ಯುಎಸ್ ಓಪನ್: ಫೆಡರರ್, ಸಫಿನಾ ಅಗ್ರ ಶ್ರೇಯಾಂಕಿತರು
ನ್ಯೂಯಾರ್ಕ್ , ಬುಧವಾರ, 26 ಆಗಸ್ಟ್ 2009 (09:36 IST)
ಮಾಸಾಂತ್ಯದಲ್ಲಿ ಆರಂಭವಾಗಲಿರುವ ಅಮೆರಿಕನ್ ಓಪನ್ ಗ್ರಾಂಡ್‌ಸ್ಲಾಮ್ ಟೂರ್ನಮೆಂಟ್‌ನಲ್ಲಿ ವಿಶ್ವದ ನಂ.1 ಆಟಗಾರ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ರಷ್ಯಾದ ದಿನಾರಾ ಸಫಿನಾ ಕ್ರಮವಾಗಿ ಪುರುಷ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಟ್ಟವನ್ನು ಆಲಂಕರಿಸಿದ್ದಾರೆ.ಯುಎಸ್ ಟೆನಿಸ್ ಅಸೋಸಿಯೇಷನ್, ಎಟಿಪಿ ಮತ್ತು ಡಬ್ಲ್ಯುಟಿಎ ರ‌್ಯಾಂಕಿಂಗ್ ಆಧಾರದ ಮೇಲೆ ಶ್ರೇಯಾಂಕವನ್ನು ನೀಡಲಾಗಿದೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಹಾಲಿ ಚಾಂಪಿಯನ್ ಅಮೆರಿಕಾದ ಸೆರೆನಾ ವಿಲಿಯಮ್ಸ್ ಎರಡನೇ ಶ್ರೇಯಾಂಕ ಪಡೆದುಕೊಂಡರೆ ಸಹೋದರಿ ವೀನಸ್ ವಿಲಿಯಮ್ಸ್ ಮೂರನೇ ಶ್ರೇಯಾಂಕಿತೆಯಾಗಿದ್ದಾರೆ.
ಬೀಜಿಂಗ್ ಒಲಿಂಪಿಕ್ ಚಿನ್ನ ಪದಕ ವಿಜೇತೆ ಇಲೆನಾ ಡಿಮೆಂಟಿವಾ ನಾಲ್ಕು ಹಾಗೂ ಕಳೆದ ಬಾರಿಯ ರನ್ನರ್ ಅಪ್ ಜೆಲೆನಾ ಜಾಂಕೊವಿಕ್ ಐದನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ನಂ.2 ಸ್ಥಾನದಲ್ಲಿರುವ ಬ್ರಿಟನ್‌ನ ಆಂಡಿ ಮುರ್ರೆ ಎರಡು, ಸ್ಪೇನ್‌ನ ರಾಫೆಲ್ ನಡಾಲ್ ಮೂರು ಮತ್ತು ಸೆರ್ಬಿಯಾದ ನೊವಾಕ್ ಜೊಕೊವಿಕ್ ನಾಲ್ಕನೇ ಶ್ರಯಾಂಕ ಪಡೆದಿದ್ದಾರೆ.ಅದೇ ವೇಳೆ 2003ರ ಅಮೆರಿಕನ್ ಓಪನ್ ಮುಕುಟಧಾರಿ ಸ್ಥಳೀಯ ಹೀರೊ ಆಂಡಿ ರಾಡಿಕ್ ಐದನೇ ಶ್ರೇಯಾಂಕ ಪಡೆದಿದ್ದಾರೆ.ಯುಎಸ್ ಓಪನ್ ಆಗಸ್ಟ್ 31 ಸೋಮವಾರದಿಂದ ಆರಂಭವಾಗಲಿದೆ.