Select Your Language

Notifications

webdunia
webdunia
webdunia
webdunia

ದ. ಆಫ್ರಿಕಾದಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ಕೊಹ್ಲಿ

ದ. ಆಫ್ರಿಕಾದಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ಕೊಹ್ಲಿ
ಪೊರ್ಟ್‌ ಎಲಿಬಬೆತ್ , ಭಾನುವಾರ, 23 ಜನವರಿ 2011 (09:32 IST)
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಹುಬೇಗನೇ ಬೆಳೆದು ಬಂದಿರುವ ಭಾರತದ ಪ್ರತಿಭಾನ್ವಿತ ಯುವ ಆಟಗಾರ ಯಾರು?. ಇದಕ್ಕೆ ತಕ್ಷಣ ದೊರಕುವ ಉತ್ತರ ವಿರಾಟ್ ಕೊಹ್ಲಿ. ಹೌದು, ಕಳೆದೆರಡು ವರ್ಷಗಳಲ್ಲಿ ಈ ದೆಹಲಿ ಬ್ಯಾಟ್ಸ್‌ಮನ್ ಮಾತ್ರ ಸ್ಥಿರ ಪ್ರದರ್ಶನ ಮಟ್ಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಅವಧಿಯಲ್ಲಿ ಹಲವು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿರುವ ಕೊಹ್ಲಿ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲೂ ತಂಡಕ್ಕೆ ಆಪದ್ಬಾಂಧವನಾಗಿದ್ದಾರೆ. ಆ ಮೂಲಕ 22ರ ಹರೆಯದಲ್ಲೇ ಅಪಾಯಕಾರಿ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

PTI
ದಕ್ಷಿಣ ಆಫ್ರಿಕಾದಲ್ಲಿನ ವೇಗಿ ಹಾಗೂ ಬೌನ್ಸಿ ಪಿಚ್‌ನಲ್ಲಿ ನಿಜಕ್ಕೂ ಬ್ಯಾಟ್ಸ್‌ಮನ್‌ ಒಬ್ಬನ ಪ್ರತಿಭೆಯ ಪ್ರಯೋಗವಾಗುತ್ತದೆ. ಉಪಖಂಡದ ನಿರ್ಜೀವ ಪಿಚ್‌ನಲ್ಲಿ ದೊಡ್ಡ ಮೊತ್ತ ಕಲೆ ಹಾಕುವುದು ದೊಡ್ಡ ಸವಾಲಿನ ವಿಷಯವೇನಲ್ಲ. ಆದರೆ ಡೇಲ್ ಸ್ಟೈನ್ ಮತ್ತು ಮೊರ್ನೆ ಮೊರ್ಕೆಲ್‌ರಂತಹ ಉರಿಚೆಂಡುಗಳನ್ನು ಅವರದ್ದೇ ನೆಲದಲ್ಲಿ ಎದುರಿಸುವುದೆಂದರೆ ಅಂದೊಂದು ಸವಾಲೇ ಸರಿ.

ಹೀಗಿರುವಾಗ ಇಂತಹ ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತಿರುವ ಕೊಹ್ಲಿ ತಮ್ಮದೇ ಆದ ವಿಶಿಷ್ಟ ಬ್ಯಾಟಿಂಗ್ ಶೈಲಿಯಿಂದ ವಿಶ್ವ ದರ್ಜೆಯ ಬೌಲರುಗಳಿಗೆ ಸವಾಲಾಗಿ ಪರಿಣಮಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಅನುಭವ ಇಲ್ಲದರ ಹೊರತಾಗಿಯೂ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡಿರುವ ಕೊಹ್ಲಿ ಖಂಡಿತವಾಗಿಯೂ ಭವಿಷ್ಯದಲ್ಲಿ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಏಕದಿನದಲ್ಲಿ ಅತಿ ವೇಗದಲ್ಲಿ ಸಾವಿರ ರನ್ ಪೂರ್ಣ ಗೊಳಿಸಿರುವ ಕೊಹ್ಲಿ ಅವರ ಮಿಂಚಿನ ಫೀಲ್ಡಿಂಗ್ ತಂಡದ ಪಾಲಿಗೆ ವರದಾನವಾಗಿದೆ. ಹಾಗೆಯೇ ನಿಧಾನಗತಿಯ ಬೌಲಿಂಗ್‌ಗೆ ಸೈ ಎನಿಸಿದ್ದಾರೆ.

ಭವಿಷ್ಯದ ನಾಯಕನೆಂದೇ ಬಣ್ಣಿಸಲ್ಪಟ್ಟಿರುವ ಕೊಹ್ಲಿ ಇದೀಗಲೇ ಆಡಿರುವ 44 ಪಂದ್ಯಗಳಲ್ಲಿ 4 ಶತಕ ಹಾಗೂ 12 ಅರ್ಧಶತಕ ಬಾರಿಸಿದ್ದಾರೆ. 2008ರಲ್ಲಿ ನಡೆದ ಅಂಡರ್-19 ವಿಶ್ವಕಪನ್ನು ಭಾರತ ವಿರಾಟ್ ನೇತೃತ್ವದಲ್ಲಿ ಗೆದ್ದುಕೊಂಡಿರುವುದು ಅವರ ಪಾಲಿಗೆ ಸ್ಮರಣೀಯವೆನಿಸಿಕೊಂಡಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

Share this Story:

Follow Webdunia kannada