Select Your Language

Notifications

webdunia
webdunia
webdunia
webdunia

ರೋಹಿತ್, ರೈನಾ ಆಗಲಿದ್ದಾರೆ ಶೈನ್: ಗಿಲ್ಲಿ

ರೋಹಿತ್, ರೈನಾ ಆಗಲಿದ್ದಾರೆ ಶೈನ್: ಗಿಲ್ಲಿ
ಲಂಡನ್ , ಶುಕ್ರವಾರ, 5 ಜೂನ್ 2009 (14:03 IST)
ಯುವ ಆಲ್‌ರೌಂಡರ್‌ಗಳಾದ ಸುರೇಶ್ ರೈನಾ ಮತ್ತು ರೋಹಿತ್ ಶರ್ಮಾ ಅವರು ಈ ಬಾರಿ ಟ್ವೆಂಟಿ 20 ವಿಶ್ವಕಪ್ ಕೂಟದಲ್ಲಿ ಭರ್ಜರಿ ಪ್ರದರ್ಶನ ನೀಡಲಿದ್ದಾರೆ ಎಂದು ಅವರಿಬ್ಬರನ್ನೊಳಗೊಂಡ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಐಪಿಎಲ್ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಮುನ್ನಡೆಸಿದ್ದ ಆಸ್ಟ್ರೇಲಿಯಾದ ನಿವೃತ್ತ ವಿಕೆಟ್ ಕೀಪರ್, ಸ್ಫೋಟಕ ಬ್ಯಾಟ್ಸ್‌ಮನ್ ಆಡಂ ಗಿಲ್‌ಕ್ರಿಸ್ಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೈನಾ ಮತ್ತು ರೋಹಿತ್ ಸುದೀರ್ಘ ಕಾಲ ಭಾರತೀಯ ಕ್ರಿಕೆಟ್ ಆಳುವ ಸಾಮರ್ಥ್ಯವುಳ್ಳವರು. ಸುರೇಶ್ ರೈನಾ ಅವರಂತೂ ಕ್ರಿಕೆಟ್ ಜಗತ್ತಿನಲ್ಲಿ ಭರವಸೆಯ ಅತ್ಯಂತ ಪ್ರತಿಭಾನ್ವಿತರಲ್ಲೊಬ್ಬರು. ಐಪಿಎಲ್ ಎರಡನೇ ಆವೃತ್ತಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದ ರೈನಾ, ಐಪಿಎಲ್ ಮೊದಲ ಆವೃತ್ತಿಯಲ್ಲಿಯೂ ಮಿಂಚಿದ್ದರು ಎಂದು ಗಿಲ್ಲಿ ನೆನಪಿಸಿಕೊಂಡಿದ್ದಾರೆ.

Share this Story:

Follow Webdunia kannada