ಬೀಜಿಂಗ್ ಒಲಿಂಪಿಕ್ ಗೇಮ್ಸ್‌ಗೆ ತೆರಳಲು ಸಿದ್ದವಾಗಿದ್ದ ಭಾರತದ ವೇಟ್ ಲಿಫ್ಟರ್ ಮೋನಿಕಾ ದೇವಿಯನ್ನು ಉದ್ದೀಪನಾ ಮದ್ದು ಸೇವಿಸಿದ ಆರೋಪದ ಮೇರೆಗೆ ಅಂತಿಮ ಕ್ಷಣದಲ್ಲಿ ಕೈಬಿಟ್ಟಿರುವುದು ಐಡಬ್ಲ್ಯುಎಫ್‌ನ ಕೆಲವು ಅಧಿಕಾರಿಗಳ ವ್ಯವಸ್ಥಿತಿ ಸಂಚು ಎಂದು ಮಣಿಪುರದ ಪ್ರಮುಖ ಕ್ರೀಡಾ ಸಂಘಟನೆ ಕಟುವಾಗಿ ಟೀಕಿಸಿದೆ.
ಬೀಜಿಂಗ್ ಒಲಿಂಪಿಕ್ ಗೇಮ್ಸ್‌ಗೆ ಮೋನಿಕಾ ಅವರನ್ನು ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್(ಐಒಎ)ನ ಶಿಫಾರಸ್ಸಿನ ಮೇರೆಗೆ ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಶನ್ ಆಯ್ಕೆ ಮಾಡಿರುವುದಾಗಿ ಮಣಿಪುರ ಒಲಿಂಪಿಕ್ ಅಸೋಸಿಯೇಶನ್(ಎಮ್‌ಒಎ) ಹಾಗೂ ಮಣಿಪುರ ವೇಟ್ ಲಿಫ್ಟಿಂಗ್ ಅಸೋಸಿಯೇಶನ್(ಎಮ್‌ಡಬ್ಲ್ಯುಎ)ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೇ ಮೋನಿಕಾ ಅವರು ಮಂಗಳವಾರ ರಾತ್ರಿ ಬೀಜಿಂಗ್‌ಗೆ ತೆರಳಲು ಸಿದ್ದರಾಗಿದ್ದರು, ಆದರೆ ಅಚ್ಚರಿ ಎಂಬಂತೆ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಪಾಸಿಟಿವ್ ಅಂಶ ಕಂಡುಬಂದಿರುವ ಕಾರಣ ನೀವು ಬೀಜಿಂಗ್‌ಗೆ ತೆರಳಬಾರದು ಎಂದು ಮಾಹಿತಿ ನೀಡಲಾಗಿತ್ತು ಎಂದು ಪ್ರಕಟಣೆ ಹೇಳಿದೆ.
ಬೀಜಿಂಗ್‌ಗೆ ತೆರಳಲು ವಿಮಾನ ಏರಲಿಕ್ಕೆ ಕೇವಲ 30ನಿಮಿಷ ಇರುವಾಗ ಇಂಡಿಯನ್ ವೇಟ್ ಲಿಫ್ಟಿಂಗ್ ಫೆಡರೇಶನ್(ಐಡಬ್ಲ್ಯುಎಫ್) ಮೋನಿಕಾಗೆ ಮಾಹಿತಿ ನೀಡಿರುವುದಾಗಿ ಆರೋಪಿಸಿದೆ.
ನಿಜಕ್ಕೂ ಮೋನಿಕಾ ಬದಲಾಗಿ, ಐಡಬ್ಲ್ಯುಎಫ್ ಶೈಲಜಾ ಪೂಜಾರಿಯನ್ನು ಬೀಜಿಂಗ್ ಒಲಿಂಪಿಕ್‌ಗೆ ಕಳುಹಿಸುವಲ್ಲಿ ಉತ್ಸುಕವಾಗಿತ್ತು ಎಂದು ಕ್ರೀಡಾ ಸಂಸ್ಥೆ ಗಂಭೀರವಾಗಿ ದೂರಿದೆ. ಆ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಇಂತಹ ಹೀನಾಯ ರಾಜಕೀಯ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿ.