Select Your Language

Notifications

webdunia
webdunia
webdunia
webdunia

ಭಾರತ-ಪಾಕ್ ಪಂದ್ಯ ವೀಕ್ಷಣೆಗೂ ಮುನ್ನ ಇವನ್ನು ಗಮನಿಸಿ...

ಭಾರತ-ಪಾಕ್ ಪಂದ್ಯ ವೀಕ್ಷಣೆಗೂ ಮುನ್ನ ಇವನ್ನು ಗಮನಿಸಿ...
ಮೊಹಾಲಿ , ಸೋಮವಾರ, 28 ಮಾರ್ಚ್ 2011 (18:20 IST)
ವಿಶ್ವಕಪ್‌ನಲ್ಲಿ ಮತ್ತೊಂದು ಬಾರಿ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಹಣಾಹಣಿಗೆ ಸಜ್ಜಾಗುತ್ತಿದೆ. ಇದರಂತೆ ದೇಶದೆಲ್ಲೆಡೆ ಕ್ರಿಕೆಟ್ ಜ್ವರ ಪಸರಿಸ ತೊಡಗಿದೆ. ಆದರೆ ಇತ್ತಂಡಗಳ ಒಟ್ಟಾರೆಯಾದ ದಾಖಲೆಯನ್ನು ಗಮನಿಸಿದಾಗ ಅಂಶಿಅಂಶ ಭಾರತದ ಪರವಾಗಿಲ್ಲ ಎಂಬುದು ಕಂಡುಬಂದಿದೆ.

ಹೀಗಿದ್ದರೂ ವಿಶ್ವಕಪ್‌ ದಾಖಲೆಯನ್ನು ಗಮನಿಸಿದಾಗ ಪಾಕ್ ಮೇಲೆ ಭಾರತ ಶೇಕಡಾ 100ರಷ್ಟು ಜಯದ ಫಲಿತಾಂಶವನ್ನು ಹೊಂದಿದೆ. ಈ ಹಿಂದೆ ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಪಾಕ್ ವಿರುದ್ಧ ಸೆಣಸಾಟ ನಡೆಸಿದಾಗಲೂ ಗೆಲುವು ಭಾರತದ ಪಾಲಾಗಿತ್ತು.

ಭಾರತ ಮತ್ತು ಪಾಕಿಸ್ತಾನ ನಡುವಣ ಮೊದಲ ಏಕದಿನ ಪಂದ್ಯವು 1978 ಅಕ್ಟೋಬರ್ 1ರಂದು ಆಡಲಾಗಿತ್ತು. ಈ ಪಂದ್ಯವನ್ನು ಭಾರತ 4 ರನ್ನುಗಳಿಂದ ಗೆದ್ದುಕೊಂಡಿತ್ತು. ಹಾಗೆಯೇ ಕಳೆದ ವರ್ಷ ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಇತ್ತಂಡಗಳು ಕೊನೆಯ ಬಾರಿ ಎದುರಾದಗಲೂ ಭಾರತ ಮೂರು ವಿಕೆಟುಗಳಿಂದ ರೋಚಕ ಜಯ ದಾಖಲಿಸಿತ್ತು.

ಭಾರತ ಮತ್ತು ಪಾಕಿಸ್ತಾನ ನಡುವೆ ಆಡಲಾದ ವಿಶ್ವಕಪ್‌ನ ನಾಲ್ಕು ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳಿಂದ ಕೇವಲ ಒಂದು ಶತಕ ಮಾತ್ರ ದಾಖಲಾಗಿದೆ. 2003ರಲ್ಲಿ ಸಯೀದ್ ಅನ್ವರ್ ಈ ಸಾಧನೆ ಮಾಡಿದ್ದರು. ಆದರೆ ಇದೇ ಪಂದ್ಯದಲ್ಲಿ ಸಚಿನ್ ಶತಕವನ್ನು ಕೇವಲ 2 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡಿದ್ದರು.

ಅಂಕಿ ಅಂಶಗಳು:

ಒಟ್ಟು ಪಂದ್ಯ: 119
ಭಾರತದ ಗೆಲುವು: 46
ಪಾಕಿಸ್ತಾನದ ಗೆಲುವು: 69
ಫಲಿತಾಂಶವಿಲ್ಲ: 4

ವಿಶ್ವಕಪ್‌ನಲ್ಲಿ ಆಡಲಾಗಿರುವ ಒಟ್ಟು ಪಂದ್ಯ: 4
ಭಾರತಕ್ಕೆ ಗೆಲುವು: 4
ಪಾಕಿಸ್ತಾನ: 0

ಭಾರತದಲ್ಲಿ ಆಡಲಾಗಿರುವ ಒಟ್ಟು ಪಂದ್ಯ: 26
ಭಾರತದ ಗೆಲುವು: 9
ಪಾಕಿಸ್ತಾನದ ಗೆಲುವು: 17

ಪಾಕ್ ವಿರುದ್ಧದ ಭಾರತದ ಗರಿಷ್ಠ ಮೊತ್ತ: 356/9, (2005ರಲ್ಲಿ)
ಭಾರತ ವಿರುದ್ಧದ ಪಾಕ್‌ನ ಗರಿಷ್ಠ ಮೊತ್ತ: 344/8 (2004)

ಪಾಕ್ ವಿರುದ್ಧದ ಭಾರತದ ಕನಿಷ್ಠ ಮೊತ್ತ: 79 (1978)
ಭಾರತ ವಿರುದ್ಧದ ಪಾಕ್‌ನ ಕನಿಷ್ಠ ಮೊತ್ತ: 87 (1985)

ಪಾಕ್ ವಿರುದ್ಧ ಭಾರತದ ಗರಿಷ್ಠ ಅಂತರದ ಗೆಲುವು: 140 ರನ್
ಭಾರತ ವಿರುದ್ಧದ ಪಾಕ್‌ನ ಗರಿಷ್ಠ ಅಂತರದ ಗೆಲುವು: 159 ರನ್

ಪಾಕ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: ಇನ್ಜಾಂಮಾಮ್ ಉಲ್ ಹಕ್- 2403
ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: ಸಚಿನ್ ತೆಂಡೂಲ್ಕರ್- 2389

ಪಾಕ್ ಪರ ವೈಯಕ್ತಿಕ ಗರಿಷ್ಠ ಮೊತ್ತ: ಸಯೀದ್ ಅನ್ವರ್ 194
ಭಾರತದ ಪರ ವೈಯಕ್ತಿಕ ಗರಿಷ್ಠ ಮೊತ್ತ: ಎಮ್. ಎಸ್. ಧೋನಿ 158

ಭಾರತದ ಪರ ಅತ್ಯುತ್ತಮ ಸರಾಸರಿ: ಎಮ್. ಎಸ್ ಧೋನಿ (54.22)
ಪಾಕ್ ಪರ ಅತ್ಯುತ್ತಮ ಸರಾಸರಿ: ಸಲ್ಮಾನ್ ಭಟ್ (52.210)

ಭಾರತದ ಪರ ಗರಿಷ್ಠ ಸ್ಟ್ರೇಕ್‌ರೇಟ್: ಸೆಹ್ವಾಗ್- 103.41
ಪಾಕ್ ಪರ ಗರಿಷ್ಠ ಸ್ಟ್ರೇಕ್‌ರೇಟ್: ಶಾಹಿದ್ ಆಫ್ರಿದಿ 108.67

ಅತಿ ಹೆಚ್ಚು ಸೊನ್ನೆ: 6 (ಆಫ್ರಿದಿ)
ಅತಿ ಹೆಚ್ಚು ಶತಕ: ಸಚಿನ್, ಸಲ್ಮಾನ್ ಭಟ್ ತಲಾ 5
ಅತಿ ಹೆಚ್ಚು ಅರ್ಧಶತಕ: ಸಚಿನ್ 19, ಹಕ್ 16
ಅತಿ ಹೆಚ್ಚು ವಿಕೆಟ್: ವಾಸೀಮ್ ಅಕ್ರಂ 60, ಅನಿಲ್ ಕುಂಬ್ಳೆ 54
ಅತ್ಯುತ್ತಮ ಬೌಲಿಂಗ್ ಸರಾಸರಿ: ಇಮ್ರಾನ್ ಖಾನ್ 22.25, ಕುಂಬ್ಳೆ 24.25
ಅತಿ ಹೆಚ್ಚು ಕ್ಯಾಚ್: ಅಜರುದ್ದೀನ್ 44, ಆಫ್ರಿದಿ 28

ಯಾವುದೇ ವಿಕೆಟ್‌ಗೆ ಗರಿಷ್ಠ ಜತೆಯಾಟ: ಸಚಿನ್-ನವಜೋತ್ ಸಿದ್ದು 231 (1996)
ಪಾಕ್ ಪರ ಗರಿಷ್ಠ ಜತೆಯಾಟ: ಸಯೀದ್ ಅನ್ವರ್-ಇಜಾಜ್ ಅಹ್ಮದ್ 230 (1998)
ಮೊದಲ ವಿಕೆಟ್ ಗರಿಷ್ಠ ಜತೆಯಾಟ: ಸಚಿನ್-ಸೌರವ್ ಗಂಗೂಲಿ 159 (1998)

ಅಜರ್ ನಾಯಕತ್ವದಲ್ಲಿ ಭಾರತಕ್ಕೆ ಜಯ: 9 (25 ಪಂದ್ಯಗಳಲ್ಲಿ)
ಧೋನಿ ನಾಯಕತ್ವದಲ್ಲಿ ಭಾರತಕ್ಕೆ ಜಯ: 6 (11 ಪಂದ್ಯಗಳಲ್ಲಿ)

Share this Story:

Follow Webdunia kannada