ರಾಫೆಲ್ ನಡಾಲ್, ಡೇವಿಡ್ ನಲ್ಬಾಂದಿಯನ್, ನಿಕೋಲೆ ಡೆವಿಡೆಂಕೋ, ಫೆಲಿಸಿಯಾನೋ ಲೊಪೆಜ್, ರಾಡೆಕ್ ಸ್ಟೆಫಾನೆಕ್, ಸ್ಟಾನಿಸ್ಲಾಸ್ ವಾವ್ರಿಂಕಾ, ಫೆರ್ನಾಂಡೋ ಗಂಜಾಲೆಜ್, ಜುವಾನ್ ಮೊನಾಕೊ, ಫೆರ್ನಾಂಡೋ ವಾರ್ಡಸ್ಕೋ, ಕ್ರಿಸ್ಟೋಫೆ ರೋಚಸ್, ನಿಕೋಲಾಸ್ ಆಲ್ಮಾಗ್ರೊ ಮುಂತಾದವರು ಬಾರ್ಸಿಲೋನಾ ಓಪನ್ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಒಂದನೇ ಶ್ರೇಯಾಂಕಿತ ಸ್ಪೇನ್‌ನ ರಾಫೆಲ್ ನಡಾಲ್‌ರವರು ಪೋರ್ಚುಗಲ್‌ನ ಫ್ರೆಡೆರಿಕೋ ಗಿಲ್‌ರನ್ನು 6-2, 6-2ರ ನೇರ ಸೆಟ್‌ಗಳಿಂದ ಹಾಗೂ ಬೆಲ್ಜಿಯಂನ ಕ್ರಿಸ್ಟೋಫೆ ರೋಚಸ್‌ರವರು ಫ್ರಾನ್ಸ್‌ನ 13ನೇ ಶ್ರೇಯಾಂಕಿತ ರಿಚರ್ಡ್ ಗಾಸ್ಕೆಟ್‌ರನ್ನು 6-1, 6-7, 6-3ರಿಂದ ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸ್ಪೇನ್‌ನ 10ನೇ ಶ್ರೇಯಾಂಕಿತ ನಿಕೋಲಾಸ್ ಆಲ್ಮಾಗ್ರೊರವರು ಅರ್ಜೆಂಟೈನಾದ ಜುವಾನ್ ಇಗ್ನಾಸಿಯೋ ಚೆಲಾ ವಿರುದ್ಧ 3-6, 7-6, 6-3 ಹಾಗೂ ರಷ್ಯಾದ ಇಗೋರ್ ಕುನಿತ್ಸಿಯನ್ ವಿರುದ್ಧ ಅರ್ಜೆಂಟೈನಾದ ಏಳನೇ ಶ್ರೇಯಾಂಕಿತ ಡೇವಿಡ್ ನಲ್ಬಾಂದಿಯನ್ 7-5, 6-4ರ ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದು ಮೂರನೇ ಸುತ್ತು ಪ್ರವೇಶಿಸಿದರು.
ರಷ್ಯಾ ಮೂರನೇ ಶ್ರೇಯಾಂಕಿತ ನಿಕೋಲೆ ಡೆವಿಡೆಂಕೋರವರು ಫ್ರಾನ್ಸ್‌ನ ಅರ್ನಾಡ್ ಕ್ಲೆಮಂಟ್ ವಿರುದ್ಧ 7-6, 6-2 ಹಾಗೂ ಸ್ಪೇನ್‌ನ ಸಾಂಟಿಗೋ ವೆಂಚುರಾ ಬೆರ್ತುಮೋ ವಿರುದ್ಧ ಅವರದೇ ದೇಶದ 16ನೇ ಶ್ರೇಯಾಂಕಿತ ಫೆಲಿಸಿಯಾನೋ ಲೊಪೆಜ್ 2-6, 6-4, 6-3ರಿಂದ ಜಯ ಸಾಧಿಸಿದರು.
ಝೆಕ್ ಗಣರಾಜ್ಯದ ರಾಡೆಕ್ ಸ್ಟೆಫಾನೆಕ್‌ರವರು ಸೆರ್ಬಿಯಾದ ಜಾಂಕೋ ತಿಪ್ಸಾರ್‌ವಿಕ್ ವಿರುದ್ಧ 7-6, 6-0 ಹಾಗೂ ಸ್ವಿಟ್ಜರ್ಲೆಂಡ್‌ನ ಎಂಟನೇ ಶ್ರೇಯಾಂಕಿತ ಸ್ಟಾನಿಸ್ಲಾಸ್ ವಾವ್ರಿಂಕಾರೆದುರು ರಷ್ಯಾದ ಮೈಖೆಲ್ ಯೋಜ್ನಿಯವರು 7-5, 6-1ರಿಂದ ಸೋಲೊಪ್ಪಿಕೊಂಡಿದ್ದಾರೆ.
ಅರ್ಜೆಂಟೈನಾದ ಜೋಸ್ ಅಕಾಸುಸೋ ವಿರುದ್ಧ ಚಿಲಿಯ ಫೆರ್ನಾಂಡೋ ಗೊಂಜಾಲೆಜ್ 6-4, 6-4 ಹಾಗೂ ಸ್ಪೇನ್‌ನ ಡೇನಿಯಲ್ ಗಿಮೆನೋ ಟ್ರಾವೆರ್ ವಿರುದ್ಧ ಅರ್ಜೆಂಟೈನಾದ ಜುವಾನ್ ಮೊನಾಕೊ 7-5, 6-4ರ ಜಯ ಸಾಧಿಸಿದರು.
ಸ್ಪೇನ್‌ನ ಆಸ್ಕರ್ ಹೆರ್ನಾಂಡೆಜ್ ವಿರುದ್ಧ ಝೆಕ್ ಗಣರಾಜ್ಯದ ತೋಮಸ್ ಬೆರ್ಡಿಚ್‌ರವರು 6-2, 4-6, 6-3 ಹಾಗೂ ಈಕ್ವೆಡಾರ್‌ನ ನಿಕೋಲಾಸ್ ಲಾಪೆಂಟಿ ವಿರುದ್ಧ ಸ್ಪೇನ್‌ನ ಎರಡನೇ ಶ್ರೇಯಾಂಕಿತ ಫೆರ್ನಾಂಡೋ ವಾರ್ಡಸ್ಕೋರವರು 7-5, 6-3ರಿಂದ ಜಯ ದಾಖಲಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.