Select Your Language

Notifications

webdunia
webdunia
webdunia
webdunia

ಐಟಿಎಫ್: ಎರಡನೇ ಸುತ್ತಿಗೆ ಯೂಕಿ ಭಾಂಬ್ರಿ

ಐಟಿಎಫ್: ಎರಡನೇ ಸುತ್ತಿಗೆ ಯೂಕಿ ಭಾಂಬ್ರಿ
ನವದೆಹಲಿ , ಬುಧವಾರ, 26 ಆಗಸ್ಟ್ 2009 (09:30 IST)
PR
PR
ಉದಯೋನ್ಮುಖ ಆಟಗಾರ ಯೂಕಿ ಭಾಂಬ್ರಿ, ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ ನೇತೃತ್ವದಲ್ಲಿ ಇಲ್ಲಿನ ಡಿಲ್‌ಟಿಎ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಐಟಿಎಫ್ ಟೂರ್ನೆಮೆಂಟ್‌‌ನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಎರಡನೇ ಶ್ರೇಯಾಂಕಿತ ಯೂಕಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಬ್ರಿಟ್ ಟಿಮ್ ಬ್ರಾಡ್‌ಶಾರನ್ನು 7-5, 6-4ರ ಕಠಿಣ ಸೆಟ್‌ನಲ್ಲಿ ಮಣಿಸಿದರು.

ಹತ್ತು ಸಾವಿರ ಅಮೆರಿಕನ್ ಡಾಲರ್ ಬಹುಮಾನ ಹೊಂದಿರುವ ಈ ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ವಿಷ್ಣು ವರ್ಧನ್ ಭಾರತದವರೇ ಆದ ವಿಜಯ್ ಸುಂದರ್ ಪ್ರಶಾಂತ್ ಮೇಲೆ 7-5, 6-3ರ ಮೇಲುಗೈ ಸ್ಥಾಪಿಸಿದರು.

ಆರನೇ ಶ್ರೇಯಾಕಿತ ರೋಹನ್ ಗಜ್ಜಾರ್, ವಿವೇಕ್ ಶೋಕಿನ್ ಮತ್ತು ಎಂಟನೇ ಶ್ರೇಯಾಂಕಿತ ಆರ್. ಮುರುಗೇಷನ್ ಸಹ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ವಿವೇಕ್ ಪ್ರಬಲ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕಿತ ಜಪಾನ್‌ನ ಕೆಂಟೊ ತಾಕೆಚಿರನ್ನು 6-3, 6-4ರಲ್ಲಿ ಮಣಿಸಿ ಅಚ್ಚರಿ ಫಲಿತಾಂಶಕ್ಕೆ ಕಾರಣರಾದರು.

Share this Story:

Follow Webdunia kannada