Select Your Language

Notifications

webdunia
webdunia
webdunia
webdunia

ಫ್ರೆಂಚ್ ಓಪನ್: ನೋವಾಕ್ 3ನೇ ರೌಂಡ್‌ಗೆ

ಫ್ರೆಂಚ್ ಓಪನ್: ನೋವಾಕ್ 3ನೇ ರೌಂಡ್‌ಗೆ
ಪ್ಯಾರಿಸ್ , ಶುಕ್ರವಾರ, 29 ಮೇ 2009 (17:22 IST)
PTI
ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಡೆದ ಎರಡನೇ ಸುತ್ತಿನ ಹಣಾಹಣಿಯಲ್ಲಿ ನೋವಾಕ್ ಜೋಕೋವಿಕ್ ಎದುರಾಳಿ ಉಕ್ರೈನಿನ ಸೆರ್ಗೈ ಸ್ಟಾಕೋವೋಸ್ಕಿ ಅವರನ್ನು 6-3, 6-4, 6-1ರ ಅಂತರಗಳಿಂದ ಸೋಲಿಸುವ ಮೂಲಕ ಮೂರನೇ ಸುತ್ತಿಗೆ ಕಾಲಿಟ್ಟಿದ್ದಾರೆ.

ಗುರುವಾರ ನಡೆದ ಮೊದಲ ಎರಡು ಸೆಟ್‌ಗಳ ಪಂದ್ಯಗಳಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ ನೋವಾಕ್ ಜಯಶಾಲಿಯಾಗಿದ್ದರು. ಆದರೆ ಮಳೆಯ ಛಾಯೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

2008ರಲ್ಲಿ ನೋವಾಕ್ ಜೋಕೋವಿಕ್ ಅವರು ಆಸ್ಟ್ರೇಲಿಯನ್ ಓಪನ್‌ ಗ್ರ್ಯಾಂಡ್ ಸ್ಲಾಮ್ ಟೈಟಲ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಅಲ್ಲದೇ ಉಳಿದ ನಾಲ್ಕು ಪ್ರಮುಖ ಟೆನಿಸ್ ಟೂರ್ನ್‌ಮೆಂಟ್‌ಗಳಲ್ಲಿ ಸೆಮಿಫೈನಲ್ ತನಕ ಪ್ರವೇಶಿಸಿದ್ದರಾದರೂ ಗೆಲುವು ಕಾಣಲು ವಿಫಲರಾಗಿದ್ದರು.

Share this Story:

Follow Webdunia kannada