ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿದ್ದ ಸೆರ್ಬಿಯಾದ 5ನೇ ಶ್ರೇಯಾಂಕದ ಆಟಗಾರ್ತಿ ಜೆಲೆನಾ ಜಾಂಕೋವಿಕ್ ಎದುರಾಳಿ ರೋಮಾನಿಯಾದ ಸೋರಾನಾ ಸಿರಾಸ್ಟೇಯ ಎದುರು 3-6, 6-0, 9-7ರ ಅಂತರದಲ್ಲಿ ಪರಾಜಯಗೊಳ್ಳುವ ಮೂಲಕ ಪಂದ್ಯದಿಂದ ನಿರ್ಗಮಿಸಿದ್ದಾರೆ.
ಸೋಮವಾರ ನಡೆದ ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ 19ರ ಹರೆಯದ ಶ್ರೇಯಾಂಕ ರಹಿತ ಆಟಗಾರ್ತಿ ಸೋರಾನಾ ಅಗ್ರ ಶ್ರೇಯಾಂಕದ ಆಟಗಾರ್ತಿ ಜೆಲೆನಾ ಅವರಿಗೆ ಸೋಲಿಣಿಸುವ ಮೂಲಕ ಪ್ರಥಮ ಬಾರಿಗೆ ಕ್ವಾರ್ಟರ್ ಫೈನಲ್‌ಗೆ ಕಾಲಿಟ್ಟಿದ್ದಾರೆ.
1997ರ ಯುಎಸ್ ಓಪನ್ ಗೆಲುವಿನ ನಂತರ ಇದೇ ಮೊದಲ ಬಾರಿಗೆ ರೋಮಾನಿಯನ್ ಮಹಿಳೆಯೊಬ್ಬರು ಟೆನಿಸ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದಂತಾಗಿದೆ.
ಜೆಲೆನಾ ಜಾಂಕೋವಿಕ್ ಕಳೆದ ಎರಡು ವರ್ಷಗಳಲ್ಲಿ ರೋಲ್ಯಾಂಡ್ ಗ್ಯಾರೋಸ್ ಅಂಕಣದಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದರು. ಆದರೆ ಸೋಮವಾರದ ಪಂದ್ಯದ ಮೊದಲ ಸೆಟ್‌ನಲ್ಲಿಯೇ ಸಿರೆಸ್ಟೇಯ 3-1ರ ಅಂತರದಿಂದ ಮುನ್ನಡೆ ಸಾಧಿಸಿದ್ದರು. ನಂತರದ ಸೆಟ್‌ಗಳಲ್ಲಿಯೂ ಜಯಗಳಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.