Select Your Language

Notifications

webdunia
webdunia
webdunia
webdunia

ಚಕ್ ದಿಯಾ ಇಂಡಿಯಾ

ಕೋರಿಯಾವನ್ನು ಮಣಿಸಿದ ಭಾರತ

ಚಕ್ ದಿಯಾ  ಇಂಡಿಯಾ
ಚೆನ್ನೈ , ಸೋಮವಾರ, 10 ಸೆಪ್ಟಂಬರ್ 2007 (09:48 IST)
PTI
ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೆಡಿಯಂನಲ್ಲಿ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ತನ್ನ ಚಾಂಪಿಯನ್‌ಷಿಪ್ ಪಟ್ಟವನ್ನು ಉಳಿಸಿಕೊಂಡದ್ದು ಮಹತ್ವ ಅಲ್ಲ. ವಾಸ್ತವಿಕವಾಗಿ ಟೂರ್ನಿ ಉದ್ದಕ್ಕೂ ಆಡಿದ ರೀತಿ ಇದೆಯಲ್ಲ ಅದು ಮೆಚ್ಚಬೇಕಾದ್ದು,

ಅಪ್ಪಿತಪ್ಪಿಯೂ ಸೋಲಿನತ್ತ ಸುಳಿಯದ ಚಕ್‌ ದೇ ಇಂಡಿಯಾ, ಭರ್ತಿ 57 ಗೋಲುಗಳನ್ನು ಮಾಡಿದ್ದು ಅಲ್ಲದೇ ಎದುರಾಳಿಗೆ ಬರಿ ಐದು ಗೋಲು ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು, ನೋಡಿದರೆ, ಭಾರತದಲ್ಲಿ ಹಾಕಿಯ ಪುನರುತ್ಧಾನವಾಗಿದೆ ಯುದ್ದ ಕೂಗು ಚಕ್ ದೇ ಇಂಡಿಯಾ ಮುಗಿಲು ಮುಟ್ಟಿದೆ. ಇನ್ನು ಎರಡು ತಿಂಗಳು ಪಕ್ಕದ ಮನೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಅಲ್ಲೂ ನಮ್ಮವರು ಎಲ್ಲರಿಗೆ ಚಕ್ ನೀಡಿ ಬರಲಿ...

ಪ್ರಮಾದ ಹುಟ್ಟುಹಾಕುವ ಸಂಘಟಿತ ದಾಳಿಯನ್ನೇ ತನ್ನ ಅಸ್ತ್ರವನ್ನಾಗಿಸಿಕೊಂಡ ಭಾರತ, ದಕ್ಷಿಣ ಕೋರಿಯಾ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ತಾನು ಏಳು ಗೋಲು ಜಮಾ ಮಾಡಿ ಕೋರಿಯಾ ತಂಡ ಎರಡು ಗೋಲು ಗಳಿಸುವುದಕ್ಕೆ ಅವಕಾಶ ಮಾಡಿಕೊಟ್ಟಿತು.

ವಿರಾಮದ ನಂತರ ಪಂದ್ಯದಲ್ಲಿ ಕೋರಿಯಾ ತಂಡದ ಕೋಚ್ ಮ್ಯುಂಗ್ ಜುನ್ ಕೆಲಕಾಲ ಕಿರಿಕ್ ಮಾಡಿದರು. ಆರು ನಿಮಿಷಗಳ ಮೈದಾನದಿಂದ ಹೊರ ನಡೆದಿದ್ದರು. ಚೆನ್ನೈಗೆ ಬಂದಾಗಿನಿಂದ ಡೈಯೋರಿಯಾದಿಂದ ಕೊರಿಯಾ ತಂಡ ನರಳುತ್ತಿದೆ. ವಾಸ್ತವಿಕವಾಗಿ ಭಾರತ ಇಂದು ಪಂದ್ಯದ ಎಲ್ಲ ವಿಭಾಗಗಳಲ್ಲಿ ಅಜೇಯವಾಗಿ ಉಳಿಯಿತು ಎಂದು ಕೋರಿಯಾ ಕೋಚ್ ಹೇಳಿದರು.

ಸದಾ ಬಿಗಿ ಮುಖದಿಂದ ಇರುವ ಟೀಮ್ ಇಂಡಿಯಾ ಕೋಚ್ ಜಾಕ್ವಿಮ್ ಕರ್ವಾಲೋ. ಬಿಜಿಂಗ್ ಓಲಿಂಪಿಕ್ ಕ್ರೀಡಾಕೂಟಕ್ಕೆ ನಡೆಸುತ್ತಿರುವ ಸಿದ್ದತೆಯ ಒಂದು ಭಾಗ ಮಾತ್ರ. ನಮ್ಮ ಹುಡುಗರು ಚೆನ್ನಾಗಿ ಆಡಿದರು. ಹುಡುಗರ ಆಟದ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.

ಪ್ರಶಸ್ತಿಗಾಗಿ ನಡೆದ ಅಂತಿಮ ಸುತ್ತಿನ ಕಾದಾಟ, ಮೈದಾನದ ತುಂಬ ರೋಚಕ ವಾತಾವರಣವನ್ನು ಹುಟ್ಟು ಹಾಕಿತ್ತು, ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಸ್ಥಾನ ಪಡೆಯದೇ ಹಿಂದೆ ಬಿದ್ದಿದ್ದ ಪ್ರಭ್ಜೋತ್ ಸಿಂಗ್. ಅಂತಿಮ ಸುತ್ತಿನ ಕಾದಾಟದಲ್ಲಿ ಮುಂದೆ ಬಂದು ಮೊದಲ ಗೋಲು ದಾಖಲಿಸಿದರು ಅಲ್ಲಿಂದ ಶುರುವಾದ ಚಕ್ ದೇ ಇಂಡಿಯಾದ ಗೋಲಿನ ಸುರಿಮಳೆಯಲ್ಲಿ ಕೋರಿಯಾ ತನ್ನ ಚಾಂಪಿಯನ್ ಪಟ್ಟದ ಆಸೆ ಕೊಚ್ಚಿಕೊಂಡು ಹೋಯಿತು.

1993 ಏಷಿಯಾ ಕಪ್ ಪಂದ್ಯಾವಳಿಯಲ್ಲಿ ಭಾರತವನ್ನು 1-0 ಅಂತರದಿಂದ ಬಗ್ಗು ಬಡಿದಿದ್ದ ಕೋರಿಯಾ ಸುಲಭವಾಗಿ ಮಣಿಯುವ ತಂಡವಲ್ಲ. ಎಡ ಬದಿಯಿಂದ ಪದೇ ಪದೇ ದಾಳಿ ಮಾಡುತ್ತಿದ್ದ ಅವರು ಜಾನ್ ಜುಂಗ್ ಹ್ಯುನ್ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ಭಾರತದ ಸವಾಲಿಗೆ ಪ್ರತಿ ಉತ್ತರ ನೀಡಿದರು.
webdunia
PTI

ಸ್ಕೋರು ಸಮಗೊಂಡ ನಂತರ ಅದ್ಬುತ ರೀತಿಯಲ್ಲಿ ಮರಳಿ ದಾಳಿಗೆ ಇಳಿದ ಭಾರತ, 11ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ದಕ್ಕಿಸಿಕೊಂಡಿತು. ಪೆನಾಲ್ಟಿಯನ್ನು ದಿಲೀಪ್ ಟಿರ್ಕೆ ಡ್ರ್ಯಾಗ್ ಮಾಡಿದರೆ, ಎಸ್ ವಿ ಸುನಿಲ್, ಎದುರಾಳಿ ಗೋಲಿಯನ್ನು ವಂಚಿಸುವುದರಲ್ಲಿ ಸಫಲರಾದರು.

ಮುನ್ನಡೆ ಸಾಧಿಸಿದ್ದ ಭಾರತಕ್ಕೆ ದಕ್ಕೆಯಾಗಿದ್ದು ಸರ್ದಾರ್‌ನನ್ನು ಆರು ನಿಮಿಷಗಳ ಅಮಾನತ್ತಿಗೆ ಒಳಪಡಿಸಿದ್ದು, 17 ನೇ ನಿಮಿಷದಲ್ಲಿ ರೇಫ್ರಿಯಿಂದ ಅಮಾನತ್ತಿಗೆ ಒಳಗಾದ ಸರ್ದಾರ್ ಮೈದಾನಕ್ಕೆ ಆರು ನಿಮಿಷಗಳ ನಂತರ ವಾಪಸ್ಸಾದರು. ಅಲ್ಲಿಯವರೆಗೆ ಉಸಿರು ಬಿಗಿಹಿಡಿದು ಹತ್ತು ಆಟಗಾರರೊಂದಿಗೆ ಬಾರತ, ಕೋರಿಯಾ ತಂಡವನ್ನು ಎದುರಿಸಿತು.

31 ನೇ ನಿಮಿಷದಲ್ಲಿ ಭಾರತದ ದಾಳಿಯನ್ನು ತಡೆಯುವುದಕ್ಕೆ ಮುಂದೆ ಬರುತ್ತಿದ್ದ ಕೊರಿಯಾ ಗೋಲಿಯನ್ನು ಗಮನಿಸಿದ ತುಷಾರ್ ಖಾಂಡೇಕರ್ ಮಿಂಚಿನ ವೇಗದಲ್ಲಿ ಪ್ರಬ್ಜೋತ್‌‌‌‌‌‌ಗೆ ಪಾಸ್ ನೀಡಿದರು. ಪಾಸ್ ಸಿಗುತ್ತಿದ್ದಂತೆಯೇ ಚೆಂಡು ಗೋಲು ಪೆಟ್ಟಿಗೆ ಸೇರಿತು.

ಇಲ್ಲಿಯವರೆಗೆ ಚೆಂಡಿಗೆ ಕಿತ್ತಾಡುತ್ತಿದ್ದ ಉಭಯ ತಂಡಗಳು ಕೆಲಕಾಲ ಮಾತಿನ ಚಕಮಕಿ ಮತ್ತು ಗುದ್ದಾಡುವುದಕ್ಕೆ ಮುಂದಾಗಿದ್ದು ಅಂಪೈರ್‌ಗಳಿಬ್ಬರನ್ನು ಕೆರಳಿಸಿತು. ಪಂದ್ಯದ ಪ್ರಥಮಾರ್ಧ ಮುಕ್ತಾಯವಾಗಿದ್ದರಿಂದ ಅಂಪೈರ್ ಅನಿವಾರ್ಯವಾಗಿ ಪ್ರಭ್ಜೋತ್ ಸಿಂಗ್‌ಗೆ ಹಳದಿ ಕಾರ್ಡ್ ನೀಡಿದರು.

ಮತ್ತೆ ಹತ್ತಕ್ಕೆ ಇಳಿದ ಚಕ ದೇ ಇಂಡಿಯಾದ ಸಂಖ್ಯೆ ಎದುರಾಳಿ ಕೋರಿಯಾ ತಂಡಕ್ಕೆ ಅವಕಾಶದ ಬಾಗಿಲು ತೆರೆಯಬೇಕಿತ್ತು. ಒಂದು ಅವಕಾಶ ದೊರೆಯಿತು ಆದರೆ ಅಂಪೈರ್ ಗೋಲು ನೀಡುವುದಕ್ಕೆ ನಿರಾಕರಿಸಿದರು. ನಿರಾಕರಣೆ ವಿರುದ್ಧ ಇಲ್ಲಿ ಕೊರಿಯಾ ಪ್ರತಿಭಟಿಸುತ್ತಿದ್ದರೆ, ಅಲ್ಲಿ ಚೆಂಡು ಕೊರಿಯಾದ ಅಂಕಣ ಮತ್ತು ಗೋಲು ಪೆಟ್ಟಿಗೆಯನ್ನು ರಾಜಪಾಲ್ ಮತ್ತು ಸರ್ದಾರ್ ಸಿಂಗ್ ನೆರವಿನಿಂದ ಸರಾಗವಾಗಿ ಸೇರಿತು.ಈ ಗೋಲಿನಿಂದ ಮತ್ತಷ್ಟು ಕ್ರುದ್ದರಾದ ಕೋರಿಯಾ ಸುಮಾರು ಆರು ನಿಮಿಷಗಳ ಕಾಲ ಮೈದಾನದಿಂದ ಹೊರಗೆ ಬಂದು ಪ್ರತಿಭಟಿಸಿತು. ಟೂರ್ನಿ ನಿರ್ಧೇಶಕ ಪ್ರತಿಭಟನಾ ತಂಡದ ಜೊತೆಗೆ ಮಾತನಾಡಿದ ನಂತರ ತಂಡ ಮೈದಾನಕ್ಕೆ ಇಳಿಯಿತು.

ಸತತವಾಗಿ ಮೂರು ಪೆನಾಲ್ಟಿ ಕಾರ್ನರ್ ಕೋರಿಯಾ ತಂಡಕ್ಕೆ ದೊರೆತವು. ಭಾರತೀಯ ಗೋಲಿ ಬಲ್ಜೀತ್ ಸಿಂಗ್ ಮೂರು ಪೆನಾಲ್ಟಿಗಳನ್ನು ಹಾಳುಗೆಡವಿದರು. 53 ನೇ ನಿಮಿಷದಲ್ಲಿ ಪ್ರಬ್ಜೋತ್ ಸಿಂಗ್ ನೀಡಿದ ಪಾಸ್‌ನ್ನು ಇಗ್ನೇಸ್ ಟಿರ್ಕೆ ಗೋಲಾಗಿ ಪರಿವರ್ತಿಸಿ ಗೋಲಿನ 5-1ಕ್ಕೆ ಏರಿಸಿದರು. ಮತ್ತೊಮ್ಮೆ ಗೋಲಿನ ಅವಕಾಶ ಪಡೆದ ಪ್ರಭ್ಜೋತ್ ಸಿಂಗ್ ಮತ್ತು ರಾಜಪಾಲ್, ತಂಡದ ಅಂತರವನ್ನು 6-1 ಕ್ಕೆ ಕೆಲವೇ ನಿಮಿಷಗಳ ಅಂತರದಲ್ಲಿ ತಂದರು.

ಪಂದ್ಯ ಮುಕ್ತಾಯಕ್ಕೆ ಇನ್ನೇನು ಎರಡು ನಿಮಿಷ ಬಾಕಿ ಇರುವಂತೆ ಕೋರಿಯಾ ತನ್ನ ಎರಡನೆ ಗೋಲು ದಾಖಲಿಸಿತು.ಇದಕ್ಕೂ ಮುನ್ನ 64 ನೇ ನಿಮಿಷದಲ್ಲಿ ಪ್ರಬ್ಜೋತ್ ತನ್ನ ಎರಡನೆ ಗೋಲು ಬಾರಿಸಿದ್ದರು.

ಗೋಲು ವಿವರ
ಶಿವೇಂದ್ರ ಸಿಂಗ್ (4ನೇ ನಿಮಿಷ ಫೀಲ್ಡ್ ಗೋಲ್)
ಜಾಂಗ್ ಜೊಂಗ್ ಹ್ಯೂನ್ (9ನೇ ನಿಮಿಷ ಪೆನಾಲ್ಟಿ ಶಾಟ್)
ಎಸ್ ವಿ ಸುನಿಲ್ (13ನೇ ನಿಮಿಷ ಫೀಲ್ಡ್ ಗೋಲ್)
ಪ್ರಬ್ಜೋತ್ ಸಿಂಗ್ (31ನೇ ನಿಮಿಷ ಫೀಲ್ಡ್ ಗೋಲ್)
ರಾಜಪಾಲ್ ಸಿಂಗ್ (42ನೇ ನಿಮಿಷ ಫೀಲ್ಡ್ ಗೋಲ್)
ಇಗ್ನೇಸ್ ಟಿರ್ಕೆ (53ನೇ ನಿಮಿಷ ಫೀಲ್ಡ್ ಗೋಲ್)
ರಾಜಪಾಲ್ ಸಿಂಗ್ (55ನೇ ನಿಮಿಷ ಫೀಲ್ಡ್ ಗೋಲ್)
ಪ್ರಬ್ಜೋತ್ ಸಿಂಗ್ (64ನೇ ನಿಮಿಷ ಫೀಲ್ಡ್ ಗೋಲ್)
ಒಹ್ ಡೈ ಕ್ಯೈಯಿನ್ ( 68ನೇ ನಿಮಿಷ ಫೀಲ್ಡ್ ಗೋಲ್)

Share this Story:

Follow Webdunia kannada