ವಿಶ್ವಕಪ್‌ಗೆ ಹರಿಣಗಳ ತಂಡ; ಗಾಯಾಳು ಕಾಲಿಸ್‌ಗೂ ಸ್ಥಾನ
ಕೇಪ್‌ಟೌನ್ , ಗುರುವಾರ, 20 ಜನವರಿ 2011 (13:25 IST)
ಏಷ್ಯಾ ಉಪಖಂಡದಲ್ಲಿ ನಡೆಯಲಿರುವ ಪ್ರತಿಷ್ಠಿತ ಏಕದಿನ ವಿಶ್ವಕಪ್‌ಗಾಗಿನ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ಗಾಯಾಳು ಬ್ಯಾಟ್ಸ್‌ಮನ್ ಜಾಕ್ವಾಸ್ ಕಾಲಿಸ್ ಮತ್ತು ಪಾಕಿಸ್ತಾನ ಮೂಲದ ಸ್ಪಿನ್ನರ್ ಇಮ್ರಾನ್ ತಾಹೀರ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 15
ಮಂದಿ ಆಟಗಾರರ ಬಳಗವನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಘೋಷಿಸಿದ್ದು, ಮಹಾಸಮರದ ವೇಳೆಗೆ ಹಿರಿಯ ಅನುಭವಿ ಆಲ್‌ರೌಂಡರ್ ಆಟಗಾರ ಕಾಲಿಸ್ ದೈಹಿಕ ಕ್ಷಮತೆ ಮರಳಿ ಪಡೆಯುವ ಭರವಸೆ ಹೊಂದಿದೆ. ಗಾಯದಿಂದಾಗಿ ಭಾರತದ ವಿರುದ್ಧದ ಏಕದಿನ ಸರಣಿಯಿಂದ ಕಾಲಿಸ್ ಹೊರಗುಳಿದಿದ್ದಾರೆ. ಆದರೆ ತಂಡದ ಪ್ರಮುಖ ಆಟಗಾರರಾಗಿರುವ ಕಾಲಿಸ್ ಫಿಟ್‌ನೆಸ್ ಮರಳಿ ಪಡೆಯುವ ವಿಶ್ವಾಸ ಹೊಂದಿದ್ದಾರೆ. ಆದರೆ ವಿಕೆಟ್ ಕೀಪರ್ ಮಾರ್ಕ್ ಬೌಚರ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಭಾರತದ ವಿರುದ್ಧದ ಮೂರನೇ ಪಂದ್ಯದಲ್ಲಿ ಆಡುವ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡಿದ್ದ ಫಾಫ್ ಡು ಪ್ಲೆಸ್ಸಿಸ್ ಮತ್ತು ಪಾಕಿಸ್ತಾನ ಮೂಲದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಂಡ ಇಂತಿದೆ: ಗ್ರೇಮ್ ಸ್ಮಿತ್ (ನಾಯಕ), ಹಾಶೀಮ್ ಆಮ್ಲಾ, ಜೋಹಾನ್ ಬೋಥಾ, ಎಬಿ ಡಿ ವಿಲಿಯರ್ಸ್, ಜೆ.ಪಿ. ಡ್ಯುಮನಿ, ಫಾಫ್ ಡು ಪ್ಲೆಸ್ಸಿಸ್, ಕಾಲಿನ್ ಇಂಗ್ರಾಮ್, ಜಾಕ್ವಾಸ್ ಕಾಲಿಸ್, ಮೊರ್ನೆ ಮೊರ್ಕೆಲ್, ವೇಯ್ನ್ ಪಾರ್ನೆಲ್, ರಾಬಿನ್ ಪೀಟರ್‌ಸನ್, ಡೇಲ್ ಸ್ಟೈನ್, ಇಮ್ರಾನ್ ತಾಹೀರ್, ಲೊನ್ವಬೊ ತ್ಸೊತ್ಸೊಬೆ ಮತ್ತು ಮೊರ್ನೆ ವಾನ್ ಡಬ್ಲ್ಯುವೈಕೆ.ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ