Select Your Language

Notifications

webdunia
webdunia
webdunia
webdunia

ಯ‌ೂಕಿ ಆಸ್ಟ್ರೇಲಿಯನ್ ಓಪನ್ ಬಾಲಕರ ಚಾಂಪಿಯನ್

ಜೂನಿಯರ್ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಮ‌ೂರನೇ ಭಾರತೀಯ

ಯೂಕಿ ಭಾಂಬ್ರಿ
ಮೆಲ್ಬೋರ್ನ್ , ಶನಿವಾರ, 31 ಜನವರಿ 2009 (10:45 IST)
ಜರ್ಮನಿಯ ಅಲೆಕ್ಸಾಂಡ್ರಸ್ ಫೆರ್ಡಿನಾಂಡಸ್ ಜ್ಯಾರ್ಜಡಸ್‌ರನ್ನು ಫೈನಲ್‌ನಲ್ಲಿ ಮಣಿಸಿರುವ ಭಾರತದ ಯುವ ಪ್ರತಿಭಾಂತ ಆಟಗಾರ ಹಾಗೂ ವಿಶ್ವದ ಜೂನಿಯರ್ ನಂ.2 ಆಟಗಾರ ಯ‌ೂಕಿ ಭಾಂಬ್ರಿ ಆಸ್ಟ್ರೇಲಿಯನ್ ಓಪನ್ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಎದುರಾಳಿಯನ್ನು ತನ್ನ ನಿಖರ ಸರ್ವ್‌ಗಳ ಮ‌ೂಲಕ ತಬ್ಬಿಬ್ಬು ಮಾಡುತ್ತಾ ಹೋದ ಭಾರತದ ಮುಂದಿನ ಭರವಸೆಯ ಸಿಂಗಲ್ಸ್ ಆಟಗಾರ ಯ‌ೂಕಿ ಫೈನಲ್ ಪಂದ್ಯವನ್ನು 6-3, 6-1 ಅಂತರದಿಂದ ಗೆದ್ದುಕೊಂಡರು. ಮೊದಲ ಸೆಟ್‌ನಲ್ಲಿ ಎದುರಾಳಿಯ ಪ್ರಭಾವವನ್ನು ಸಾಕಷ್ಟು ಕುಗ್ಗಿಸಿದ ಯ‌ೂಕಿ ಎರಡನೇ ಸೆಟ್‌ನಲ್ಲಿ ಕೇವಲ ಒಂದು ಅಂಕ ದಾಖಲಿಸಲು ಮಾತ್ರ ಜರ್ಮನಿಯ ಆಟಗಾರನಿಗೆ ಅವಕಾಶ ನೀಡಿದ್ದರು. ಎರಡೂ ಸೆಟ್‌ಗಳಲ್ಲಿ ಭಾರೀ ಅಂತರದೊಂದಿಗೆ ಜಯ ದಾಖಲಿಸಿದ ಪರಿಣಾಮ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಫನ್ ಜೂನಿಯರ್ ಕಿರೀಟ ಯ‌ೂಕಿ ಮುಡಿಗೇರಿತು.

ಇವರು ಮೊದಲ ಸುತ್ತಿನಲ್ಲಿ ಜರ್ಮನಿಯ ಸಾಂಚೆಜ್ ಡೆಲ್ಫಿನ್, ಎರಡನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಸ್ಟೀಫನ್ ಹೋಹ್, ಮ‌ೂರನೇ ಸುತ್ತಿನಲ್ಲಿ ಕ್ರೊವೇಷಿಯಾದ ಡಿನೋ ಮಾರ್ಕನ್, ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ರಿಚರ್ಡ್ ಬೇಕರ್, ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ಆಡ್ರಿಯನ್ ಪುಗೆಟ್‌ರನ್ನು ಮಣಿಸಿ 2009ರ ಆಸ್ಟ್ರೇಲಿಯಾ ಓಪನ್ ಸಿಂಗಲ್ಸ್ ಬಾಲಕರ ಫೈನಲ್ ಪ್ರವೇಶಿಸಿದ್ದರು.

ಯ‌ೂಕಿ ಪ್ರಶಸ್ತಿ ಪಡೆಯುವುದರೊಂದಿಗೆ ಭಾರತದ ಮ‌ೂರನೇ ಆಟಗಾರ ಜೂನಿಯರ್ ಪ್ರಶಸ್ತಿ ಪಡೆದಂತಾಗಿದೆ. ಈ ಮೊದಲು ರಮೇಶ್ ಕೃಷ್ಣನ್‌ರವರು 1979ರಲ್ಲಿ ಫ್ರೆಂಚ್ ಮತ್ತು ವಿಂಬಲ್ಡನ್ ಪ್ರಶಸ್ತಿ ಹಾಗೂ ಲಿಯಾಂಡರ್ ಪೇಸ್ 1990ರಲ್ಲಿ ವಿಂಬಲ್ಡನ್ ಹಾಗೂ 1991ರಲ್ಲಿ ಅಮೆರಿಕನ್ ಓಪನ್ ಜೂನಿಯರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು.

ಯ‌ೂಕಿ ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಬಾಲಕರ ವಿಭಾಗದಲ್ಲಿ ಸೆಮಿಫೈನಲ್ ಏರುವಷ್ಟರಲ್ಲಿ ಮುಗ್ಗರಿಸಿ ಪ್ರಶಸ್ತಿಯಿಂದ ದೂರ ಉಳಿದಿದ್ದರು. ಎದುರಾಳಿ ಆಸ್ಟ್ರೇಲಿಯಾದ ಬೆರ್ನಾರ್ಡ್ ಟೊಮಿಕ್‌ರೆದುರು 6-0, 5-7, 6-1ರಿಂದ ಪರಾಜಯಗೊಂಡ ಕಾರಣ ಫೈನಲ್ ಪ್ರವೇಶ ಸಾಧ್ಯವಾಗಿರಲಿಲ್ಲ.

2008ರ ಆರಂಭದಲ್ಲಿ ಜೂನಿಯರ್ ವಿಶ್ವ ಟೆನಿಸ್ ರ‌್ಯಾಂಕಿಂಗ್‌ನಲ್ಲಿ ಅಗ್ರ 20ರೊಳಗೆ ಕಾಣಿಸಿಕೊಂಡಿದ್ದ ಯ‌ೂಕಿ ಭಾಂಬ್ರಿ ವರ್ಷಾಂತ್ಯದಲ್ಲಿ ನಂ.2ಕ್ಕೇರಿದ್ದರು. ಖ್ಯಾತ ಟೆನಿಸ್ ಆಟಗಾರ್ತಿಯರಾದ ಸಾನಾ ಭಾಂಬ್ರಿ ಮತ್ತು ಅಂಕಿತಾ ಭಾಂಬ್ರಿ ಇವರ ಸಹೋದರಿಯರು.

Share this Story:

Follow Webdunia kannada