Select Your Language

Notifications

webdunia
webdunia
webdunia
webdunia

ಏಗಾನ್ ಡಬಲ್ಸ್: ಸಾನಿಯಾ ಜೋಡಿ ಪರಾಜಯ

ಏಗಾನ್ ಡಬಲ್ಸ್: ಸಾನಿಯಾ ಜೋಡಿ ಪರಾಜಯ
ಇಂಗ್ಲೆಂಡ್ , ಬುಧವಾರ, 17 ಜೂನ್ 2009 (13:42 IST)
ಭಾರತದ ಸಾನಿಯಾ ಮಿರ್ಜಾ ಹಾಗೂ ಚೀನಾ ತೈಪೆಯ ಚಿಯಾ ಜುಂಗ್ ಚುವಾಂಗ್ ಜೋಡಿ ಇಲ್ಲಿ ನಡೆಯುತ್ತಿರುವ ಏಗಾನ್ ಅಂತಾರಾಷ್ಟ್ರೀಯ ಟೆನಿಸ್ ಡಬಲ್ಸ್ ಹಣಾಹಣಿಯ ಪ್ರಥಮ ಸುತ್ತಿನಲ್ಲಿ ಎದುರಾಳಿ ಆಸ್ಟ್ರೇಲಿಯಾದ ನಾಲ್ಕನೇ ಶ್ರೇಯಾಂಕದ ಸಾಮಂತಾ ಸ್ಟೋಸುರ್ ಮತ್ತು ರೆನ್ನೈ ಸ್ಟುಬ್ಸ್‌ ಜೋಡಿ 5-7, 4-6ರ ಅಂತರದಲ್ಲಿ ಸೋಲಿನ ರುಚಿ ಉಣಿಸಿದರು.

ಇದರೊಂದಿಗೆ ಹೈದರಬಾದ್‌ನ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಜೋಡಿ ಏಗಾನ್ ಅಂತಾರಾಷ್ಟ್ರೀಯ ಟೆನಿಸ್ ಪಂದ್ಯದಲ್ಲೂ ತಮ್ಮ ಸೋಲಿನ ಯಾತ್ರೆಯನ್ನು ಮುಂದುವರಿಸುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ಅಲ್ಲದೇ ಏಗಾನ್ ಇಂಟರ್‌ನ್ಯಾಷನಲ್ ಎಟಿಪಿ ಟೂರ್ನಮೆಂಟ್ ಡಬಲ್ಸ್ ವಿಭಾಗದಲ್ಲಿ ಎರಡನೇ ಶ್ರೇಯಾಂಕಿತ ಜೋಡಿ ಮಹೇಶ್ ಭೂಪತಿ - ಮಾರ್ಕ್ ನೋವ್ಲ್ಸ್ ಪ್ರಥಮ ಸುತ್ತಿನಲ್ಲಿ ಗೆಲುವು ಸಾಧಿಸಿದೆ.

ಇಂಗ್ಲೆಂಡ್‌ನ ಈಸ್ಟಬೋರ್ನ್‌ನಲ್ಲಿ ಆರಂಭವಾಗಿರುವ ಈ ಟೂರ್ನಮೆಂಟ್‌ನಲ್ಲಿ ಭಾರತ-ಬಹಾಮಾಸ್ ಜೋಡಿ ಆರಂಭಿಕ ಸೆಟ್ ಕಳೆದುಕೊಂಡರೂ ನಂತರದ ಸೆಟ್‌ಗಳಲ್ಲಿ ಪಾರಮ್ಯತೆ ಮೆರೆಯುವ ಮೂಲಕ ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ.

ಇಂಗ್ಲೆಂಡ್-ಜರ್ಮನಿ ಜೋಡಿ ಸ್ಟೀಫನ್ ಹಸ್ - ರೋಸ್ ಹಚ್ಕಿನ್ಸ್ ವಿರುದ್ಧ ಅವರು 4-6, 7-6(4), 10-3ರ ಅಂತರದಿಂದ ಜಯ ಸಾಧಿಸುವ ಮೂಲಕ ಆರಂಭಿಕ ಸುತ್ತನ್ನು ಯಶಸ್ವಿಯಾಗಿ ಮುಗಿಸಿದ್ದರು.

Share this Story:

Follow Webdunia kannada