Select Your Language

Notifications

webdunia
webdunia
webdunia
webdunia

ಭಾರತೀಯರ ಬಗ್ಗೆ ಪ್ರೀತಿಯಿದೆ; ತಪ್ಪಾಗಿ ಅರ್ಥೈಸಲಾಗಿದೆ: ಆಫ್ರಿದಿ

ಭಾರತೀಯರ ಬಗ್ಗೆ ಪ್ರೀತಿಯಿದೆ; ತಪ್ಪಾಗಿ ಅರ್ಥೈಸಲಾಗಿದೆ: ಆಫ್ರಿದಿ
ಕರಾಚಿ , ಮಂಗಳವಾರ, 5 ಏಪ್ರಿಲ್ 2011 (13:46 IST)
PTI
ಪಾಕಿಸ್ತಾನ ನಾಯಕ ಶಾಹಿದ್ ಆಫ್ರಿದಿ ಮತ್ತೆ ಪ್ಲೇಟ್ ಬದಲಾಯಿಸಿದ್ದಾರೆ. ಕಳೆದ ದಿನವಷ್ಟೇ ಭಾರತೀಯರಿಗೆ ವಿಶಾಲ ಹೃದಯವಿಲ್ಲ ಎಂಬ ವಿವಾದತ್ಮಾಕ ಹೇಳಿಕೆ ನೀಡುವ ಹೇಳಿಕೆ ನೀಡುವ ಮೂಲಕ ಸುದ್ದಿಗಿಟ್ಟಿಸಿಕೊಂಡಿದ್ದ ಆಫ್ರಿದಿ ಇದೀಗ ಮತ್ತೆ ರಾಗ ಬದಲಾಯಿಸಿಕೊಂಡಿದ್ದು, ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದ್ದು ಭಾರತೀಯರ ಬಗ್ಗೆ ತನಗೆ ಪ್ರೀತಿಯಿದೆ ಎಂದಿದ್ದಾರೆ.

ಸಣ್ಣ ವಿಚಾರಗಳನ್ನು ಮಾಧ್ಯಮಗಳು ದೊಡ್ಡದು ಮಾಡುತ್ತಿವೆ. ಇದು ಲಜ್ಜೆಯ ಸಂಗತಿ. ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ವೃದ್ಧಿಗೆ ನಾನು ಯತ್ನಿಸಿದ್ದೇನೆ. ಆದರೆ ಕೆಲವೊಂದು ಹೇಳಿಕೆಯನ್ನು ತಿರುಚಲಾಗಿದೆ. ನನ್ನ ಮಾತನ್ನು ಸಂದರ್ಭಾತೀತವಾಗಿ ಬಳಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ವಿಶ್ವಕಪ್; ರೋಚಕ ಕ್ಷಣಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಭಾರತದಲ್ಲಿ ನನ್ನ ಕ್ರಿಕೆಟನ್ನು ಆನಂದಿಸಿದ್ದು, ಅಲ್ಲಿನ ಜನರನ್ನು ಇಷ್ಟಪಡುತ್ತೇನೆ. ಆದರೆ ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಭಾರತೀಯ ಪ್ರೇಕ್ಷಕರ ಪ್ರೀತಿ ಪಡೆಯುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ಹಾಗಾಗಿ ಮಾಧ್ಯಮಗಳು ಕ್ಷುಲ್ಲಕ ವಿಷಯಗಳಿಗೆ ಸಮಯ ವ್ಯರ್ಥ ಮಾಡದೇ ಧನಾತ್ಮಕ ಪಾತ್ರ ವಹಿಸಬೇಕು ಎಂದು ಆಫ್ರಿದಿ ವಿನಂತಿ ಮಾಡಿದರು.

ಆಫ್ರಿದಿ ನಿಕಟವರ್ತಿಯ ಪ್ರಕಾರ, ಭಾರತದ ಗೌತಮ್ ಗಂಭೀರ್ ಹೇಳಿಕೆಗೆ ಪ್ರತಿಯಿಕೆಯಾಗಿ ಆಫ್ರಿದಿ ಇಂತಹದೊಂದು ಹೇಳಿಕೆ ನೀಡಿದ್ದರು. ಗೆಲುವನ್ನು 26/11ರಂದು ಮುಂಬೈಗೆ ನಡೆದ ಉಗ್ರರ ದಾಳಿಯಲ್ಲಿ ಮಡಿದವರಿಗಾಗಿ ಗಂಭೀರ್ ಸಮರ್ಪಿಸಿದ್ದರು.

ಸಂದರ್ಶನ ಮತ್ತೊಮ್ಮೆ ನೋಡಿ; ಭಾರತೀಯರನ್ನು ಶತ್ರುಗಳಂತೆ ಕಾಣದಿರಿ ಎಂದು ಆಫ್ರಿದಿ ಪಾಕಿಸ್ತಾನಕ್ಕೆ ಹಿಂತಿರುವ ವೇಳೆಯಲ್ಲಿ ಕರೆ ನೀಡಿದ್ದರು. ಆದರೆ ರಾಜಕೀಯವಾಗಿ ಪ್ರತಿಕ್ರಿಯಿಸಿದ್ದ ಗಂಭೀರ್, ಪಾಕ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು ಎಂದರು.

ಭಾರತದ ಬಗ್ಗೆ ನಮಗೆ ಸಕರಾತ್ಮಕ ಮನೋಭಾವ ಹೊಂದಿದ್ದರೂ ಅಲ್ಲಿನವರು ನಮ್ಮ ಬಗ್ಗೆ ವಿರೋಧವಾಗಿ ಮಾತನಾಡಿದ್ದರು. ಗಂಭೀರ್ ಅವರ ಇಂತಹ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಆಫ್ರಿದಿ, ಭಾರತೀಯರು ಪಾಕಿಸ್ತಾನಿಗಳಂತೆ ವಿಶಾಲ ಹೃದಯದವರಲ್ಲ ಎಂದು ಹೇಳಿದ್ದರು. ಆದರೆ ಪಾಕ್ ನಾಯಕ ಹೇಳಿಕೆಯನ್ನು ಮಾಧ್ಯಮಗಳು ನೆಗೆಟಿವ್ ಆಗಿ ಚಿತ್ರಿಸಿದ್ದವು ಎಂದರು.

Share this Story:

Follow Webdunia kannada