Select Your Language

Notifications

webdunia
webdunia
webdunia
webdunia

ರಾಡಿಕ್ ಕ್ವಾರ್ಟರ್ ಫೈನಲ್‌ಗೆ

ರಾಡಿಕ್ ಕ್ವಾರ್ಟರ್ ಫೈನಲ್‌ಗೆ
ಫ್ರಾನ್ಸ್‌ , ಶುಕ್ರವಾರ, 24 ಅಕ್ಟೋಬರ್ 2008 (14:39 IST)
ಅಮೆರಿಕನ್ ರಾಬಿ ಗಿನೇಪ್ರಿಯವರನ್ನು ಗುರುವಾರ 7-6, 7-6ರ ಮೂಲಕ ಮಣಿಸಿರುವ ಅಗ್ರ ಶ್ರೇಯಾಂಕಿತ ಆಂಡಿ ರಾಡಿಕ್ ಲಿಯಾನ್ ಗ್ರ್ಯಾಂಡ್ ಫ್ರಿಕ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

"ರಾಬಿ ನಿಸ್ಸಂದೇಹವಾಗಿ ನನ್ನಿಂದ ಉತ್ತಮವಾಗಿ ಆಡಿದರು. ಆದರೆ ನನ್ನ ಸರ್ವ್‌ಗಳು ವ್ಯತ್ಯಾಸವನ್ನುಂಟು ಮಾಡಿವೆ" ಎಂದು ಎರಡನೇ ಟೈಬ್ರೇಕ್‌ನಲ್ಲಿ 26 ಏಸ್‌ನ ಸಹಿತ ಗಿನೇಪ್ರಿಯವರೆದುರು ಒಂದು ಸೆಟ್ ಪಾಯಿಂಟ್ ಗಳಿಸಿದ ವಿಶ್ವದ ಮಾಜಿ ನಂ.1 ರಾಡಿಕ್ ಪ್ರತಿಕ್ರಿಯಿಸಿದರು.

ರಾಡಿಕ್ ಕ್ವಾರ್ಟರ್ ಫೈನಲ್‌ನಲ್ಲಿ ರಾಬಿನ್ ಸೊಡೆರ್ಲಿಂಗ್‌ರನ್ನು ಎದುರಿಸಲಿದ್ದಾರೆ. ಏಳನೇ ಶ್ರೇಯಾಂಕಿತ ಸ್ವೀಡನ್‌ನ ರಾಬಿನ್‌ರವರು ಬಲ್ಜೇರಿಯನ್ ಕ್ರಿಸ್ಟೋಫ್ ರೋಖಸ್‌ರವರನ್ನು 6-1, 6-2ಕ್ಕೆ ಕೇವಲ 46 ನಿಮಿಷಗಳಲ್ಲಿ ಮಣಿಸಿ ಸುಲಭ ತುತ್ತಾಗಿಸಿಕೊಂಡಿದ್ದರು. ರಾಬಿನ್ ಇತ್ತೀಚೆಗೆ ನಡೆದ ಮೆಂಫಿಸ್‌ ಟೂರ್ನಮೆಂಟ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ರಾಡಿಕ್‌ರವರನ್ನು ಸೋಲಿಸಿದ್ದರು.

"ನನಗಿದು ಸುಲಭದ ಪಂದ್ಯವಲ್ಲ" ಎಂದು ಮುಂದಿನ ಪಂದ್ಯದ ಬಗ್ಗೆ ರಾಡಿಕ್ ಹೇಳಿರುವುದು ಕೂಡಾ ಗಮನಾರ್ಹವಾಗಿದೆ.


Share this Story:

Follow Webdunia kannada