ಏಷ್ಯನ್ ಗೇಮ್ಸ್‌ನ 10000 ಮೀಟರ್ ಹಾಗೂ 3000 ಮೀಟರ್ ಓಟದಲ್ಲಿ ಭಾರತದ ಕ್ರೀಡಾಪಟುಗಳಾದ ಪ್ರೀಜಾ ಶ್ರೀಧರನ್ ಮತ್ತು ಸುಧಾ ಸಿಂಗ್ ಚಿನ್ನದ ಪದಕಗಳನ್ನು ಪಡೆದು ದೇಶಕ್ಕೆ ಗೌರವ ತಂದಿದ್ದಾರೆ.
ಮತ್ತೊಬ್ಬ ಭಾರತೀಯ ಕ್ರೀಡಾಪಟು ಕವಿತಾ ರೌವುತ್, 10,000 ಮೀಟರ್ ಓಟದಲ್ಲಿ ಎರಡನೇಯವರಾಗಿ ತಲುಪಿ ಬೆಳ್ಳಿ ಪದಕ ಪಡೆದಿದ್ದಾರೆ.
28 ವರ್ಷ ವಯಸ್ಸಿನ ಪ್ರೀಜಾ, ಕೇರಳದ ಇಡುಕ್ಕಿ ಜಿಲ್ಲೆಯವರಾಗಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತರಾದ ಕವಿತಾ, ಮಹಾರಾಷ್ಟ್ರ ಮೂಲದವರಾಗಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗಳಿಸುವ ಅವಕಾಶ ಕಳೆದುಕೊಂಡು ನಿರಾಸೆಯನ್ನು ಅನುಭವಿಸಿದ್ದೆ.ಆದರೆ, ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗಳಿಸಿರುವುದಕ್ಕೆ ಸಂತಸವಾಗಿದೆ ಎಂದು ಪ್ರೀಜಾ ಹೇಳಿದ್ದಾರೆ.