Select Your Language

Notifications

webdunia
webdunia
webdunia
webdunia

3ನೇ ಏಕದಿನ; ತಂಡದ ಇನ್ನಿಂಗ್ಸ್ ಆರಂಭಿಸಲಿರುವ ರೋಹಿತ್

3ನೇ ಏಕದಿನ; ತಂಡದ ಇನ್ನಿಂಗ್ಸ್ ಆರಂಭಿಸಲಿರುವ ರೋಹಿತ್
ಕೇಪ್‌ಟೌನ್ , ಮಂಗಳವಾರ, 18 ಜನವರಿ 2011 (18:17 IST)
ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿರುವ ಆತಿಥೇಯ ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ಸ್ ಸ್ಮಿತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ತಂಡದ ಪ್ರಮುಖ ಆಟಗಾರರು ಗಾಯದಿಂದಾಗಿ ಸರಣಿಯನ್ನು ಕಳೆದುಕೊಂಡಿರುವುದು ಟೀಮ್ ಇಂಡಿಯಾದ ಹಿನ್ನೆಡೆಗೆ ಕಾರಣವಾಗಿದೆ. ಗಾಯದ ಸಮಸ್ಯೆಗೆ ತುತ್ತಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ಮತ್ತು ಪ್ರವೀಣ್ ಕುಮಾರ್ ಇದೀಗಲೇ ಸರಣಿಯಿಂದ ನಿರ್ಗಮಿಸಿದ್ದಾರೆ.

ಭಾರತ-ದಕ್ಷಿಣ ಆಫ್ರಿಕಾ 3ನೇ ಏಕದಿನ; ಕನ್ನಡ ಲೈವ್ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ...

ಇದರಿಂದಾಗಿ ಮುರಳಿ ವಿಜಯ್ ಜತೆ ರೋಹಿತ್ ಶರ್ಮಾ ತಂಡದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಹೀಗಾಗಿ ಅಮೋಘ ಫಾರ್ಮ್ ಕಂಡುಕೊಂಡಿರುವ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿಯೇ ಉಳಿದುಕೊಳ್ಳಲಿದ್ದಾರೆ.

ಯೂಸುಫ್ ಪಠಾಣ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಎರಡನೇ ಪಂದ್ಯದ ಗೆಲುವಿನ ತಂಡವನ್ನು ತಂಡವನ್ನು ಉಳಿಸಿಕೊಳ್ಳಲಾಗಿದೆ. ಎರಡನೇ ಏಕದಿನವನ್ನು ಒಂದು ರನ್ನಿನಿಂದ ರೋಚಕವಾಗಿ ಗೆದ್ದುಕೊಂಡಿದ್ದ ಟೀಮ್ ಇಂಡಿಯಾ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿತ್ತು.

ಮತ್ತೊಂದೆಡೆ ಆತಿಥೇಯ ದಕ್ಷಿಣ ಆಫ್ರಿಕಾ ಪರ ಫಾವ್ ಡು ಪ್ಲೆಸ್ಸಿಸ್ ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆಡುವ ಬಳಗ...

ಭಾರತ: ಮುರಳಿ ವಿಜಯ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ (ನಾಯಕ, ವಿಕೆಟ್ ಕೀಪರ್), ಸುರೇಶ್ ರೈನಾ, ಯೂಸುಫ್ ಪಠಾಣ್, ಹರಭಜನ್ ಸಿಂಗ್, ಜಹೀರ್ ಖಾನ್, ಆಶಿಶ್ ನೆಹ್ರಾ ಮತ್ತು ಮುನಾಫ್ ಪಟೇಲ್

ದಕ್ಷಿಣ ಆಫ್ರಿಕಾ: ಗ್ರೇಮ್ ಸ್ಮಿತ್ (ನಾಯಕ), ಹಾಶೀಮ್ ಆಮ್ಲಾ, ಕಾಲಿನ್ ಇಂಗ್ರಾಮ್, ಅಬ್ರಹಾಂ ಡಿ ವಿಲಿಯರ್ಸ್ (ವಿಕೆಟ್ ಕೀಪರ್), ಜೆ.ಪಿ. ಡ್ಯುಮಿನಿ, ಫಾವ್ ಡು ಫ್ಲೆಸ್ಸಿಸ್, ಜೋಹಾನ್ ಬೋಥಾ, ವೇಯ್ನ್ ಪಾರ್ನೆಲ್, ಡೇಲ್ ಸ್ಟೈನ್, ಮೊರ್ನೆ ಮೊರ್ಕೆಲ್ ಮತ್ತು ಲೊನ್ವೆಬೊ ತ್ಸೊತ್ಸೊಬೆ.

Share this Story:

Follow Webdunia kannada