾ ಈಗಾಗಲೇ ವರ್ಷದ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಟೆನಿಸ್ ಅಸೋಸಿಯೇಶನ್ ಮೂಲಗಳು ತಿಳಿಸಿವೆ.