ಕೊಹ್ಲಿ ಸಾಹಸ ವ್ಯರ್ಥ; ಸಮಬಲ ಸಾಧಿಸಿದ ಹರಿಣಗಳು
, ಶನಿವಾರ, 22 ಜನವರಿ 2011 (10:11 IST)
ವಿರಾಟ್ ಕೊಹ್ಲಿ (87*) ಬಾರಿಸಿದ ಬಿರುಸಿದ ಅರ್ಧಶತಕದ ಹೊರತಾಗಿಯೂ ಭಾರತ ಕ್ರಿಕೆಟ್ ತಂಡವು ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯವನ್ನು ಡಕ್ವರ್ತ್ ಲೂವಿಸ್ ನಿಯಮದಡಿ 48 ರನ್ನುಗಳಿಂದ ಕಳೆದುಕೊಂಡಿದ್ದು, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ. 266
ರನ್ನುಗಳ ಸವಾಲಿನ ಮೊತ್ತ ಬೆನ್ನತ್ತಿದ್ದ ಭಾರತ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡಿತ್ತಲ್ಲದೆ 32.5 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸಂದರ್ಭದಲ್ಲಿ ಮಳೆ ಸುರಿದುದರಿಂದ ಪಂದ್ಯವನ್ನು ಡಕ್ವರ್ತ್ ಲೂವಿಸ್ ನಿಯಮಕ್ಕೆ ಒಳಪಡಿಸಲಾಯಿತು. ಇದರಂತೆ ಭಾರತ 48 ರನ್ನುಗಳ ಸೋಲು ಅನುಭವಿಸಿತು. ಪಂದ್ಯಶ್ರೇಷ್ಠ: ಜೀನ್ ಪಾಲ್ ಡ್ಯುಮನಿ ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಇದರೊಂದಿಗೆ ಸರಣಿಯು 2-2ರಲ್ಲಿ ಸಮಬಲಗೊಂಡಿದ್ದು, ಭಾನುವಾರ ನಡೆಯಲಿರುವ ನಿರ್ಣಾಯಕ ಪಂದ್ಯವು ರೋಚಕ ಕದನಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯ ಗೆಲ್ಲುವ ತಂಡವು ಏಕದಿನ ಸರಣಿ ತಮ್ಮದಾಗಿಸಿಕೊಳ್ಳಲಿದೆ. ಕೊಹ್ಲಿ ಹೊರತುಪಡಿಸಿ ಇತರೆಲ್ಲ ಭಾರತೀಯ ಬ್ಯಾಟ್ಸ್‌ಮನ್‌ಗಳು ಕ್ರೀಸಿಗೆ ಅಂಟಿ ನಿಲ್ಲಲು ಚಡಪಡಿಸಿದರು. ಒಂದು ಬದಿಯಲ್ಲಿ ವಿಕೆಟುಗಳು ಪತನವಾಗುತ್ತಿದ್ದರೂ ತಂಡವನ್ನು ಮುನ್ನಡೆಸಿದ ಕೊಹ್ಲಿ 92 ಎಸೆತಗಳಲ್ಲಿ ಅಜೇಯ 87 ರನ್ ಗಳಿಸಿದರು. ಇದರಲ್ಲಿ ಏಳು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರುಗಳು ಸೇರಿವೆ. ಆರಂಭಿಕ ರೋಹಿತ್ ಶರ್ಮಾ (1) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡರು. ಮುರಳಿ ವಿಜಯ್ ಸ್ಥಾನಕ್ಕೆ ಆಯ್ಕೆಯಾಗಿದ್ದ ಪಾರ್ಥಿವ್ ಪಟೇಲ್ (11) ಕೂಡಾ ಮಿಂಚಲಿಲ್ಲ. ಯುವರಾಜ್ ಸಿಂಗ್ (12) ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್ ಪಡೆದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಸುರೇಶ್ ರೈನಾ (20) ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ (2) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕಳೆದ ಪಂದ್ಯದ ಹೀರೊ ಯೂಸುಫ್ ಪಠಾಣ್ (2) ಕೂಡಾ ನೆರವಾಗಲಿಲ್ಲ. ಕೊನೆಗೆ ಬಂದ ಹರಭಜನ್ ಸಿಂಗ್ 3 ರನ್ ಗಳಿಸಿ ಅಜೇಯರಾಗುಳಿದರು. ಆದರೆ ಅಮೋಘ ಫಾರ್ಮ್ ಮುಂದುವರಿಸಿರುವ ಕೊಹ್ಲಿ ದಕ್ಷಿಣ ಆಫ್ರಿಕಾ ವೇಗಿಗಳನ್ನು ದಿಟ್ಟವಾಗಿ ಎದುರಿಸಿದರು. ಇದಕ್ಕೂ ಮೊದಲು ಜೆ.ಪಿ ಡ್ಯುಮನಿ (71) ಮತ್ತು ಹಾಶೀಮ್ ಆಮ್ಲಾ (64) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 50 ಓವರುಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 265 ರನ್ನುಗಳ ಸವಾಲಿನ ಮೊತ್ತ ಪೇರಿಸಿತ್ತು. ಜೋಹಾನ್ ಬೋಥಾ ಕೂಡಾ 44 ರನ್ನುಗಳ ಉಪಯುಕ್ತ ನೆರವು ನೀಡಿದರು. ಮೂರು ವಿಕೆಟ್ ಕಿತ್ತ ಯುವರಾಜ್ ಸಿಂಗ್ ಭಾರತದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.