Select Your Language

Notifications

webdunia
webdunia
webdunia
webdunia

2011ರಲ್ಲಿ ಸಚಿನ್ ಸಂಪಾದನೆ ದಿನವೊಂದರಲ್ಲಿ 1.5 ಕೋಟಿ!

2011ರಲ್ಲಿ ಸಚಿನ್ ಸಂಪಾದನೆ ದಿನವೊಂದರಲ್ಲಿ 1.5 ಕೋಟಿ!
ಬೆಂಗಳೂರು , ಶುಕ್ರವಾರ, 28 ಜನವರಿ 2011 (13:22 IST)
2011ನೇ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ ದಿನವೊಂದರ ಲೆಕ್ಕದಲ್ಲಿ 1.5 ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾರಂತೆ!. 40 ಕೋಟಿ ರೂಪಾಯಿಗಳ ಭರ್ಜರಿ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿರುವ ಸಚಿನ್ ಕಳೆದ 27 ದಿನಗಳಲ್ಲಿ ದಿನವೊಂದಕ್ಕೆ 1.5 ಕೋಟಿ ರೂಪಾಯಿಗಳನ್ನು ಸಂಪಾದಿಸಿದ್ದಾರೆ. ಅಷ್ಟೇ ಯಾಕೆ 2.5 ಕೋಟಿ ಬೆಲೆಬಾಳುವ ಎರಡು ವಿಹಾರಗೃಹವನ್ನು ತಮ್ಮ ಹೆಸರಿಗೆ ದಾಖಲಾತಿ ಮಾಡಿದ್ದಾರೆ

ಹಾಗಾದರೆ ಇದೇ ರೀತಿ ಸ್ಟೇಕ್‌ರೇಟನ್ನು ಮುಂಬರುವ ಏಕದಿನ ವಿಶ್ವಕಪ್‌ನಲ್ಲಿಯೂ ಲಿಟ್ಲ್ ಮಾಸ್ಟರ್ ಮುಂದುವರಿಸಬಹುದೇ ? ಎಂಬುದಕ್ಕೆ ಸಚಿನ್ ಮಾತ್ರ ಉತ್ತರ ನೀಡಬಲ್ಲರು.

ಪುಣೆ ಮೂಲದ ಎಸ್ಟೇಟ್ ಕಂಪೆನಿ ಅಮಿತ್ ಎಂಟರ್‌ಪ್ರೈಸಸ್ ಜತೆಗಿನ ಪ್ರಾಯೋಜಕತ್ವ ಒಪ್ಪಂದದಲ್ಲಿ ಮುಂಬೈಕರ್ ಒಂಬತ್ತು ಕೋಟಿ ಪಡೆಯಲಿದ್ದಾರೆ. ಹಾಗೆಯೇ ಎಸ್. ಕುಮಾರ್ಸ್ ನ್ಯಾಷನ್‌ವೈಡ್ (ಎಸ್‌ಕೆಎನ್ಎಲ್) ಜತೆ ಮಾಡಲಾದ ಒಪ್ಪಂದದಲ್ಲಿಯೂ 12-13 ಬಗಲಿಗೆ ಹಾಕಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೋಲಾಕೋಲಾ ಪ್ರಚಾರ ರಾಯಭಾರಿ ಆಗಿ ನೇಮಕಗೊಂಡಿದ್ದ ಈ ದಿಗ್ಗಜ ಆಟಗಾರ 20 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದರು.

ನಾವು ನಮ್ಮ ಬ್ರಾಂಡ್‌ನ ಪ್ರಮುಖ ಪ್ರಚಾರ ರಾಯಭಾರಿಯನ್ನಾಗಿ ತೆಂಡೂಲ್ಕರ್ ಅವರನ್ನು ನೇಮಕ ಮಾಡಿದ್ದೇವೆ. ಆ ಮೂಲಕ ಪುಣೆ ಹೊರವಲಯವಾದ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲೂ ಹೌಸಿಂಗ್ ಪ್ರಾಜೆಕ್ಟ್ ವಿಸ್ತರಿಸಲು ಯೋಜನೆ ಇರಿಸಿಕೊಂಡಿದ್ದೇವೆ ಎಂದು ಅಮಿತ್ ಎಂಟರ್‌ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಪಾಟೆ ತಿಳಿಸಿದ್ದಾರೆ.

ಎಸ್‌ಕೆಎನ್‌ಎಲ್ ತನ್ನ ಕಂಪೆನಿಯ ವಿಲಾಸವಸ್ತುಗಳ ಬ್ರಾಂಡ್‌ಗಳ ಪ್ರಚಾರಕ್ಕೆ ಇದೀಗಲೇ ಬಾಲಿವುಡ್ ಸ್ಟಾರ್‌ಗಳನ್ನು ಬಳಸುತ್ತಿದೆ. ಕಂಪೆನಿಯ ಪ್ರಮುಖ ಬ್ರಾಂಡ್‌ಗಳಿಗೆ ಬಾಲಿವುಡ್ ಬಾದ್‌ಶಾ ಅಮಿತಾಬ್ ಬಚ್ಚನ್ ಮತ್ತು ಶಾರೂಕ್ ಖಾನ್ ಜತೆ ಒಪ್ಪಂದ ಮಾಡಿಕೊಂಡಿದೆ. ಇದೀಗ ವಿಶ್ವಕಪ್ ಸಂದರ್ಭದಲ್ಲಿ ತಮ್ಮ ಬ್ರಾಂಡ್ ಮೌಲ್ಯವನ್ನು ಏರಿಸುವ ನಿಟ್ಟಿನಲ್ಲಿ ಸಚಿನ್ ಜತೆ ಕೈಜೋಡಿಸಿಕೊಂಡಿದೆ.

ಇತ್ತೀಚೆಗಷ್ಟೇ ದೇಶದ ಪ್ರಮುಖ ತಂಪು ಪಾನೀಯ ಕಂಪೆನಿ ಕೋಕಾಕೋಲಾದ 'ಹ್ಯಾಪಿನಸ್ ಅಂಬಾಸಿಂಡರ್' ಆಗಿ ನೇಮಕಗೊಂಡಿದ್ದ ಸಚಿನ್ ಮೂರು ವರ್ಷಗಳ ಅವಧಿಗೆ 20 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು. ಒಟ್ಟು 17 ಪ್ರಾಯೋಜಕತ್ವ ಒಪ್ಪಂದದಲ್ಲಿ ಸಚಿನ್ ವರ್ಷದಲ್ಲಿ 1 ಮಿಲಿಯನ್‌ಕ್ಕೂ ಹೆಚ್ಚು ಡಾಲರ್ ಆದಾಯ ಪಡೆಯುತ್ತಾರೆ. ಇದರಲ್ಲಿ ಆಡಿಡಾಸ್, ವಿಲಾಸಿ ಸ್ವಿಸ್ ವಾಚ್, ಕೆನನ್, ಐಟಿಸಿ, ಅವಿವಾ ಲೈಫ್ ಇನ್ಸುರೆನ್ಸ್, ಆರ್‌ಬಿ‌ಎಸ್, ತೋಶಿಬಾ ಪ್ರಮುಖವಾಗಿವೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

Share this Story:

Follow Webdunia kannada