ದಕ್ಷಿಣ ಆಫ್ರಿಕಾ ತಂಡಕ್ಕೆ ದಾಖಲೆಯ ಗೆಲುವು
ಟ್ವೆಂಟಿ-20 ಕಪ್: ಗಿಬ್ಸ್ ಮಿಂಚಿನಾಟ
ದಾಖಲೆಯ ಸವಾಲು ಬೆನ್ನತ್ತಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡಿಸ್ ವಿರುದ್ಧ ನಡೆದ,ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಪಂದ್ಯವನ್ನು ಎಂಟು ವಿಕೆಟ್‌ಗಳ ಅಂತರದಿಂದ ಗೆದ್ದು ದಾಖಲೆಯ ಜಯಸಾಧಿಸಿದೆ.
ಇಪ್ಪತ್ತು ಓವರುಗಳ ಆಟದಲ್ಲಿ ವೆಸ್ಟ್ ಇಂಡಿಸ್ ತಂಡ ನೀಡಿದ 206 ರನ್‌ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಹರ್ಷಲ್ ಗಿಬ್ಸ್ ಅವರ ಮಿಂಚಿನ 90 ರನ್‌ಗಳ ನೇರವಿನಿಂದ 4 ಎಸೆತಗಳು ಬಾಕಿ ಇರುವಂತಯೇ ಗೆಲುವಿನ ಕೇಕೆ ಹಾಕಿತು.
ಹರ್ಷಲ್ ಗಿಬ್ಸ್ ( 55 ಬಾಲ್, 12 ಬೌಂಡರಿ, 2 ಸಿಕ್ಸರ್)ಗಳ ನೆರವಿನಿಂದ 90 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಇನ್ನಿಂಗ್ಸ್ ಆರಂಭಿಸಿದ ಸ್ಮಿಥ್ 21 ಎಸೆತಗಳಲ್ಲಿ 28 ರನ್, ಜಸ್ಟಿನ್ ಕೆಂಪ್ 22 ಎಸೆತಗಳಲ್ಲಿ 46 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ವೆಸ್ಟ್ ಇಂಡಿಸ್ ತಂಡದವರು ನಿಗದಿತ 20 ಓವರುಗಳಲ್ಲಿ ಆರು ಹುದ್ದರಿಗಳ ನಷ್ಟಕ್ಕೆ 205 ರನ್‌ಗಳ ಸವಾಲಿನ ಮೊತ್ತ ಪೇರಿಸಿದರು.
ಆರಂಭಿಕ ದಾಂಡಿಗ ಕ್ರಿಸ್ ಗೆಲ್, ಬೇಕಾಬಿಟ್ಟಿಯಾಗಿ ಹರಿಣ ಬೌಲಿಂಗ್ ಪಡೆಯನ್ನು ಹಿಂಡಿ, 57 ಎಸೆತಗಳಲ್ಲಿ ಭರ್ತಿ 117 ರನ್‌ಗಳನ್ನು ತಂದಿತ್ತರು. ಇದರಲ್ಲಿ 60 ರನ್‌ಗಳು ಸಿಕ್ಸರ್‌ಗಳಿಂದ ಮತ್ತು 42 ರನ್‌ಗಳು ಬೌಂಡರಿಗಳಿಂದ ಬಂದವು.
ಡ್ವೆನ್ ಸ್ಮಿಥ್ 35 ರನ್‍ಗಳಿಸಿ ಫಿಲಾಂಡೆರ್ ಬೌಲಿಂಗ್‌ನಲ್ಲಿ ಹುದ್ದರಿ ಕಳೆದುಕೊಳ್ಳುವ ಮೂಲಕ ವೆಸ್ಟ್ ಇಂಡಿಸ್ ತಂಡ ಒಂದು ಬದಿಯಿಂದ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಇನ್ನೊಂದು ಬದಿಯಲ್ಲಿ ಗೆಲ್ಸ್‌ರಿಂದ ರನ್ ಕೂಡಿ ಹಾಕುವಿಕೆ ಚಾಲ್ತಿಯಲ್ಲಿ ಇತ್ತು.